ಗುಜರಾತಿನ ರಿಲಯನ್ಸ್ ತೈಲ ಘಟಕಕ್ಕೆ ಬೆಂಕಿ, ಇಬ್ಬರು ಸಾವು

Posted By:
Subscribe to Oneindia Kannada

ಅಹಮದಾಬಾದ್, ನವೆಂಬರ್ 24: ಜಾಮ್ ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಗೆ ಸೇರಿರುವ ತೈಲ ಸಂಸ್ಕರಣಾ ಘಟಕಕ್ಕೆ ಗುರುವಾರ ಬೆಳಗ್ಗೆ ಬೆಂಕಿ ತಗುಲಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 8 ಮಂದಿಗೆ ತೀವ್ರಗಾಯಗಳಾಗಿವೆ.

ರಿಲಯನ್ಸ್ ರಿಫೈನರಿಗೆ ಬೆಂಕಿ ತಗುಲಿದ ತಕ್ಷಣ ಸಂಸ್ಥೆಯ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಗಾಯಗೊಂಡವರೆಲ್ಲರೂ ಗುತ್ತಿಗೆ ಆಧಾರಿತ ಕಾರ್ಮಿಕರಾಗಿದ್ದು, ಎಲ್ಲರನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ರಿಫೈನರಿಯ ಚಟುವಟಿಕೆ ಎಂದಿನಂತೆ ನಡೆದಿದೆ ಎಂದು ರಿಲಯಸ್ ಸಂಸ್ಥೆ ಪ್ರಕಟಿಸಿದೆ.

Fire At Reliance Jamnagar Refinery

ಜಗತ್ತಿನ ಅತಿ ಶ್ರೀಮಂತ ಮುಖೇಶ್ ಅಂಬಾನಿ ಅವರ ಒಡೆತನ ಎರಡು ರಿಫೈನರಿಗಳು ಜಾಮ್ ನಗರ ಘಟಕದಲ್ಲಿವೆ. ಗ್ಯಾಸಲೀನ್ ಉತ್ಪಾದನಾ ಘಟಕ 660,000 ಬ್ಯಾರೆಲ್ಸ್ ಪ್ರತಿ ದಿನದಂತೆ ಉತ್ಪಾದನೆ ಮಾಡುತ್ತಿದ್ದು, ಸಂಸ್ಥೆಯ ಫ್ಲ್ಯೂಯಿಡ್ ಕ್ಯಾಟಲಿಸ್ಟ್ ಕ್ರಾಕಿಂಗ್ ಘಟಕ (ಎಫ್ ಸಿಸಿಯು) ದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ಈಗ ಬೆಂಕಿ ನಂದಿಸಲಾಗಿದೆ.ಮತ್ತೊಂದು 540,000 bpd ಸಾಮರ್ಥ್ಯದ ಮತ್ತೊಂದು ಘಟಕ ಕೂಡಾ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At least two people weres killed and eight others injured in a fire broke out at Reliance Refinery in Jamnager on Thursday.
Please Wait while comments are loading...