ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಗೆ ಅತ್ಯಾಧುನಿಕ ಹೆಲಿಕಾಪ್ಟರ್ ನೀಡಲಿರುವ ಬೋಯಿಂಗ್

ಭಾರತೀಯ ಸೇನೆಗೆ ಅಪಾಚಿ ಹೆಲಿಕಾಪ್ಟರ್. ಅಮೆರಿಕದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಕಡೆಯಿಂದ ಪೂರೈಕೆ.

|
Google Oneindia Kannada News

ನವದೆಹಲಿ, ಆಗಸ್ಟ್ 17: ಭಾರತೀಯ ಸೇನೆಗೆ ಅಮೆರಿಕದ ಸೇನೆಯು ಬಳಸುವ ಅತ್ಯಾಧುನಿಕ ಹೆಲಿಕಾಪ್ಟರ್ ಗಳು ಇನ್ನು ಕೆಲವೇ ವರ್ಷಗಳಲ್ಲಿ ಸೇರ್ಪಡೆಗೊಳ್ಳಲಿವೆ.

ಅಪಾಚಿ ಮಾದರಿಯ ಹೆಲಿಕಾಪ್ಟರ್ ಗಳು ಇವಾಗಿದ್ದು, ಅಮೆರಿಕದ ಪ್ರತಿಷ್ಠಿತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್, ಇದನ್ನು ತಯಾರಿಸಿದೆ. ಪ್ರತಿ ಹೆಲಿಕಾಪ್ಟರ್ ನ ಬೆಲೆ 4,168 ಕೋಟಿ ರು. ಎಂದು ಭಾರತೀಯ ಸೇನೆ ಹೇಳಿದೆ.

For First Time, Army To Get Its Own Attack Helicopters, Boeing Apaches

ಆದರೆ, ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವುದು 2021ರಲ್ಲಿ. ಈಗ ಅವುಗಳ ತಯಾರಿಯು ಆರಂಭವಾಗಲಿದೆ ಎಂದು ಹೇಳಲಾಗಿದೆ.

ಗುರುವಾರ, ಈ ಕುರಿತಂತೆ ಬೋಯಿಂಗ್ ವಿಮಾನ ಸಂಸ್ಥೆ ಹಾಗೂ ಭಾರತ ಸರ್ಕಾರದ ನಡುವೆ ಒಪ್ಪಂದವೇರ್ಪಟ್ಟಿದೆ. ಈಗಾಗಲೇ ಭಾರತೀಯ ವಾಯು ಸೇನೆಯು 22 ಅಪಾಚಿ ಹೆಲಿಕಾಪ್ಟರ್ ಗಳನ್ನು ಪಡೆಯಲಿದೆ. 2015ರಲ್ಲೇ ಈ ಬಗ್ಗೆ ಬೋಯಿಂಗ್ ಸಂಸ್ಥೆಯ ಜತೆಗೆ ವಾಯು ಸೇನೆಯು ಒಪ್ಪಂದ ಮಾಡಿಕೊಂಡಿತ್ತು.

English summary
The army will buy six US built Apache attack helicopters within the next six months in a deal worth about Rs. 4,170 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X