• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2014: ಕಚಗುಳಿ ಇಟ್ಟ ಮೋದಿ ಪಂಚಿಂಗ್ ಡೈಲಾಗ್ಸ್

By Mahesh
|

ಭಾರತದ ಮಟ್ಟಿಗೆ 2014 ವರ್ಷ ಚುನಾವಣೆಯ ವರ್ಷ. ನರೇಂದ್ರ ಮೋದಿಯ ವರ್ಷ ಎಂದರೆ ತಪ್ಪಾಗಲಾರದು. ಗುಜರಾತಿನ ಯಶಸ್ವಿ ಮುಖ್ಯಮಂತ್ರಿ ಮೋದಿ ಅವರು ಭಾರತದ ಪ್ರಧಾನಿಯಾಗಿ ಯಶಸ್ವಿ ಪಥದತ್ತ ಮುನ್ನಡೆಸುವ ಯತ್ನಿಸಿದ ವರ್ಷ.

ಜಪಾನಿನಲ್ಲಿ ಡ್ರಮ್ ಬಾರಿಸಿದ್ದಿರಬಹುದು, ಹ್ಯೂ ಜಾಕ್ ಮನ್ ಜೊತೆ ಅಮೆರಿಕದಲ್ಲಿ ಭಾಷಣ ಮಾಡಿದ್ದಿರಬಹುದು. ಸಾಮಾಜಿಕ ಜಾಲ ತಾಣದ ಸದುಪಯೋಗ ಪಡೆದುಕೊಂಡಿದ್ದಿರಬಹುದು ಎಲ್ಲದರಲ್ಲೂ ಮೋದಿ ಕ್ಲಿಕ್ ಅದರು. [ಭಾರತ: ಘಟನಾವಳಿಗಳತ್ತ ಒಂದು ಹಿನ್ನೋಟ]

ಮೋದಿ ಎಲ್ಲೆಡೆ ಮಾನ್ಯರಾಗಲು ಮುಖ್ಯವಾಗಿ ಕಾರಣವಾಗಿದ್ದು ಅವರ ಭಾಷಾ ಪ್ರೌಢಿಮೆ ಹಾಗೂ ತಿಳಿ ಹಾಸ್ಯ ಭರಿತ ಮೊನಚು ನುಡಿಗಳು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನರನ್ನು ತಲುಪಿದ್ದು, ವಿಪಕ್ಷಗಳಿಗೆ ಚುಚ್ಚಿದ್ದು ಇದೇ ಮೋದಿಯ ವಾಗ್ಬಾಣಗಳು ಎಂಬುದನ್ನು ಮರೆಯುವಂತಿಲ್ಲ.[ಕರ್ನಾಟಕ : ಪ್ರಮುಖ ಘಟನಾವಳಿಗಳ ಹಿನ್ನೋಟ]

ಮೋದಿ ಭಾಷಣ ಗಂಭೀರವಾಗಿದ್ದರೂ ಹಲವು ಬಾರಿ ಹಾಸ್ಯಮಯವಾಗಿ ಕಚಗುಳಿ ಇಡುವಂತಿರುತ್ತದೆ. ಸಿನಿಮಾ ರಂಗದ ಸಂಭಾಷಣಕಾರರು ಪೆನ್ನು ಪೇಪರ್ ಹಿಡಿದುಕೊಂಡು ಮೋದಿ ಭಾಷಣದ ವೇಳೆ ನುಸುಳುವ ಒನ್ ಲೈನರ್ ಪಂಚ್ ಗಳನ್ನು ಆರಿಸಿ ಬಳಸಿಕೊಳ್ಳಬಹುದು. 2014ರಲ್ಲಿ ಮೋದಿ ನೀಡಿದ ಕೆಲವು ಪಂಚಿಂಗ್ ಡೈಲಾಗ್ ಗಳ ಅಸಮಗ್ರ ಸಂಗ್ರಹ ಇಲ್ಲಿದೆ ಓದಿ...

1. RSVP ಮಾದರಿ

1. RSVP ಮಾದರಿ

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸರಿ ಸುಮಾರು 400ಕ್ಕೂ ಅಧಿಕ ಸಮಾರಂಭಗಳಲ್ಲಿ ಭಾಷಣ ಮಾಡಿದ ಮೋದಿ ಅವರು ಗಾಂಧಿ(ಸೋನಿಯಾ, ರಾಹುಲ್) ಹಾಗೂ ವಾದ್ರಾ ವಿರುದ್ಧ ಹರಿಹಾಯ್ದರು. ಭ್ರಷ್ಟಾಚಾರಕ್ಕೆ ತಕ್ಕ ಪಾಠ ಕಲಿಸಬೇಕೆಂದರು. ಈ ಸಂದರ್ಭದಲ್ಲಿ

An American paper has presented a new model - of having one lakh rupees and converting that to Rs 300 crore in four years. This is the RSVP model - Rahul, Sonia, Vadra and Priyanka." ಎಂದು ಮೋದಿ ಹೇಳಿದ್ದು ಭಾರಿ ಚರ್ಚೆಯಾಯಿತು.

2. ಪಾಕಿಸ್ತಾನಕ್ಕೆ ಎಕೆ 49 ಅಗತ್ಯವಿದೆ

2. ಪಾಕಿಸ್ತಾನಕ್ಕೆ ಎಕೆ 49 ಅಗತ್ಯವಿದೆ

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ತಮ್ಮ ಮಾತಿನ ಮೂಲಕ ಕಾಲೆಳೆದ ಮೋದಿ, ಚುನಾವಣಾ ಭಾಷಣವೊಂದರಲ್ಲಿ ಪಾಕಿಸ್ತಾನದಲ್ಲಿ ಮೂರು AKಗಳು ಭಾರಿ ಫೇಮಸ್, AK47, AK Antony, AK 49 ಎಂದರು. AK 49 ಎಂದು ಅರವಿಂದ್ ಕೇಜ್ರಿವಾಲ್ ರನ್ನು ಸೂಚಿಸುತ್ತಿತ್ತು ಹಾಗೂ ಅವರು ದೆಹಲಿಯಲ್ಲಿ 49 ದಿನಗಳ ಅಧಿಕಾರ ಅವಧಿ ನಂತರ ಸರ್ಕಾರ ವಿಸರ್ಜನೆ ಮಾಡಿದ್ದನ್ನು ಮೋದಿ ಗೇಲಿ ಮಾಡಿದ್ದರು.

3. ರಾಹುಲ್ ಗಾಂಧಿಯನ್ನು ಷೆಹಜಾದೆ ಎಂದ ಮೋದಿ

3. ರಾಹುಲ್ ಗಾಂಧಿಯನ್ನು ಷೆಹಜಾದೆ ಎಂದ ಮೋದಿ

ರಾಹುಲ್ ಗಾಂಧಿ ಹಲವರು ರೀತಿ ಜನ ಗೇಲಿ ಮಾಡಿರಬಹುದು. ಅಮಿತ್ ಶಾ ಕೂಡಾ ಒಮ್ಮೆ ಪಪ್ಪು ಎಂದು ಸಂಬೋಧಿಸಿದ್ದರು. ಈ ವಿಷ್ಯದಲ್ಲಿ ಮೋದಿ ಕೂಡಾ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ಯುವರಾಜ ಎಂದು ಕರೆಯುವುದನ್ನೇ ಗೇಲಿ ಮಾಡಿ ರಾಹುಲ್ ರನ್ನು shezaada(ರಾಜಕುಮಾರ) ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದವರ ಅದೃಷ್ಟವಂತ, ಮೇಡಂಜಿ(ಸೋನಿಯಾ ಗಾಂಧಿ) ಅವರ ಮುದ್ದಿನ ಕೂಸು ಎಂದು ಅನೇಕ ಸಲ ಮೋದಿ ಅವರು ಭಾಷಣಗಳಲ್ಲಿ ಹೇಳಿದ್ದರು.

4. ಸಚಿವರು ಈಗ ಪೆಪ್ಪರ್ ಸ್ಪ್ರೇ ಹಾಕುತ್ತಾರೆ

4. ಸಚಿವರು ಈಗ ಪೆಪ್ಪರ್ ಸ್ಪ್ರೇ ಹಾಕುತ್ತಾರೆ

ಸಂಸತ್ತಿನಲ್ಲಿ ನಡೆದ ಪೆಪ್ಪರ್ ಸ್ಪ್ರೇ ಹಾಕಿದ ಪ್ರಸಂಗಕ್ಕೆ ಉತ್ತರವಾಗಿ ಮೋದಿ ಸಕತ್ ಡೈಲಾಗ್ ಹೊಡೆದಿದ್ದರು. ಕಾಂಗ್ರೆಸ್ ನಾಯಕ ಎಲ್ ರಾಜಗೋಪಾಲ್ ಪೆಪ್ಪರ್ ಸ್ಪ್ರೇ ಬಳಸಿ ಸದನದಲ್ಲಿ ಕೋಲಾಹಾಲ ಉಂಟು ಮಾಡಿದ್ದರು. ನಂತರ ಭಾಷಣವೊಂದರಲ್ಲಿ ಮೋದಿ ಅವರು ಸಚಿವರು ಈ ಮುಂಚೆ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದರು ಈಗ ಪೆಪ್ಪರ್ ಸ್ಪ್ರೇ(ಕಾಳು ಮೆಣಸಿನ ಪುಡಿ) ಹಾಕುತ್ತಿದ್ದಾರೆ ಎಂಥಾ ಕಾಲ ಬಂತಪ್ಪ ಎಂದಿದ್ದರು.

5. ಚಹಾವಾಲ ಪ್ರಧಾನಿಯಾಗಬಾರದೇ?

5. ಚಹಾವಾಲ ಪ್ರಧಾನಿಯಾಗಬಾರದೇ?

ಹೋದ ಕಡೆ ಎಲ್ಲಾ ಚಹಾವಾಲ ಎಂದು ಮೋದಿ ಅವರನ್ನು ಕಾಂಗ್ರೆಸ್ ಅಣಕಿಸುತ್ತಿತ್ತು. ಮಣಿ ಶಂಕರ್ ಅಯ್ಯರ್ ಅವರಂತೂ ಚಹಾವಾಲ ಎಂದು ಸಮಯ ಸಿಕ್ಕಾಗಲೆಲ್ಲ ಮೂದಲಿಸುತ್ತಿದ್ದರು. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಮೋದಿ ಅವರು ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ "Kya chaiwalla kabhi pradhan mantri nahi ban sakata hai ಎಂದು ಪ್ರಶ್ನಿಸಿದರು. ಚಹಾವಾಲ ಕೂಡಾ ಪ್ರಧಾನಿಯಾಗಬಲ್ಲ ಎಂಬುದನ್ನು ನಿರೂಪಿಸಿದರು, ಸಾಧಿಸಿದರು.

6. ಭಾರತ ಹಾವಾಡಿಗರ ದೇಶವಲ್ಲ

6. ಭಾರತ ಹಾವಾಡಿಗರ ದೇಶವಲ್ಲ

ಪ್ರಧಾನಿಯಾದ ಮೇಲೆ ಕೂಡಾ ಮೋದಿ ಅವರು ತಮ್ಮ ವಾಕ್ಪಟುತ್ವವನ್ನು ಮುಂದುವರೆಸಿದರು. ಯುಎಸ್ಎ ನಲ್ಲಿ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಅದ್ಭುತ ಭಾಷಣ ಮಾಡಿದರು. ಭಾರತ ಹಾವಾಡಿಗರ ದೇಶವಲ್ಲ, ಭಾರತದ ಮೌಲ್ಯ ಏನು ಎಂಬುದು ಇನ್ನೂ ತಿಳಿದಿಲ್ಲ. ನಮ್ಮ ಪೂರ್ವಿಕರು ಹಾವುಗಳ ಜೊತೆ ಬೆಳೆದು ಹಾವಾಡಿಗರು ಎನಿಸಿಕೊಂಡಿರಬಹುದು. ಈಗ ನಮ್ಮಲ್ಲಿ ಅನೇಕರು ಮೌಸ್ ಜೊತೆ ಆಟವಾಡುತ್ತಿದ್ದಾರೆ. ಇದರ ಲಾಭ ಅನೇಕ ದೇಶಗಳಿಗೆ ಆಗುತ್ತಿದೆ ಎಂದು ಐಟಿ ಕ್ಷೇತ್ರದ ಸಾಧನೆಯನ್ನು ಎತ್ತಿ ಹಿಡಿದರು.

7. ಮಂಗಳ ಗ್ರಹ ತಲುಪಲು 7ರು / ಕಿ.ಮೀ

7. ಮಂಗಳ ಗ್ರಹ ತಲುಪಲು 7ರು / ಕಿ.ಮೀ

ಅಮೆರಿಕದಲ್ಲಿ ಮಂಗಳಯಾನದ ಹಿರಿಮೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಮಹೋನ್ನತ ಯೋಜನೆ ಇದಾಗಿದೆ. ಅಹಮದಾಬಾದಿನಲ್ಲಿ ಆಟೋರಿಕ್ಷಾ ಮೂಲಕ 1 ಕಿ.ಮೀ ದೂರ ಕ್ರಮಿಸಲು 10 ರು ಖರ್ಚು ಮಾಡಬೇಕಾಗುತ್ತದೆ. ನಾವು ಈಗ 65 ಕೋಟಿ ಕಿ.ಮೀ ದೂರವನ್ನು 7 ರು ಪ್ರತಿ ಕಿ.ಮೀ ವೆಚ್ಚದಲ್ಲಿ ಕ್ರಮಿಸಿದ್ದೇವೆ ಇದೇ ಭಾರತದ ಪ್ರತಿಭೆ ಎಂದರು.

8. ಸ್ಟಾರ್ ವಾರ್ಸ್ ಚಿತ್ರದ ಡೈಲಾಗ್ ಹೊಡೆದ ಮೋದಿ

8. ಸ್ಟಾರ್ ವಾರ್ಸ್ ಚಿತ್ರದ ಡೈಲಾಗ್ ಹೊಡೆದ ಮೋದಿ

ಪ್ರಧಾನಿ ಮೋದಿ ಅವರು ನಟ ಹ್ಯೂ ಜಾಕ್ಮನ್ ಅವರ ಝೊತೆ ಗ್ಲೋಬಲ್ ಸಿಟಿಜನ್ ಕಾನ್ಸರ್ಟ್ ನಲ್ಲಿ ಪಾಲ್ಗೊಂಡು ಮಾಡಿದ ಭಾಷಣ ಯುಎಸ್ ಎನ ಇತರೆಡೆ ಮಾಡಿದ ಭಾಷಣಕ್ಕಿಂತ ವಿಭಿನ್ನವಾಗಿತ್ತು.

"Thank you once again for having me. Thanks in particular to Hugh Jackman. God bless you. May the force be with you." ಎನ್ನುವ ಮೂಲಕ ಹ್ಯೂ ಜಾಕ್ಮನ್ ಜೊತೆ ನಿಂತು ಸ್ಟಾರ್ ವಾರ್ಸ್ ಚಿತ್ರದ ಡೈಲಾಗ್ ಹೇಳಿದ್ದು ಅಮೆರಿಕನ್ನರನ್ನು ಅಚ್ಚರಿಗೆ ದೂಡಿತು.

9. ಅಸ್ಟ್ರೇಲಿಯನ್ನರು ಎಚ್ಚರಿಸಿದ ಮೋದಿ ಹೇಳಿಕೆ

9. ಅಸ್ಟ್ರೇಲಿಯನ್ನರು ಎಚ್ಚರಿಸಿದ ಮೋದಿ ಹೇಳಿಕೆ

"I am the third Head of Government you are listening to this week. I don't know how you are doing this! Maybe, this is Prime Minister Abbott's way of shirtfronting you." ಎಂದು ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೊಟ್ ಅವರು ಎಂಎಚ್ 17 ದುರಂತದ ಸಂದರ್ಭದಲ್ಲಿ ಪುಟಿನ್ ಗೆ ನೀಡಿದ್ದ ಭರವಸೆ ಹೇಳಿಕೆಯಲ್ಲಿ 'shirtfront' ಪದವನ್ನು ಮೋದಿ ಬಳಸಿಕೊಂಡಿದ್ದರು

10. ಸ್ವಚ್ಛ ಭಾರತ ಅಭಿಯಾನ ಹೇಳಿಕೆಗಳು

10. ಸ್ವಚ್ಛ ಭಾರತ ಅಭಿಯಾನ ಹೇಳಿಕೆಗಳು

ಭಾರತವನ್ನು ಕ್ಲೀನ್ ಇಂಡಿಯಾ ಮಾಡಲು ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನ ಆರಂಭಿಸಿ ಕೆಂಪು ಕೋಟೆ ಬಳಿ ಮಾಡಿದ ಭಾಷಣ ಅತ್ಯಂತ ಪರಿಣಾಮಕಾರಿಯಾಗಿತ್ತು. ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿತು. ದೇಶದ ಜನರೆಲ್ಲ ಸ್ವಚ್ಛವಾಗಿರುವ ಸಂಕಲ್ಪ ಕೈಗೊಂಡರೆ ಗಾಂಧೀಜಿ ಕಂಡ ಕನಸು ನನಸಾಗುವ ದಿನ ದೂರಿಲ್ಲ ಎಂದಿದ್ದರು.

"Cleanliness is very big work. Whether our country can not be clean? If one hundred and twenty five crore countrymen decide that they will never spread filthiness, which power in the world has ability to spread filthiness in our cities and villages?"

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2014 can be termed as the 'Year of Narendra Modi' for India. Not only did the country witness the rise of the former Gujarat CM, but he also managed to captivate the attention of the political leaders worldwide. Here are some of Modi's one-liners that made a mark in 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more