• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ, ಬ್ರಿಟನ್‌ ವಿಮಾನಯಾನ ಜನವರಿ 8 ರಿಂದ ಪುನರಾರಂಭ

|

ನವದೆಹಲಿ, ಜನವರಿ 01: ಕೋವಿಡ್-19 ಹೊಸ ವೈರಸ್ ಕಾರಣ, ಬ್ರಿಟನ್‌ಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವಿಮಾನ ಸೇವೆಯು ಜನವರಿ 8ರಿಂದ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಚೀನಾ ಪ್ರಯಾಣಿಕರನ್ನು ಕರೆತರಬೇಡಿ: ವಿಮಾನಯಾನ ಸಂಸ್ಥೆಗಳಿಗೆ ಭಾರತ ಸರ್ಕಾರದ ಸೂಚನೆ

ಶುಕ್ರವಾರ ಟ್ವೀಟ್ ಮಾಡಿರುವ ಸಚಿವರು ಭಾರತ ಮತ್ತು ಬ್ರಿಟನ್ ವಿಮಾನಯಾನ ಸೇವೆ ಮೇಲಿದ್ದ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಿದ್ದು, ಜನವರಿ 8ರಿಂದ ಸೀಮಿತ ರೀತಿಯಲ್ಲಿ ಕಾರ್ಯಾಚರಣೆ ಪುನಾರಂಭಿಸುವುದಾಗಿ ತಿಳಿಸಿದ್ದಾರೆ.

ಜನವರಿ 8ರಿಂದ ಜನವರಿ 23ರವರೆಗೆ ವಾರಕ್ಕೆ 15 ವಿಮಾನಯಾನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ನಿಷೇಧ ತೆರವುಗೊಳಿಸುವುದರ ಭಾಗವಾಗಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದ್ರಾಬಾದ್ ನಗರಗಳಿಂದ ಬ್ರಿಟನ್‌ಗೆ ವಿಮಾನಗಳು ಪ್ರಯಾಣಿಸಲಿವೆ.

ಮೊದಲಿಗೆ ಡಿಸೆಂಬರ್ 22, 2020 ರ ಮಧ್ಯರಾತ್ರಿಯಿಂದ(23.59), ಡಿಸೆಂಬರ್ 31, 2020ರವರೆಗೆ (23.59)ರವರೆಗೆ ಇಂಗ್ಲೆಂಡ್‌ನಿಂದ ಬರುವ ಎಲ್ಲಾ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಈ ನಿಷೇಧವನ್ನು ಜನವರಿ 7ರವರೆಗೆ ವಿಸ್ತರಿಸಲಾಗಿತ್ತು.

English summary
It has been decided that flights between India & UK will resume from 8th January, 2021: Union Civil Aviation Minister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X