'ಮಾನವ ಗುರಾಣಿ', ಭಾರತೀಯ ಸೇನೆ ವಿರುದ್ದ ಎಫ್ಐಆರ್

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಏಪ್ರಿಲ್ 17: ಕಾಶ್ಮೀರಿ ಯುವಕನನ್ನು ಜೀಪಿನ ಮುಂಭಾಗಕ್ಕೆ ಗುರಾಣಿಯಂತೆ ಕಟ್ಟಿದ ಭಾರತದ ಸೇನೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರತಿಭಟನಾಕಾರರ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಸೇನೆಯ ಅಧಿಕಾರಿಗಳು ಕಾಶ್ಮೀರಿ ಯುವಕನನ್ನೇ ಜೀಪಿನ ಮುಂಭಾಗಕ್ಕೆ ಕಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಅಂತರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿತ್ತು.

ಈ ಘಟನೆ ಕುರಿತಂತೆ ವಿವರವಾದ ವರದಿ ನೀಡಲು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೂಚಿಸಿದ್ದರು. ಇದಾದ ಬೆನ್ನಿಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೇನೆಯ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸಿದ್ದಾರೆ.[ದೇವೇಗೌಡ ಬಗ್ಗೆ ಟ್ವೀಟ್ ಮಾಡಿದ ಒಮರ್, ಕೆರಳಿದ ಸಿಟಿ ರವಿ]

FIR against Army for using stone pelter as human shield

ಇನ್ನು ಘಟನೆ ಕುರಿತಂತೆ ಸೇನೆಯೂ ವಿವರವಾದ ತನಿಖೆ ನಡೆಸುತ್ತಿದೆ. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಭಾರತ ಸರಕಾರ ಸೇನೆಯ ಬೆನ್ನಿಗೆ ನಿಲ್ಲಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಒನ್ ಇಂಡಿಯಾಗೆ ಹೇಳಿಕೆ ನೀಡಿವೆ.

ಹೀಗಿದ್ದೂ ಬಿಜೆಪಿ ಮತ್ತು ಪಿಡಿಪಿ ನೇತೃತ್ವದ ಸಮ್ಮಿಶ್ರ ಸರಕಾರವಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏಪ್ರಿಲ್ 9ರಂದು ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ವೇಳೆ ಈ ಘಟನೆ ನಡೆದಿತ್ತು. ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನು ಹಾದು ಹೋಗಲು ಬುದ್ಗಾಮ್ ಜಿಲ್ಲೆಗೆ ಸೇರಿದ ಸೀತಾಹರಣ್ ಗ್ರಾಮದ ಪಾರೂಕ್ ಅಹ್ಮದ್ ದಾರ್ ಎನ್ನುವ ಯುವಕನನ್ನು ಜೀಪಿನ ಮುಂಭಾಗಕ್ಕೆ ಕಟ್ಟಲಾಗಿತ್ತು. ಈ ಮೂಲಕ ಕಲ್ಲು ತೂರಾಟದ ವಿರುದ್ಧ ಮನುಷ್ಯನನ್ನೇ ಸೇನೆ ಗುರಾಣಿಯಂತೆ ಬಳಸಿಕೊಂಡಿತ್ತು.[ಕಾಶ್ಮೀರ ಮರು ಮತದಾನ ಶೇ. 2 ! ಕಣಿವೆ ರಾಜ್ಯದ ಇತಿಹಾಸದಲ್ಲೇ ಅತಿ ಕಳಪೆ]

ವಿಶೇಷ ಎಂದರೆ ಉಪಚುನಾವಣೆಯಲ್ಲಿ ಕೇವಲ ಶೇಕಡಾ 7.14 ಮತದಾನವಾಗಿತ್ತು. ಇದರಲ್ಲೇ ಫಾರೂಕ್ ಅಹ್ಮದ್ ದರ್ ಕೂಡಾ ಮತದಾನ ಮಾಡಿದ್ದರು. ಮತದಾನ ಮುಗಿಸಿ ಬರುವಾಗ ಸೇನೆ ಅವರನ್ನು ಈ ರೀತಿ ಜೀಪಿಗೆ ಕಟ್ಟಿತ್ತು. ಸೇನೆಯ 53 ರಾಷ್ಟ್ರೀಯ ರೈಫ್ಸ್ ವಿಭಾಗ ಈ ಕೃತ್ಯ ಎಸಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Jammu and Kashmir police have registered a First Information Report against the Army for using a stone pelter as a human shield against protesters. Chief Minister of J&K, Mehbooba Mufti sought a detailed report on the incident from the state police following which an FIR was filed.
Please Wait while comments are loading...