ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ಐವರು ಆತ್ಮಹತ್ಯೆ
ಸಂಬಲ್ಪುರ, ನವೆಂಬರ್ 8: ಒಂದೇ ಕುಟುಂಬದ ಐದು ಮಂದಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ನ.7 ರ ರಾತ್ರಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರೈನು ಜೋರಾಗಿ ಬರುತ್ತಿದ್ದ ಸಮಯದಲ್ಲೇ ಕುಟುಂಬದ ಐವರೂ ಒಬ್ಬರ ಹಿಂದೆ ಒಬ್ಬರಂತೆ ರೈಲ್ವೇ ಹಳಿಯಲ್ಲಿ ಓಡಿಹೋಗಿದ್ದಾರೆ. ವೇಗವಾಗಿ ಬರುತ್ತಿದ್ದ ರೈಲು ಐವರ ದೇಹವನ್ನೂ ಸೀಳಿಕೊಂಡು ಹೋಗಿದೆ.

ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications