ಫೋರ್ಬ್ಸ್, ದೇಶದ 100 ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ನಮ್ಮವರಿದ್ದಾರಾ?

Posted By:
Subscribe to Oneindia Kannada

ಫೋರ್ಬ್ಸ್ ಮ್ಯಾಗಜೀನ್ ಪ್ರಸಕ್ತ ವರ್ಷ ಅಂದರೆ 2015ರಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಭಾರತದ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಸಿನಿಮಾ ನಟರು, ಟಿವಿ ಕಲಾವಿದರು ಮತ್ತು ಕ್ರಿಕೆಟ್ ಆಟಗಾರರು ಎಂದಿನಂತೆ ಸ್ಥಾನ ಪಡೆದಿದ್ದಾರೆ. ಬಿಡುಗಡೆಯಾದ ಟಾಪ್ 100 ಪಟ್ಟಿಯಲ್ಲಿ ಯಾವ ಕನ್ನಡಿಗ ಸೆಲೆಬ್ರಿಟಿಗಳು ಇಲ್ಲದಿದ್ದರೂ ಕರ್ನಾಟಕ ಮೂಲದ ಎಸ್ ಎಸ್ ರಾಜಮೌಳಿ, ದೀಪಿಕಾ ಪಡುಕೋಣೆ ಸ್ಥಾನ ಪಡೆದಿರುವುದು ವಿಶೇಷ.

ಇದಲ್ಲದೇ, ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಬಾಹುಬಲಿ ನಟ ಪ್ರಭಾಸ್, ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ತಮಿಳು ನಟ ಧನುಸ್ ಸ್ಥಾನ ಪಡೆದಿದ್ದಾರೆ. (ಫೋರ್ಬ್ಸ್ ವಿಶ್ವದ ಪ್ರಭಾವಿ ವ್ಯಕ್ತಿಗಳ ಟಾಪ್ 10 ಪಟ್ಟಿ)

ಹೋದ ವರ್ಷದ ಲಿಸ್ಟಿಗೆ ಹೋಲಿಸಿದರೆ ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮತ್ತು ನಿರ್ದೇಶಕ ಎ ಆರ್ ಮುರುಗದಾಸ್ ಅವರಿಗೆ ಕಳೆದ ವರ್ಷದಲ್ಲಿದ್ದ ಸ್ಥಾನ ಉಳಿಸಿಕೊಳ್ಳಲಾಗಲಿಲ್ಲ.

ಪಟ್ಟಿಯಲ್ಲಿರುವ ಟಾಪ್ ಟೆನ್ ಸೆಲೆಬ್ರಿಟಿಗಳು ಯಾರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಶಾರೂಖ್ ಖಾನ್

ಶಾರೂಖ್ ಖಾನ್

ಕಿರುತೆರೆಯ ಮೂಲಕ ಬಣ್ಣದ ಲೋಕ ಆರಂಭಿಸಿ, ಈಗ ಬಾಲಿವುಡ್ ಬಾದಶಾ ಮಟ್ಟಕ್ಕೆ ಬೆಳೆದಿರುವ ಶಾರೂಖ್ ಖಾನ್, ನೂರು ಜನರ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ರೆಡ್ ಚಿಲ್ಲಿ ಎಂಟರ್ಟೈನ್ಮೆಂಟ್ ಸಂಸ್ಥೆಯ ಮಾಲೀಕರೂ ಆಗಿರುವ ಶಾರೂಖ್ ಅವರ ಆದಾಯ 257.50 ಕೋಟಿ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ನಿನ್ನೆಮೊನ್ನೆಯಷ್ಟೇ ಗುದ್ದೋಡು ಪ್ರಕರಣದಿಂದ ನಿಟ್ಟುಸಿರು ಬಿಟ್ಟ ಸಲ್ಮಾನ್ ಖಾನ್ ಒಂದನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಇವರ ಆದಾಯ 202.75 ಕೋಟಿ.

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್

ಭಾರತೀಯ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. 112 ಕೋಟಿ ರೂಪಾಯಿ ಬಚ್ಚನ್ ಅವರ ಅಂದಾಜು ಗಳಿಕೆ.

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

ಕ್ರಿಕೆಟಿಗ ಎಂ ಎಸ್ ಧೋನಿ ನಾಲ್ಕನೇ ಸ್ಥಾನ ಉಳಿಸಿಕೊಂಡಿದ್ದಾರೆ. 2015ರಲ್ಲಿ ಇವರ ಆದಾಯ 119.33 ಕೋಟಿ.

ಅಮೀರ್ ಖಾನ್

ಅಮೀರ್ ಖಾನ್

ಬಾಲಿವುಡ್ ಚಿತ್ರೋದ್ಯಮದ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಮೊದಲನೇ ಬಾರಿಗೆ ಅಮೀರ್ ಖಾನ್ ಐದನೇ ಸ್ಥಾನದೊಳಗೆ ಎಂಟ್ರಿ ಪಡೆದಿರುವುದು, ಥ್ಯಾಂಕ್ಸ್ ಟು 'ಪಿಕೆ'ಸಿನಿಮಾ. ಅಮೀರ್ ಗಳಿಗೆ 104.25 ಕೋಟಿ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ಬಾಲಿವುಡ್ ರಂಗದ ಮತ್ತೊಬ್ಬ ಖ್ಯಾತ ನಟ, ಬಾಕ್ಸಾಫೀಸ್ ಕಿಂಗ್ ಅಕ್ಷಯ್ ಕುಮಾರ್ 127.83 ಕೋಟಿ ಗಳಿಸುವ ಮೂಲಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ನಾಯಕ ಮತ್ತು ವೃತ್ತಿ ಬದುಕಿನ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಗಳಿಕೆ 104.78 ಕೋಟಿ ರೂಪಾಯಿ.

ಹೃತಿಕ್ ರೋಷನ್

ಹೃತಿಕ್ ರೋಷನ್

ಕ್ರಿಷ್ 1,2,3 ಹೀರೋ ಹೃತಿಕ್ ರೋಷನ್ 74.50 ಕೋಟಿ ರೂಪಾಯಿ ಗಳಿಕೆ ಕಾಣುವ ಮೂಲಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ಗುಳಿಕೆನ್ನೆ ಚೆಲುವೆ ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಈಕೆಯ ಗಳಿಗೆ 59 ಕೋಟಿ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಫೋರ್ಬ್ಸ್ ಬಿಡುಗಡೆ ಮಾಡಿದ ನೂರು ಶ್ರೀಮಂತರ ಪಟ್ಟಿಯ ಟಾಪ್ ಟೆನ್ ಪಟ್ಟಿಯ ಹತ್ತನೇ ಸ್ಥಾನದಲ್ಲಿದ್ದಾರೆ ಸಚಿನ್ ತೆಂಡೂಲ್ಕರ್. ಇವರ ಗಳಿಗೆ ನಲವತ್ತು ಕೋಟಿ.

ಮಿಕ್ಕ ಪ್ರಮುಖರು

ಮಿಕ್ಕ ಪ್ರಮುಖರು

ಆಲಿಯಾ ಭಟ್, ಮಾಧುರಿ ದೀಕ್ಷಿತ್ ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ತಮಿಳು ನಟ ಧನುಶ್ (37ನೇ ಸ್ಥಾನ), ರೋಹಿತ್ ಶರ್ಮಾ (12ನೇ ಸ್ಥಾನ) ಮತ್ತು ಅಲ್ಲು ಅರ್ಜುನ್ ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shah Rukh Khan is the country’s top 100 richest celebrity once more, according to business magazine Forbes India report 2015. Salman Khan, dropped to No. 2 this year, and Amitabh Bachchan slipped to No.3 (from No.2 last year) while cricketer Mahendra Singh Dhoni maintains his rank at No 4.
Please Wait while comments are loading...