Fight for Bone: ಮೂಳೆ ಬೇಕು ಮೂಳೆ... ಮೂಳೆಗಾಗಿ ಮುರಿದು ಬಿತ್ತು ಮದುವೆ!
ಹೈದರಾಬಾದ್ ಡಿಸೆಂಬರ್ 26: ಮೂಳೆ ಇಲ್ಲದ ಕುರಿ ಮಾಂಸದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ವರನ ಕುಟುಂಬವೊಂದು ಮದುವೆಯನ್ನೇ ರದ್ದುಗೊಳಿಸಿದ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಿತ್ರ 'ಬಲಗಂ'ನಲ್ಲಿನ (Balagam) ಜನಪ್ರಿಯ ದೃಶ್ಯದಂತಹ ಸನ್ನಿವೇಶ ನಿಜ ಜೀವನದಲ್ಲೂ ಕಂಡುಬಂದಿದೆ. ಸಿನಿಮಾದಲ್ಲೂ ವಧು ಮತ್ತು ವರನ ಕುಟುಂಬದ ಸದಸ್ಯರ ನಡುವೆ ಮನಸ್ತಾಪದಿಂದಾಗಿ ವಿವಾಹವನ್ನು ರದ್ದುಗೊಳಿಸಲಾಯಿತು.

ಚಲನಚಿತ್ರ ದೃಶ್ಯದಲ್ಲಿಯೂ ಮಟನ್‌ನಲ್ಲಿ ಮೂಳೆಯಿಲ್ಲ ಎನ್ನುವ ಬಗ್ಗೆ ವರ ಮತ್ತು ವಧುವಿನ ಕಿರಿಯ ಸಹೋದರನ ನಡುವಿನ ಜಗಳ ಉಂಟಾಗುತ್ತದೆ. ನಂತರ ಇದು ಮದುವೆಯನ್ನು ರದ್ದುಗೊಳಿಸುವುದಕ್ಕೆ ಕಾರಣವಾಗುತ್ತದೆ.
ಅಂತೆಯೇ ನಿಜಾಮಾಬಾದ್ ಜಿಲ್ಲೆಯ ವಧುವಿನ ಕುಟುಂಬ ಸದಸ್ಯರು, ಜಗ್ತಿಯಾಲ್ ಜಿಲ್ಲೆಯ ವರನ ವಿವಾಹವನ್ನು ಇತ್ತೀಚೆಗೆ ವಧುವಿನ ನಿವಾಸದಲ್ಲಿ ನಿಶ್ಚಯಿಸಲಾಗಿತ್ತು. ಮದುವೆಯನ್ನು ಸಾಂಪ್ರದಾಯಿಕವಾಗಿ ಮತ್ತು ಅದ್ದೂರಿಯಾಗಿ ನಡೆಸಲು ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ನಂತರ ವಧುವಿನ ಕುಟುಂಬವು ಮದುಮಗನ ಕುಟುಂಬ ಸದಸ್ಯರು ಮತ್ತು ಬಂಧುಗಳಿಗೆ ಮಾಂಸಾಹಾರಿ ಊಟವನ್ನು ಏರ್ಪಡಿಸಿದ್ದರು.
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಅತಿಥಿಗಳು ಮಾಂಸಾಹಾರಿ ಖಾದ್ಯದಲ್ಲಿ ಮಟನ್‌ನ ಬೋನ್ ನೀಡಿಲ್ಲ ಎಂದು ತಕರಾರು ಮಾಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ವಧುವಿನ ಸಂಬಂಧಿಕರು ಸಮಾಧಾನ ಪಡಿಸಲು ಪ್ರಾರಂಭಿಸಿದರು. ಆದರೆ ಇದು ಸಾಧ್ಯವಾಗಲಿಲ್ಲ. ಇದು ಅಂತಿಮವಾಗಿ ಎರಡೂ ಪಕ್ಷಗಳ ನಡುವೆ ಜಗಳಕ್ಕೆ ಕಾರಣವಾಯಿತು.

ಶೀಘ್ರದಲ್ಲೇ ಸಮಸ್ಯೆ ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿದೆ. ಸಮಸ್ಯೆಗೆ ಸಂಬಂಧಿಸಿದಂತೆ ವರನ ಕಡೆಯವರಿಗೆ ಮನವರಿಕೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು. ಆದರೆ, ವಧುವಿನ ಮನೆಯವರು ಮಾಂಸಾಹಾರಿ ಖಾದ್ಯಗಳಲ್ಲಿ ಮೂಳೆಯನ್ನು ಬಡಿಸದೆ ಅವಮಾನ ಮಾಡಿದ್ದಾರೆ ಎಂದು ಅವರು ವಾದಿಸಿದರು.
ವಧುವಿನ ಮನೆಯವರು ಸಹ ಈ ಬಗ್ಗೆ ತಮಗೆ ಮೊದಲೇ ತಿಳಿಸಿರಲಿಲ್ಲ, ಇದರಿಂದಾಗಿ ನಾವು ಮೂಳೆ ಊಟಕ್ಕೆ ಸೇರಿಸಲಾಗಿಲ್ಲ ಎಂದು ವಾದಿಸಿದರು. ಕೊನೆಗೆ ಎರಡೂ ಕಡೆಯವರು ತಮ್ಮ ತಮ್ಮ ಊರುಗಳಿಗೆ ತೆರಳಿ ಮದುವೆ ರದ್ದು ಮಾಡಿದ್ದಾರೆ. ಮದುವೆ ಮುರಿದು ಬೀಳಲು ಕಾರಣ ಕೇಳಿ ಪೊಲೀಸರು ಹಾಗೂ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ.
-
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್












Click it and Unblock the Notifications