Delhi Explosion: ದೆಹಲಿ ಕೆಂಪು ಕೋಟೆ ಬಳಿ ಭೀಕರ ಸ್ಫೋಟ: ಅಗ್ನಿಶಾಮಕ ಅಧಿಕಾರಿ ಹೇಳಿದ್ದೇನು?

Delhi Explosion: ಕೆಂಪು ಕೋಟೆ ಸಮೀಪದ ಲಾಲ್‌ ಕಿಲಾ ಮೆಟ್ರೋ ನಿಲ್ದಾಣ ಗೇಟ್ ಸಂಖ್ಯೆ 1ರ ಬಳಿ ಇಂದು (ನವೆಂಬರ್ 10) ಎರಡು ಕಾರುಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಸಾವು-ನೋವುಗಳು ಸಹ ಆಗಿವೆ. ಈ ಬಗ್ಗೆ ಅಗ್ನಿಶಾಮಕ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸ್ಫೋಟದಲ್ಲಿ ಮೃತರ 9ಕ್ಕೆ ಏರಿಕೆಯಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಳ ಆಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇಂದು ಸಂಜೆ ಸುಮಾರು 7ಗಂಟೆ ವೇಳಗೆ ಈ ಸ್ಫೋಟ ಸಂಭವಿಸಿದ್ದು, ಉಗ್ರ ಕೃತ್ಯದ ಶಂಕೆ ವ್ಯಕ್ತವಾಗಿದೆ. ಇನ್ನೂ ಈ ಭೀಕರ ಸ್ಫೋಟಕ್ಕೆ ದೆಹಲಿ ಜನ ಬೆಚ್ಚಿಬಿದ್ದಿದ್ದಾರೆ.

Fire Officer Reaction on Delhi Explosion

ಸಿಎನ್‌ಜಿ ಸ್ಫೋಟಿಸಿರುವ ಶಂಕೆ ಸಹ ಕೂಡ ವ್ಯಕ್ತವಾಗಿದೆ. ಈಗಾಗಲೇ 7ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ದೆಹಲಿ ಪೊಲೀಸ್ ವಿಶೇಷ ಘಟಕ, ಬಾಂಬ್ ನಿಷ್ಕ್ರಿಯ ದಳಗಳೂ ಘಟನಾ ಸ್ಥಳಕ್ಕೆ ತೆರಳಿದ್ದು, ಸ್ಫೋಟಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರೆಸಿವೆ. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಇಡೀ ರಾಜ್ಯಾದ್ಯಂತ ಹೈಅಲರ್ಟ್‌ ಘೋಷಣೆ ಮಾಡಿದ್ದಾರೆ.

ಅಗ್ನಿಶಾಮಕ ಅಧಿಕಾರಿ ಹೇಳಿದ್ದೇನು?: ಇನ್ನೂ ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟದ ಬಗ್ಗೆ ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಎ.ಕೆ.ಮಲಿಕ್ ಮಾತನಾಡಿದ್ದಾರೆ. "ಚಾಂದನಿ ಚೌಕ್ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಾವು ತಕ್ಷಣ ಹೈ ಅಲರ್ಟ್‌ ಆದೆವು ಮತ್ತು ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಸಂಜೆ 7:29ಕ್ಕೆ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಇನ್ನೂ ಸಾವು-ನೋವುಗಳು ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಅದ್ಯ ನಮ್ಮ ಎಲ್ಲಾ ತಂಡಗಳು ಸ್ಥಳದಲ್ಲಿವೆ", ಎಂದು ತಿಳಿಸಿದ್ದಾರೆ.

ಈ ಭಯಾನಕ ಸ್ಫೋಟಕ್ಕೆ ಮೃತ ದೇಹಗಳು ಛಿದ್ರ-ಛಿದ್ರವಾಗಿದೆ. ಸ್ಥಳಕ್ಕೆ ಆಗಮಿಸಿರುವ ಭದ್ರತಾ ಪಡೆಗಳು ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಮುಂದುವರೆಸಿವೆ. ಇನ್ನೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ದೆಹಲಿ ಸಮೀಪ ವಿವಿಧೆಡೆ 2,900 ಕೆಜಿ ಸ್ಫೋಟಕ ವಸ್ತುಗಳನ್ನ ಪತ್ತೆಹಚ್ಚಿ ಜಪ್ತಿ ಮಾಡಿದ್ದರು. ಇದಾದ ಬೆನ್ನಲ್ಲೇ ಈ ಭೀಕರ ಸ್ಫೋಟ ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+