ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಪಿಯು ಟಾಪರ್ಸ್ ವಿರುದ್ಧ ಎಫ್ ಐಆರ್ ದಾಖಲು!

By Mahesh
|
Google Oneindia Kannada News

ಪಾಟ್ನ, ಜೂನ್ 07: ಬಿಹಾರ ಪಿಯುಸಿ (10+2) ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪಾಟ್ನ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಿದ್ದಾರೆ.

ಇತ್ತೀಚೆಗೆ ನಡೆಸಲಾದ ಮರು ಪರೀಕ್ಷೆಯಲ್ಲಿ ಈ ಆರೋಪಿತ ನಾಲ್ಕು ವಿದ್ಯಾರ್ಥಿಗಳು ಫೇಲ್ ಆಗಿದ್ದರು. ವಿದ್ಯಾರ್ಥಿಗಳಲ್ಲದೆ ವಿಶುನ್ ರಾಯ್ ಕಾಲೇಜಿನ ನಿರ್ದೇಶಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ರೂಬಿ ರಾಯ್,ವಿಜ್ಞಾನ ವಿಭಾಗದ ಸೌರವ್ ಶ್ರೇಷ್ಠ ಸೇರಿದಂತೆ 14 ಟಾಪರ್​ಗಳಿಗೆ ಬಿಹಾರ ಬೋರ್ಡ್ ಎಕ್ಸಾಮಿನೇಷನ್ ಬೋರ್ಡ್ (ಬಿಎಸ್ ಇಬಿ) ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಸೌರಭ್ ಶ್ರೇಷ್ಠ, ರಾಹುಲ್ ಕುಮಾರ್, ರೂಬಿ ರಾಯ್ ಹಾಗೂ ಶಾಲಿನಿ ಮುಂತಾದವರು ಅನುತ್ತೀರ್ಣರಾಗಿದ್ದರು.

FIR against the clueless toppers of 10+2 Examination Bihar

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸಿ, ಸಮಿತಿ ರಚಿಸಿದ್ದರು. ಈ ಮೂವರು ಟಾಪರ್ ಗಳ ವಿರುದ್ಧ ಐಪಿಸಿ ಸೆಕ್ಷನ್ 420, 465, 467, 468, 471 ಹಾಗೂ 120 ಬಿ ಅನ್ವಯ ಎಫ್ ಐಆರ್ ದಾಖಲಿಸಲಾಗಿದೆ.

ಕಲಾ ವಿಭಾಗದ ರೈ ಅವರು ಸಂದರ್ಶನವೊಂದರಲ್ಲಿ Political Science ಎನ್ನುವ ಬದಲು Prodigal Science ಎಂದು ಹೇಳಿದ್ದಲ್ಲದೆ, ಇದು ಅಡುಗೆಗೆ ಸಂಬಂಧಿಸಿದ ವಿಷಯ ಎನ್ನುವ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯಾಗಿ ಸರ್ಕಾರದ ಕಿವಿಗೂ ಮುಟ್ಟಿತ್ತು. ನಿವೃತ್ತ ಜಡ್ಜ್ ಘನಶ್ಯಾಮ್ ಪ್ರಸಾದ್ ಅವರ ನೇತೃತ್ವದ ನಾಲ್ವರ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿದೆ.

English summary
Police in Patna registered an FIR against the three clueless toppers of 10+2 Examination conducted by Bihar School Examination Board (BSEB). The (FIR) First Information Report against Arts stream topper Ruby Rai, Science topper Saurav Shrestha and third rank-holder in Science, Rahul Kumar, has been lodged at Kotwali police station in Patna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X