ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nirmala Sitharaman ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಏಮ್ಸ್‌ ಆಸ್ಪತ್ರೆಗೆ ದಾಖಲು

|
Google Oneindia Kannada News

ನವದೆಹಲಿ, ಡಿಸೆಂಬರ್‌ 26: ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ, ಡಿಸೆಂಬರ್ 26 ರಂದು ನವದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿರ್ಮಲ ಅವರನ್ನು ಸೋಮವಾರ ಮಧ್ಯಾಹ್ನದ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.

Online Gambling: ಆನ್‌ಲೈನ್‌ ಜೂಜಾಟಕ್ಕೆ ಮಕ್ಕಳು ಬಲಿ, ಕ್ರಮಕ್ಕೆ ಕೋರಿ ವಿತ್ತ ಸಚಿವೆಗೆ ಶಾಸಕ ಪತ್ರOnline Gambling: ಆನ್‌ಲೈನ್‌ ಜೂಜಾಟಕ್ಕೆ ಮಕ್ಕಳು ಬಲಿ, ಕ್ರಮಕ್ಕೆ ಕೋರಿ ವಿತ್ತ ಸಚಿವೆಗೆ ಶಾಸಕ ಪತ್ರ

63 ವರ್ಷದ ನಿರ್ಮಲಾ ಸೀತಾರಾಮನ್ ಅವರನ್ನು ಸೋಮವಾರ ಮಧ್ಯಾಹ್ನ ನವದೆಹಲಿಯ ಏಮ್ಸ್‌ ಆಸ್ಪತ್ರೆಗೆ ಕರೆದೊಯ್ದು ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಕೆ ಆಸ್ಪತ್ರೆಗೆ ದಾಖಲಾಗಿರುವ ಕಾರಣ ಇನ್ನೂ ತಿಳಿದುಬಂದಿಲ್ಲ.

Finance Minister Nirmala Sitharaman admitted to AIIMS Hospital

ರಾಯಿಟರ್ಸ್ ವರದಿಗಳ ಪ್ರಕಾರ, ಪ್ರಸ್ತುತ ಸೀತಾರಾಮನ್ ಅವರ ಆರೋಗ್ಯ ಸ್ಥಿರವಾಗಿದೆ. "ನಥಿಂಗ್ ಸೀರಿಯಸ್. ಆಕೆ ಚೆನ್ನಾಗಿದ್ದಾರೆ" ಎಂದು ಮೂಲಗಳು ತಿಳಿಸಿವೆ. ಆಕೆಯನ್ನು ಏಕೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹಣಕಾಸು ಸಚಿವಾಲಯವು ಯಾವುದೇ ಮಾಹಿತಿ ನೀಡಲ್ಲ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡಲಾಗುತ್ತಿದೆ. ಅವರ ಆರೋಗ್ಯದ ಕುರಿತು ಎಐಐಎಂಎಸ್ ವೈದ್ಯರು ಶೀಘ್ರದಲ್ಲೇ ಹೇಳಿಕೆ ನೀಡಲಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಪುಷ್ಪನಮನ ಸಲ್ಲಿಸಿದ್ದರು. ಬಳಿಕ ನಿರ್ಮಲ ಸೀತಾರಾಮನ್ ದೆಹಲಿಯ ಸದೈವ್ ಅಟಲ್ ಅವರನ್ನು ಭೇಟಿ ಮಾಡಿದ್ದರು. ತಮಿಳುನಾಡಿನ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಭಾರತವು ಜಾಗತಿಕ ಗುಣಮಟ್ಟದ ಔಷಧವನ್ನು ಸಮಂಜಸವಾದ ಬೆಲೆಯಲ್ಲಿ ಒದಗಿಸುವುದರಿಂದ ಭಾರತವನ್ನು ವಿಶ್ವದ ಫಾರ್ಮಸಿ ಎಂದು ಕರೆಯಲಾಗುತ್ತದೆ ಎಂದು ಹಣಕಾಸು ಸಚಿವೆ ಹೇಳಿದ್ದರು.

ಫೆಬ್ರವರಿ 1, 2023 ರಂದು ನಿರ್ಮಲ ಸೀತಾರಾಮನ್ ಫೆಡರಲ್ ಬಜೆಟ್ ಅನ್ನು ಮಂಡಿಸಲಿದ್ದಾರೆ. ಶುಕ್ರವಾರವಷ್ಟೇ ಸಚಿವರು ತಮ್ಮ ಮುಂಬರುವ ಬಜೆಟ್ ಸಾರ್ವಜನಿಕ ವೆಚ್ಚದ ಹಿನ್ನೆಲೆಯಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳುವ ಮೂಲಕ ಹಿಂದಿನವರ ಸ್ಫೂರ್ತಿಯನ್ನು ಮುಂದುವರಿಸಲಾಗುವುದು ಎಂದು ಸುಳಿವು ನೀಡಿದ್ದರು.

ಭಾರತವು ಹಣದುಬ್ಬರವನ್ನು ಉತ್ತಮವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಲಿದೆ. ಏಕೆಂದರೆ ಆಹಾರದ ಬೆಲೆಗಳ ಮೇಲಿನ ಪೂರೈಕೆಯ ಬದಿಯ ಒತ್ತಡವನ್ನು ಪರಿಹರಿಸಲು ಅದು ಈಗಾಗಲೇ ಉತ್ತಮ ಚೌಕಟ್ಟನ್ನು ಹೊಂದಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಜನವರಿಯಿಂದ ರಿಸರ್ವ್ ಬ್ಯಾಂಕ್‌ನ ಆರಾಮದಾಯಕ ಮಟ್ಟವಾದ ಶೇಕಡಾ 6 ಕ್ಕಿಂತ ಹೆಚ್ಚಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದರು.

English summary
Union Finance Minister Nirmala Sitharaman was admitted to the All India Institute of Medical Sciences in New Delhi on Monday, December 26, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X