'ಮತದಾನ ಬುಲೆಟ್‌ಗಿಂತ ಶಕ್ತಿಶಾಲಿ' : ಮೋದಿ
ಶ್ರೀನಗರ, ಡಿ.8 : 'ಎಲೆಕ್ಟ್ರಾನಿಕ್ ಮತಯಂತ್ರದ ಮೇಲೆ ಒಂದು ಬೆರಳು ಒತ್ತುವುದು ಎಕೆ-47ಗಿಂತ ಶಕ್ತಿಶಾಲಿಯಾದದು. ಮತದಾನ ಬುಲೆಟ್‌ಗಿಂತಲೂ ಶಕ್ತಿಶಾಲಿ' ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಕಳೆದ ಒಂದು ವಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯುತ್ತಿದ್ದರೂ ಇಂದು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಬುಲೆಟ್‌ಗಿಂತ ಬ್ಯಾಲೆಟ್ ಶಕ್ತಿಯುತವಾದದ್ದು ಎಂದು ಹೇಳಿದರು.
ಭಾರೀ ಬಿಗಿ ಭದ್ರತೆ ನಡುವೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎಕೆ-47 ಬಳಕೆಗಿಂತ ಅತ್ಯಂತ ಪ್ರವಾಭ ಹೊಂದಿರುವುದು ಮತ ಚಲಾವಣೆ. ಇದರಿಂದ ಕೆಟ್ಟದನ್ನು ಧ್ವಂಸಗೊಳಿಸಬಹುದು. ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ತಪ್ಪದೆ ಮತ ಚಲಾವಣೆ ಮಾಡಿ ಎಂದು ಕಾಶ್ಮೀರದ ಜನರಿಗೆ ಕರೆ ನೀಡಿದರು. ಮೋದಿ ಸಮಾವೇಶ ಚಿತ್ರಗಳಲ್ಲಿ [ಪಿಟಿಐ ಚಿತ್ರಗಳು]

ಬುಲೆಟ್‌ಗಿಂತ ಬ್ಯಾಲೆಟ್ ಹೆಚ್ಚು ಶಕ್ತಿಯುತವಾದದ್ದು
'ಎಲೆಕ್ಟ್ರಾನಿಕ್ ಮತಯಂತ್ರದ ಮೇಲೆ ಒಂದು ಬೆರಳು ಒತ್ತುವುದು ಎಕೆ-47ಗಿಂತ ಶಕ್ತಿಶಾಲಿಯಾದದು. ಮತದಾನ ಬುಲೆಟ್‌ಗಿಂತಲೂ ಶಕ್ತಿಶಾಲಿ' ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಉಗ್ರರ ದಾಳಿ ನಡುವೆಯೇ ಚುನಾವಣಾ ಪ್ರಚಾರ
ಕಳೆದ ಒಂದು ವಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆಯುತ್ತಿದ್ದರೂ ಇಂದು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಜಮ್ಮು ಕಾಶ್ಮೀರ ಅಭಿವೃದ್ಧಿ ಭರವಸೆ ನೀಡುತ್ತೇನೆ
ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಉತ್ತಮ ಆಡಳಿತಕ್ಕೆ ಅವಕಾಶ ಮಾಡಿಕೊಡಿ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಇಲ್ಲಿನ ಜನರು ಇಟ್ಟುಕೊಂಡಿರುವ ಭರವಸೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದು ಮೋದಿ ಹೇಳಿದರು.

ಆಡಳಿತದ ಬದಲಾವಣೆ ಸಮಯ ಬಂದಿದೆ
ಜಮ್ಮು ಕಾಶ್ಮೀರದಲ್ಲಿ ಆಡಳಿತ ನಡೆಸಿವರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂದು ನೋಡಿದ್ದೇವೆ. ಅವರಿಂದ ರಾಜ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಈಗ ಆಡಳಿತವನ್ನು ಬದಲಾಯಿಸುವ ಸಮಯ ಬಂದಿದೆ. ಆಡಳಿತವನ್ನು ಬದಲಿಸಿ ಎಂದು ಜನರಿಗೆ ಮೋದಿ ಕರೆ ನೀಡಿದರು.

ಮೋದಿ ಸಮಾವೇಶಕ್ಕೆ ಬಿಗಿ ಭದ್ರತೆ
ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೋದಿ ಸಮಾವೇಶದ ಹಿನ್ನನೆಯಲ್ಲಿ ಶ್ರೀನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎತ್ತರದ ಕಟ್ಟಡದ ಮೇಲೆ ಶಾರ್ಪ್ ಶೂಟರ್‌ಗಳನ್ನು ನಿಯೋಜನೆ ಮಾಡಲಾಗಿತ್ತು.

ಯೋಧರಿಗೆ ನಮನ ಸಲ್ಲಿಸಿದ ಮೋದಿ
ಚುನಾವಣಾ ಪ್ರಚಾರದ ಸಮಾವೇಶಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಸೇನಾ ನೆಲೆಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.












Click it and Unblock the Notifications