ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ 'ಅಜಾತಶತ್ರು' ವಾಜಪೇಯಿ
Recommended Video

ನವದೆಹಲಿ, ಆಗಸ್ಟ್ 16: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಅವರು ದೆಹಲಿಯ ಏಮ್ಸ್(All India Institutes of Medical Sciences Read) ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು.
ಸಂಜೆ 5:05 ಕ್ಕೆ ಅವರು ಅಸ್ತಂಗತರಾಗಿದ್ದಾರೆಂದು ಏಮ್ಸ್ ವೈದ್ಯರು ಖಚಿತಪಡಿಸಿದ್ದಾರೆ.
93 ವರ್ಷದ ವಾಜಪೇಯಿ(25.12.1924-16.08.2018) ಅವರು ಮಧುಮೇಹದಿಂದ ಬಳಲುತ್ತಿದ್ದರು. ಅವರ ಒಂದು ಮೂತ್ರಪಿಂಡ ಮಾತ್ರ ಕೆಲಸ ಮಾಡುತ್ತಿತ್ತು. 2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು, ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ.

ಜೂನ್ 11 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕಳೆದ 24 ಗಂಟೆಗಳಿಂದ ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.

1999 ರಿಂದ 2004 ವರೆಗೆ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದರ ಪ್ರಧಾನಿಯಾಗಿ ಐದು ವರ್ಷಗಳನ್ನು ಪೂರೈಸಿದ ಕೀರ್ತಿಗೆ ಪಾತ್ರರಾಗಿದ್ದವರು ವಾಜಪೇಯಿ. ಅವರಿಗೆ 2015 ರಲ್ಲಿ ನರೇಂದ್ರ ಮೋದಿ ಸರ್ಕಾರ, ಭಾರತದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ'ವನ್ನು ನೀಡಿ ಗೌರವಿಸಿತು.
ಭಾರತ ರತ್ನ ವಾಜಪೇಯಿ ಅವರು ಮೂರು ಬಾರಿ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಪೋಕ್ರಾನ್, ಕಾರ್ಗಿಲ್ ಯುದ್ಧ, ಸಂಸತ್ ಮೇಲಿನ ದಾಳಿ, ಗೋಧ್ರಾ ಗಲಭೆಯಂಥ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಪ್ರಧಾನಿಯಾಗಿ ಅವರು ನಿರ್ವಹಿಸಿದ ಪಾತ್ರವನ್ನು ಜಗತ್ತೇ ಕೊಂಡಾಡಿತ್ತು.












Click it and Unblock the Notifications