Saif Ali Khan: ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ಪ್ರಕರಣಕ್ಕೆ ರೋಚಕ ತಿರುವು!

ಬಾಲಿವುಡ್ ನಟ ಸೈಫ್ ಅಲಿ ಖಾನ್‌ರ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ. ಸೈಫ್ ಅಲಿ ಖಾನ್ ಅವರ ಮನೆಯಿಂದ ಸಂಗ್ರಹಿಸಿರುವ 19 ಸೆಟ್‌ ಬೆರಳುಚ್ಚಗಳು ಆರೋಪಿ ಎಂದು ಬಂಧಿಸಲಾಗಿರುವ ಶರೀಫುಲ್ ಇಸ್ಲಾಂ ಅವರ ಬೆರಳಚ್ಚುಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿದೆ.

ಮುಂಬೈ ಪೊಲೀಸರು ಸೈಫ್ ಅಲಿ ಖಾನ್‌ ಅವರ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚುಗಳನ್ನು ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಬೆರಳಚ್ಚು ಬ್ಯೂರೋಗೆ ಕಳುಹಿಸಿದ್ದರು. ಅವರು ನೀಡಿರುವ ವರದಿಯಲ್ಲಿ ಶರೀಫುಲ್ ಇಸ್ಲಾಂ ಅವರ ಬೆರಳಚ್ಚಿಗೆ ಹೊಂದಿಕೆಯಾಗುತ್ತಿಲ್ಲ ಎಂದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

Fingerprint twist mumbai police probes shock attack saif ali khan

ಬೆರಳಚ್ಚು ವರದಿ ನೆಗೆಟಿವ್ ಬಂದಿದೆ ಎಂದು ಸಿಐಡಿ ಅಧಿಕಾರಿಗಳು ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ. ಹೆಚ್ಚಿನ ಪರೀಕ್ಷೆಗಾಗಿ ಮುಂಬೈ ಪೊಲೀಸರು ಮತ್ತಷ್ಟು ಬೆರಳಚ್ಚಿನ ಮಾದರಿಗಳನ್ನು ಸಿಐಡಿ ಬೆರಳಚ್ಚು ಬ್ಯೂರೋಗೆ ಕಳಿಸಿಕೊಟ್ಟಿದ್ದಾರೆ.

ತನಿಖೆಯಲ್ಲಿ ರೋಚಕ ತಿರುವು

ಜನವರಿ 15 ರಂದು ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿದ್ದು ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ್ದರು. ಕಳ್ಳನಿಗೆ ಪ್ರತಿರೋಧ ತೋರಿದ್ದರಿಂದ ಕಳ್ಳ ಅವರ ಮೇಲೆ ದಾಳಿ ಮಾಡಿದ್ದರು, 54 ವರ್ಷದ ಸೈಫ್ ಅಲಿ ಖಾನ್‌ ಇರಿತದಿಂದ ಗಾಯಗೊಂಡಿದ್ದರು. ಬಳಿಕ ಸೈಫ್ ಅಲಿ ಖಾನ್‌ರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಾಕುವಿನ ಚೂರು ಸೈಫ್ ಅಲಿ ಖಾನ್‌ರ ದೇಹದಲ್ಲೇ ಸೇರಿಕೊಂಡಿತ್ತು, ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದರು. ಮಂಗಳವಾರ ಸೈಫ್ ಅಲಿ ಖಾನ್‌ರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಒಂದು ವಾರ ವಿಶ್ರಾಂತಿ ಪಡೆಯಲು ವೈದ್ಯರು ಸೂಚನೆ ಕೊಟ್ಟಿದ್ದಾರೆ.

ಬಂಧಿತ ಆರೋಪಿ ಶರೀಫುಲ್ ಬಾಂಗ್ಲಾದೇಶ ಪ್ರಜೆಯಾಗಿದ್ದು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ. ಹಣ ನೀಡಿದರೆ ಭಾರತದ ನಕಲಿ ಪೌರತ್ವ ದಾಖಲೆ ಮಾಡಿಸಿಕೊಡುತ್ತೇನೆ ಎಂದು ಯಾರೋ ಹೇಳಿದ್ದರಿಂದ ಸೈಫ್ ಅಲಿ ಖಾನ್‌ರ ಮನೆಯಲ್ಲಿ ಕಳ್ಳತನ ಮಾಡಲು ಹೋಗಿದ್ದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈಗ ಅಕ್ರಮವಾಗಿ ದಾಖಲೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ಕೊಟ್ಟವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹೆಚ್ಚಿನ ಭದ್ರತೆ ಹೊಂದಿರುವ ನಟ ಸೈಫ್ ಅಲಿ ಖಾನ್‌ ಮನೆಗೆ ಕಳ್ಳನೊಬ್ಬ ನುಗ್ಗಿದ್ದಲ್ಲದೆ ಈ ರೀತಿ ಹಲ್ಲೆ ಮಾಡಿದ್ದು ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಅಷ್ಟು ಭದ್ರತೆ ಇದ್ದಾಗಲೂ ಆತ ಒಳ ನುಗ್ಗಿದ್ದು ಹೇಗೆ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಕೆಲವೇ ದಿನಗಳಲ್ಲಿ ನಿಜ ಏನೆಂದು ಬಯಲಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+