ಉಗ್ರರ ಗುಂಡಿಗೆ ಪಿಡಿಪಿ ಮಾಜಿ ನಾಯಕ ಗುಲಾಂ ನಬಿ ಪಟೇಲ್ ಬಲಿ
ಶ್ರೀನಗರ, ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ಪಿಡಿಪಿಯ ಮಾಜಿ ನಾಯಕ ಗುಲಾಂ ನಬಿ ಪಟೇಲ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅವರು ತಮ್ಮ ಸ್ಕಾರ್ಪಿಯೊ ಕಾರ್‌ನಲ್ಲಿ ರಾಜಪುರ ಚೌಕದ ಬಳಿ ಸಾಗುತ್ತಿದ್ದಾಗ ದಾಳಿ ನಡೆಸಿದ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದಾರೆ.
ಗುಲಾಂ ನಬಿ ಪಟೇಲ್ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಪಿಡಿಪಿಯ ಪುಲ್ವಾಮಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪಟೇಲ್ ಕಳೆದ ವರ್ಷ ಕಾರ್ಯ ನಿರ್ವಹಿಸಿದ್ದರು. ಅವರಿಗೆ ಹಿಂದಿನಿಂದಲೂ ಜೀವ ಬೆದರಿಕೆ ಇತ್ತು.
Spot Visuals from Pulwama's Rajpora where terrorists fired upon former PDP leader Ghulam Nabi Patel. He was coming to Pulwama from Yader. pic.twitter.com/wPcyOXFllM
— ANI (@ANI) 25 April 2018
ಪಟೇಲ್ ಅವರ ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿ ಕೂಡ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ಉಗ್ರರು ಕೂಡಲೇ ಪರಾರಿಯಾಗಿದ್ದಾರೆ.
ಪಟೇಲ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪುಲ್ವಾಮಾ ದಕ್ಷಿಣ ಕಾಶ್ಮೀರದ ಅನಂತನಾಗ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇದು ಮೆಹಬೂಬಾ ಮುಫ್ತಿ ಅವರ ಕುಟುಂಬದ ಮೂಲ ಊರು.












Click it and Unblock the Notifications