ಕೃಷಿ ಮಸೂದೆ ವಿರೋಧಿಸಿ ಡಿ.8 ರಂದು ಭಾರತ ಬಂದ್: ಎಡ ಪಕ್ಷಗಳ ಬೆಂಬಲ
ನವದೆಹಲಿ, ಡಿಸೆಂಬರ್ 05: ಕೃಷಿ ಮಸೂದೆ ವಿರೋಧಿಸಿ ಡಿಸೆಂಬರ್ 8 ರಂದು ಕರೆಯಲಾಗಿರುವ ಭಾರತ ಬಂದ್‌ಗೆ ಎಡಪಕ್ಷಗಳು ಬೆಂಬಲ ಸೂಚಿಸಿವೆ.
ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೇಶಾದ್ಯಂತ ರೈತ ಸಂಘಟನೆಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುತ್ತಿವೆ. ಡಿ.8 ರಂದು ಕರೆ ನೀಡಿರುವ ಬಂದ್‌ಗೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಬಂದ್‌ಗೆ ಸಿಪಿಐ(ಎಂ)ಸಿಪಿಐ(ಎಂಎಲ್), ರೆವಲೂಷನರಿ ಸೋಶಿಯಾಲಿಸ್ಟ್ ಪಾರ್ಟಿ ಮತ್ತು ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪಕ್ಷಗಳು ಈ ವಿಷಯ ತಿಳಿಸಿವೆ.

ರೈತರು ಹಾಗೂ ಸರ್ಕಾರದ ನಡುವೆ ಇಂದು(ಡಿ.5) ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಹೊಸ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಮತಷ್ಟು ಬಿಸಿ ಮುಟ್ಟಿಸಲು ಸಜ್ಜಾಗಿದ್ದು, ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಇಂದು ಸಿಂಘು ಗಡಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘಟನೆಗಳ ಮುಖಂಡರು, ಹೊಸ ಕೃಷಿ ಕಾಯಿದೆಗಳ ಬಗ್ಗೆ ನಮಗೆ ತೃಪ್ತಿ ಇಲ್ಲ. ಇತ್ತೀಚಿಗೆ ಜಾರಿಗೆ ತಂದ ಮೂರು ಕಾಯಿದೆಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications