ಬೇರೆ ಮಹಿಳೆಯೊಂದಿಗೆ ಸಿಕ್ಕಿಬಿದ್ದ ನಿರ್ಮಾಪಕ; ಪತ್ನಿಯ ಮೇಲೆ ಕಾರು ಹರಿಸಿದ!
ಮುಂಬೈ, ಅ. 27: ಬೇರೆ ಮಹಿಳೆಯೊಂದಿಗೆ ಕಾರಿನಲ್ಲಿ ಸಿಕ್ಕಿಬಿದ್ದ ಹಿಂದಿ ಸಿನಿಮಾ ನಿರ್ಮಾಪಕರೊಬ್ಬರು ತಮ್ಮ ಪತ್ನಿ ಮೇಲೆ ಕಾರು ಹರಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಚಲನಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಅವರು ತಮ್ಮ ವಾಹನದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಇರುವುದನ್ನು ಕಂಡ ಅವರ ಪತ್ನಿಗೆ ಕಾರಿನಿಂದ ಡಿಕ್ಕಿ ಹೊಡೆದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 19 ರಂದು ಉಪನಗರ ಅಂಧೇರಿಯಲ್ಲಿ (ಪಶ್ಚಿಮ) ವಸತಿ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಕಮಲ್ ಮಿಶ್ರಾ ಅವರ ಪತ್ನಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿ ಪ್ರಕಾರ, ಚಿತ್ರ ನಿರ್ಮಾಪಕನ ಪತ್ನಿ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ನಿರ್ಮಾಪಕ ಕಮಲ್ ಮಿಶ್ರಾ ತನ್ನ ಕಾರಿನಿಂದ ಡಿಕ್ಕಿ ಹೊಡೆದ ನಂತರ ಆತನ ಪತ್ನಿ ನೆಲದ ಮೇಲೆ ಬೀಳುತ್ತಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಿರ್ಮಾಪಕನ ಪತ್ನಿ ದಾಖಲಿಸಿರುವ ದೂರಿನ ಪ್ರಕಾರ, ಕಮಲ್ ಮಿಶ್ರಾ ಅವರ ಪತ್ನಿ ತನ್ನ ಪತಿಯನ್ನು ಹುಡುಕುತ್ತಾ ಹೊರಬಂದಾಗ ಪಾರ್ಕಿಂಗ್ ಪ್ರದೇಶದಲ್ಲಿ ಕಾರಿನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಇರುವುದನ್ನು ನೋಡಿದ್ದಾರೆ. ಕಾರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡಿದ ಹೋದ ಕಾರಣ ಚಿತ್ರ ನಿರ್ಮಾಪಕ ಮತ್ತು ಆತನ ಪತ್ನಿ ನಡುವೆ ವಾಗ್ವಾದ ನಡೆದಿದೆ. ಚಾಲಕನ ಸೀಟ್‌ನಲ್ಲಿ ಕುಳಿತಿದ್ದ ಮಿಶ್ರಾ ಕಾರನ್ನು ತನ್ನ ಪತ್ನಿಯ ಮೇಲೆ ಹರಿಸಿದ್ದಾರೆ. ಆಕೆ ನೆಲಕ್ಕೆ ಬಿದ್ದ ಕಾರಣ ಆಕೆಯ ಕಾಲು, ತಲೆ ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದ ಮೇಲೆ, ಕಮಲ್ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ 279 (ವೇಗದ ಚಾಲನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಸೇರಿದಂತೆ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಾವು ಆರೋಪಿಗಳಿಗಾಗಿ ಹುಡುಕುತ್ತಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಂಬೋಲಿ ಪೊಲೀಸರು ತಿಳಿಸಿದ್ದಾರೆ.
ಕಮಲ್ ಮಿಶ್ರಾ ಹಿಂದಿಯ 'ದೇಹತಿ ಡಿಸ್ಕೋ' ಚಿತ್ರದ ನಿರ್ಮಾಪಕರು












Click it and Unblock the Notifications