ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ ಮೇಲಿನ ಉದ್ಯೋಗಸ್ಥರ 5 ನಿರೀಕ್ಷೆಗಳು

By Sachhidananda Acharya
|
Google Oneindia Kannada News

Recommended Video

ಕೇಂದ್ರ ಬಜೆಟ್ 2018 : ಉದ್ಯೋಗಸ್ಥರಿಗೆ ಇರುವ 5 ನಿರೀಕ್ಷೆಗಳು | Oneindia Kannada

ನವದೆಹಲಿ, ಜನವರಿ 18: ಹಣಕಾಸು ಸಚಿವ ಅರುಣ್ ಜೇಟ್ಲಿ 2017ರ ಕೇಂದ್ರ ಬಜೆಟ್ ನಲ್ಲಿ ವಾರ್ಷಿಕ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂ. ವರೆಗೆ ಸಂಬಳ ಪಡೆಯುವ ನೌಕರರಿಗೆ ದೊಡ್ಡ ಕೊಡುಗೆ ನೀಡಿದ್ದರು. ವಾರ್ಷಿಕ ರೂ. 2.5 ಲಕ್ಷದಿಂದ 5 ಲಕ್ಷ ರೂಪಾಯಿ ಆದಾಯ ಪಡೆಯುವವರು ಪಾವತಿ ಮಾಡಬೇಕಾಗಿದ್ದ ತೆರಿಗೆ ಪ್ರಮಾಣವನ್ನು ಶೇಕಡಾ 10 ರಿಂದ 5ಕ್ಕೆ ಇಳಿಸಿದ್ದರು.

ಹೀಗಾಗಿ ಈ ಬಾರಿಯೂ ಅರುಣ್ ಜೇಟ್ಲಿಯವರ ಬಜೆಟ್ ಮೇಲೆ ತಿಂಗಳ ವೇತನ ಪಡೆಯುವ ನೌಕರರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಬಜೆಟ್: ಕರ್ನಾಟಕದ ನಿರೀಕ್ಷೆಯ ಹಳಿ ಮೇಲೆ ಜೇಟ್ಲಿ ರೈಲು ಓಡಿಸುವರೇ?ಬಜೆಟ್: ಕರ್ನಾಟಕದ ನಿರೀಕ್ಷೆಯ ಹಳಿ ಮೇಲೆ ಜೇಟ್ಲಿ ರೈಲು ಓಡಿಸುವರೇ?

ವೇತನ ಪಡೆಯುವ ನೌಕರರ ಪ್ರಮುಖ ಐದು ನಿರೀಕ್ಷೆಗಳು ಈ ಕೆಳಗಿನಂತಿವೆ,

ಉದ್ಯೋಗ ಸೃಷ್ಟಿ/ ರಾಷ್ಟ್ರೀಯ ಉದ್ಯೋಗ ನೀತಿ

ಉದ್ಯೋಗ ಸೃಷ್ಟಿ/ ರಾಷ್ಟ್ರೀಯ ಉದ್ಯೋಗ ನೀತಿ

ಉದ್ಯೋಗ ಸೃಷ್ಟಿ ಪ್ರಮಾಣ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟವನ್ನು ತಲುಪಿದ್ದರೆ ನಿರುದ್ಯೋಗ ಪ್ರಮಾಣ ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಹೀಗಾಗಿ ಉದ್ಯೋಗ ಸೃಷ್ಠಿಗೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಪ್ರಮುಖ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಸದ್ಯಕ್ಕೆ ದೇಶದಲ್ಲಿ ರಾಷ್ಟ್ರೀಯ ಉದ್ಯೋಗ ಸೃಷ್ಟಿ ನೀತಿಗಳಿಲ್ಲ ಅಥವಾ ಉದ್ಯೋಗ ಸೃಷ್ಟಿಯ ಬಗ್ಗೆ ಯಾವುದೇ ನೀಲನಕ್ಷೆಗಳು ಸರಕಾರದ ಮುಂದಿಲ್ಲ. ಆದರೆ ಪ್ರತೀ ತಿಂಗಳು ದೇಶದ ಉದ್ಯೋಗ ಮಾರುಕಟ್ಟೆಗೆ 1 ಕೋಟಿ ಯುವ ಜನಾಂಗ ಸೇರ್ಪಡೆಯಾಗುತ್ತಿದ್ದು, ಉದ್ಯೋಗ ಸೃಷ್ಟಿ ತುರ್ತು ಅಗತ್ಯವಾಗಿದೆ.

ಆದಾಯ ತೆರಿಗೆ ಮಿತಿ ಏರಿಕೆ

ಆದಾಯ ತೆರಿಗೆ ಮಿತಿ ಏರಿಕೆ

ಆದಾಯ ತೆರಿಗೆ ಮಿತಿಯನ್ನು ಹಾಲಿ ರೂ. 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡಬಹುದು ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ. ಒಂದೊಮ್ಮೆ ಈ ಮಿತಿ 5 ಲಕ್ಷಕ್ಕೂ ಏರಿಕೆಯಾಗಬಹುದು ಎಂದು ಜನರು ಕಾಯುತ್ತಿದ್ದಾರೆ. ಆದಾಯ ಮಿತಿ ಏರಿಕೆಯಾದಲ್ಲಿ ಮಧ್ಯಮ ಆದಾಯ ಹೊಂದಿರುವ ಜನರಿಗೆ ಸಹಾಯಕವಾಗಲಿದೆ.

ಕನಿಷ್ಠ ವೇತನ

ಕನಿಷ್ಠ ವೇತನ

ದೇಶದ ಶೇಕಡಾ 90ರಷ್ಟು ಜನರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಹೀಗಾಗಿ ಕನಿಷ್ಟ ವೇತನ ಏರಿಕೆಯಿಂದ ಕಾರ್ಮಿಕರಿಗೆ ಲಾಭವಾಗುವುದರ ಜತೆಗೆ ದೇಶದ ಆರ್ಥಿಕತೆಗೂ ಸಹಾಯವಾಗಲಿದೆ. ಹಾಗಾಗಿ ಕನಿಷ್ಠ ಕೂಲಿ ಏರಿಕೆಯ ನಿರೀಕ್ಷೆಯಲ್ಲಿ ಕಾರ್ಮಿಕರಿದ್ದಾರೆ.

ಗರಿಷ್ಠ ತೆರಿಗೆ ವ್ಯಾಪ್ತಿ ಏರಿಕೆ

ಗರಿಷ್ಠ ತೆರಿಗೆ ವ್ಯಾಪ್ತಿ ಏರಿಕೆ

20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ ಮಾತ್ರ ಶೇಕಡಾ 30ರ ಗರಿಷ್ಠ ತೆರಿಗೆ ವಿಧಿಸಬೇಕು ಎಂಬುದು ಹೆಚ್ಚಿನ ಜನರ ಆಗ್ರಹವಾಗಿದೆ. ಈ ಬೇಡಿಕೆಯನ್ನು ಕೇಂದ್ರ ಸರಕಾರ ಮಾನ್ಯ ಮಾಡುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

 ಸ್ಟ್ಯಾಂಡರ್ಡ್ ಡಿಡಕ್ಷನ್

ಸ್ಟ್ಯಾಂಡರ್ಡ್ ಡಿಡಕ್ಷನ್

ಸ್ಟ್ಯಾಂಡರ್ಡ್ ಡಿಡಕ್ಷನ್ ಕೇಂದ್ರ ಬಜೆಟ್ ಮೇಲಿರುವ ಮತ್ತೊಂದು ನಿರೀಕ್ಷೆಯಾಗಿದೆ. ಈ ದೀರ್ಘಕಾಲದ ನೀತಿಯ ಮರು-ಪರಿಚಯದಿಂದ ವೇತನ ಪಡೆಯುವ ವ್ಯಕ್ತಿಗಳು ತೆರಿಗೆ ಹೊರೆಯಿಂದ ರೂ. 1 ಲಕ್ಷ ಪರಿಹಾರವನ್ಜು ಪಡೆಯಬಹುದಾಗಿದೆ.

English summary
Finance Minister Arun Jaitley reducing the tax rate for individuals from 10% to 5% falling in the tax slab of ₹2.5 Lakh to ₹5 Lakh in Union budget 2017. Expectations are now set high in the Corporate or Salaried class of taxpayers from Budget 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X