ಐದು ರಾಜ್ಯಗಳ ಮತಗಟ್ಟೆ ಸಮೀಕ್ಷೆ ಪ್ರಕಟ: ಯಾವ ಪಕ್ಷಕ್ಕೆ ಎಷ್ಟು?

Written By:
Subscribe to Oneindia Kannada

ಏಪ್ರಿಲ್ 4ರಿಂದ ಆರಂಭವಾದ ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಸೋಮವಾರ (ಮೇ 16) ಮೂರು ರಾಜ್ಯಗಳಲ್ಲಿ (ತಮಿಳುನಾಡು, ಪುದುಚೇರಿ, ಕೇರಳ) ಚುನಾವಣೆ ನಡೆಯುವ ಮೂಲಕ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ

ಚುನಾವಣೆ ಮುಗಿಯುತ್ತಿದ್ದಂತೇ, ವಿವಿಧ ವಾಹಿನಿಗಳ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ತಮಿಳುನಾಡು ಹೊರತು ಪಡಿಸಿ ಉಳಿದ ನಾಲ್ಕು ರಾಜ್ಯಗಳಾದ ಅಸ್ಸಾಂ, ಪುದುಚೇರಿ, ಪಶ್ಚಿಮಬಂಗಾಳ ಮತ್ತು ಕೇರಳದಲ್ಲಿ ಚುನಾವಣಾಪೂರ್ವ ಸಮೀಕ್ಷೆಗೂ, ಎಕ್ಸಿಟ್ ಪೋಲ್ ಫಲಿತಾಂಶಗಳ ನಡುವೆ ಭಾರೀ ಬದಲಾವಣೆ ಕಂಡು ಬರುತ್ತಿಲ್ಲ. (ತಮಿಳುನಾಡಿನಲ್ಲಿ ಫೋಟೋ ಫಿನಿಶ್)

ಕೇರಳ ಮತ್ತು ತಮಿಳುನಾಡಿನಲ್ಲಿ ಎರಡು ಪ್ರಮುಖ ಒಕ್ಕೂಟಗಳ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ, ಉಳಿದ ಮೂರು ರಾಜ್ಯಗಳಲ್ಲಿ ಫಲಿತಾಂಶ ಏಕಪಕ್ಷೀಯವಾಗಬಹುದು ಎನ್ನುವುದು ಸಮೀಕ್ಷೆಯಿಂದ ಹೊರಬಿದ್ದ ಫಲಿತಾಂಶ. (ತಮಿಳುನಾಡು, ಕೇರಳ ಚುನಾವಣಾಪೂರ್ವ ಸಮೀಕ್ಷೆ)

ಗುರುವಾರ (ಮೇ 19) ಈ ಎಲ್ಲಾ ಕುತೂಹಲಕ್ಕೆ ತೆರೆಬೀಳಲಿದೆ. ಐದು ರಾಜ್ಯಗಳ ಅಸೆಂಬ್ಲಿ ಬಲಾಬಲ ಕೆಳಗಿನಂತಿದೆ, ಮಾಧ್ಯಮಗಳು ಪ್ರಕಟಿಸಿರುವ ಫಲಿತಾಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಒಟ್ಟು ಸ್ಥಾನಗಳು:
ಅಸ್ಸಾಂ : 126
ಕೇರಳ : 140
ಪುದುಚೇರಿ: 30
ಪಶ್ಚಿಮ ಬಂಗಾಳ: 294
ತಮಿಳುನಾಡು: 234

ಎನ್ಡಿಟಿವಿ

ಎನ್ಡಿಟಿವಿ ನೀಡಿದ ಮತಗಟ್ಟೆ ಸಮೀಕ್ಷೆ ಹೀಗಿದೆ

ಟೈಮ್ಸ್ ನೌ ಮತ್ತು ಸಿವೋಟರ್

ಟೈಮ್ಸ್ ನೌ ಮತ್ತು ಸಿವೋಟರ್

ಅಸ್ಸಾಂ: ಬಿಜೆಪಿ - 57, ಕಾಂಗ್ರೆಸ್ - 41, ಇತರರು - 28
ತ.ನಾ: ಎಐಡಿಎಂಕೆ - 139 , ಡಿಎಂಕೆ - 78, ಇತರರು - 17
ಕೇರಳ: ಯುಡಿಎಫ್ - 58, ಎಲ್ಡಿಎಫ್ - 78, ಇತರರು - 04
ಪುದುಚೇರಿ: ಡಿಎಂಕೆ - 14, ಎಐಡಿಎಂಕೆ -05 , ಎಐಎನ್ಆರ್ಸಿ- 09
ಪ.ಬ: ಟಿಎಂಸಿ - 167, ಎಡರಂಗ - 120, ಇತರರು - 07

ಟುಡೇಸ್ ಚಾಣಕ್ಯ

ಟುಡೇಸ್ ಚಾಣಕ್ಯ

ಅಸ್ಸಾಂ: ಬಿಜೆಪಿ - 90, ಕಾಂಗ್ರೆಸ್ - 27, ಇತರರು - 09
ತ.ನಾ: ಎಐಡಿಎಂಕೆ - 90 , ಡಿಎಂಕೆ - 140, ಇತರರು -04
ಕೇರಳ: ಯುಡಿಎಫ್ - 57, ಎಲ್ಡಿಎಫ್ -75 , ಇತರರು - 08
ಪ.ಬ: ಟಿಎಂಸಿ - 210, ಎಡರಂಗ - 70, ಇತರರು - 14

ಎಬಿಪಿ ನೀಲ್ಸನ್, ಎಬಿಪಿ ನ್ಯೂಸ್

ಎಬಿಪಿ ನೀಲ್ಸನ್, ಎಬಿಪಿ ನ್ಯೂಸ್

ಅಸ್ಸಾಂ: ಬಿಜೆಪಿ - 81, ಕಾಂಗ್ರೆಸ್ - 33, ಇತರರು - 12
ತ.ನಾ: ಎಐಡಿಎಂಕೆ - 95, ಡಿಎಂಕೆ - 132, ಇತರರು - 7
ಪ.ಬ: ಟಿಎಂಸಿ - 163, ಎಡರಂಗ - 126, ಇತರರು - 05

ನ್ಯೂಸ್ ನೇಶನ್

ನ್ಯೂಸ್ ನೇಶನ್

ಅಸ್ಸಾಂ: ಬಿಜೆಪಿ - 81, ಕಾಂಗ್ರೆಸ್ - 33, ಇತರರು - 12
ತ.ನಾ: ಎಐಡಿಎಂಕೆ - 97, ಡಿಎಂಕೆ - 116, ಇತರರು - 18
ಪ.ಬ: ಟಿಎಂಸಿ - 163, ಎಡರಂಗ - 126, ಇತರರು - 05

ಇಂಡಿಯಾ ಟುಡೇ

ಇಂಡಿಯಾ ಟುಡೇ

ಅಸ್ಸಾಂ: ಬಿಜೆಪಿ - 86, ಕಾಂಗ್ರೆಸ್ - 30, ಇತರರು - 10
ತ.ನಾ: ಎಐಡಿಎಂಕೆ - 95 , ಡಿಎಂಕೆ - 132, ಇತರರು -07
ಕೇರಳ: ಯುಡಿಎಫ್ - 43, ಎಲ್ಡಿಎಫ್ -94 , ಇತರರು - 03
ಪುದುಚೇರಿ: ಡಿಎಂಕೆ - 10-18, ಎಐಡಿಎಂಕೆ -01-09 , ಎಐಎನ್ಆರ್ಸಿ- 05-13
ಪ.ಬ: ಟಿಎಂಸಿ - 243, ಎಡರಂಗ - 45, ಇತರರು - 06

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: A look at exit polls 2016
English summary
Five states assembly election exit poll 2016: Tamil Nadu, Assam, Kerala, Pondychery and West Bengal by various channels.
Please Wait while comments are loading...