ಪಾಕಿಸ್ತಾನಕ್ಕೆ ಕಾಶ್ಮೀರ ಆಫರ್ ಮಾಡಿದ ಕಾಟ್ಜು ವಿರುದ್ಧ ಕೇಸ್

Posted By:
Subscribe to Oneindia Kannada

ಪಾಟ್ನಾ, ಸೆ.29: ಪಾಕಿಸ್ತಾನಕ್ಕೆ ಕಾಶ್ಮೀರ ಆಫರ್ ಮಾಡಿ ಜತೆಗೆ ಬೇಕಾದರೆ ಬಿಹಾರವನ್ನು ತೆಗೆದುಕೊಳ್ಳಿ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದ ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ವಿರುದ್ಧ ದೇಶದ್ರೋಹ ಪ್ರಕರಣವನ್ನು ಪಾಟ್ನಾ ಪೊಲೀಸರು ದಾಖಲಿಸಿದ್ದಾರೆ.

ಕಾಟ್ಜು ವಿರುದ್ಧ ಜೆಡಿಯು ಶಾಸಕರೊಬ್ಬರು ನೀಡಿದ ದೂರಿನ ಅನ್ವಯ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ. ಕಾಟ್ಜು ವಿರುದ್ಧ ಐಪಿಸಿಯ ಸೆ.124-ಎ(ದೇಶದ್ರೋಹ) ಹಾಗು ಇತರ ಸೆಕ್ಷನ್‌ಗಳನ್ವಯ ಪ್ರಕರಣ ದಾಖಲಾಗಿಸಿದೆಯೆಂದು ಶಾಸ್ತ್ರಿನಗರ ಪೊಲೀಸ್ ಠಾಣೆಯ ಅಧಿಕಾರಿ ಬೀರೇಂದ್ರ ಪ್ರತಾಪ್ ತಿಳಿಸಿದ್ದಾರೆ.

Former SC Judge Katju booked on sedition charge by Patna Police

ಕಾಟ್ಜು ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮತ್ತೊಂದು ದೂರು ದಾಖಲಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಡಿದ ಟೀಕೆಗಳಿಗೆ ಲೇವಡಿ ಉತ್ತರ ನೀಡಿ ಫೇಸ್ ಬುಕ್ ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದರು.

"I suggest Biharis should take their complaint against me to the UN. When 'cheer haran' of Draupadi was being done, she appealed to Lord Krishna to save her honour, ಎಂದು ಫೇಸ್ ಬುಕ್ ನಲ್ಲಿ ಹಾಕಿದ್ದರು.

ಮತ್ತೊಂದು ಪೋಸ್ಟ್ ನಲ್ಲಿ Nitish Kumar says that I regard myself as the 'mai baap' of Bihar. No Nitishji, I am not the 'mai baap' of Biharis but their Shakuni Mama ಎಂದಿದ್ದರು. ಈ ಎರಡು ಪೋಸ್ಟ್ ಗಳ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಜೆಡಿಯು ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ವಕ್ತಾರ ನೀರಜ್ ಕುಮಾರ್, ದೇಶದ್ರೋಹ ಆರೋಪದಲ್ಲಿ ಕಾಟ್ಜು ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇನ್ನೊಂದೆಡೆ ವಕೀಲ ಅರವಿಂದ ಕುಮಾರ್ ಎಂಬವರು ಕಾಟ್ಜು ವಿರುದ್ಧ ಪಾಟ್ನಾದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಓಂ ಪ್ರಕಾಶ್‌ರ ನ್ಯಾಯಾಲಯದಲ್ಲಿ ದೂರೊಂದನ್ನು ದಾಖಲಿಸಿದ್ದಾರೆ. ಒಟ್ಟಾರೆ, ಕಾಟ್ಜು ಅವರ ವಿರುದ್ಧಾ ಐಸಿಸಿ ಸೆಕ್ಷನ್ 124(ಎ), 500, 501 ಹಾಗೂ 505 ಅನ್ವಯ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Supreme Court judge Markandey Katju has been booked on sedition charge by Patna Police after a complaint by a ruling JD(U) legislator citing his Facebook post that Kashmir should be offered to Pakistan
Please Wait while comments are loading...