'ಪಿಒಕೆಗೆ ಹೆಜ್ಜೆಯಿಡುವ ಮುನ್ನ ಶ್ರೀನಗರದಲ್ಲಿ ದೇಶದ ಧ್ವಜ ಹಾರಿಸಿ'

Posted By:
Subscribe to Oneindia Kannada

ಶ್ರೀನಗರ್, ನವೆಂಬರ್ 27: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಜ್ಜೆ ಇಡುವ ಮೊದಲು ಶ್ರೀನಗರದ ಲಾಲ್ ಚೌಕದಲ್ಲಿ ಭಾರತದ ಧ್ವಜ ಹಾರಿಸಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಕ್ ನಿಂದ ಪಿಒಕೆ ಕಸಿದುಕೊಳ್ಳುವುದು ಎಷ್ಟರ ಕೆಲಸ: ಕೇಂದ್ರ ಸಚಿವ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವುದಾಗಿ ಮಾತನಾಡುತ್ತಾರೆ. ನಾನವರಿಗೆ ಹೇಳ್ತೀನಿ: ಮೊದಲಿ ಶ್ರೀನಗರದ ಲಾಲ್ ಚೌಕದಲ್ಲಿ ದೇಶದ ಧ್ವಜ ಹಾರಿಸಿ. ಅದನ್ನೇ ಅವರಿಂದ ಮಾಡಲು ಸಾಧ್ಯವಿಲ್ಲ ಮತ್ತು ಅವರು ಪಾಕ್ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

Forget PoK, raise Indian flag in Srinagar first: Farooq Abdullah

ಪಾಕಿಸ್ತಾನದ ಆಡಳಿತದಲ್ಲಿರುವ ಕಾಶ್ಮೀರದ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲ್ಲ. ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಅದೆಷ್ಟೇ ಯುದ್ಧಗಳಾದರೂ ಇಷ್ಟೇ. ಈ ಭಾಗದಲ್ಲಿ ಬದಲಾವಣೆಯ ಪರ್ವ ಕಾಣಿಸಿಕೊಳ್ಳಬೇಕಿದ್ದರೆ ಪಾಕಿಸ್ತಾನದ ಜತೆಗಿನ ಶಾಂತಿ ಮಾತುಕತೆಯಿಂದ ಹಾಗೂ ನಂಬಿಕೆ ಬೆಳೆಸುವುದರಿಂದ ಮಾತ್ರ ಸಾಧ್ಯ. ಈ ಬಗ್ಗೆ ಕೇಂದ್ರ ಸರಕಾರ ಸ್ಪಂದಿಸಬೇಕು ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After his 'PaK belongs to Pakistan' remark, former Jammu and Kashmir Chief Minister and National Conference chief Farooq Abdullah has made another controversial statement saying, raise Indian flag in Srinagar first.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ