ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಉಬರ್ ಚಾಲಕಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ: ದರೋಡೆಗೆ ಯತ್ನ

|
Google Oneindia Kannada News

ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳು ಮಹಿಳಾ ಉಬರ್ ಚಾಲಕಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರುವ ಪ್ರಕರಣ ಬಯಲಾಗಿದೆ. ದೆಹಲಿಯ ಕಾಶ್ಮೀರ್ ಗೇಟ್‌ನಲ್ಲಿರುವ ಅಂತರರಾಜ್ಯ ಬಸ್ ನಿಲ್ದಾಣದ ಬಳಿ ಸೋಮವಾರ ರಾತ್ರಿ ಇಬ್ಬರು ವ್ಯಕ್ತಿಗಳು ಆಕೆಯ ಕಾರಿಗೆ ಕಲ್ಲು ತೂರಾಟ ನಡೆಸಿ ದರೋಡೆಗೆ ಯತ್ನಿಸಿದ್ದಾರೆ. ಇದರಿಂದ ಮಹಿಳಾ ಉಬರ್ ಕ್ಯಾಬ್ ಚಾಲಕಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ದೆಹಲಿಯ ಸಮಯಪುರ ಬದ್ಲಿ ನಿವಾಸಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಆಜ್ ತಕ್/ಇಂಡಿಯಾ ಟುಡೇ ಜೊತೆಗಿನ ಸಂವಾದದಲ್ಲಿ, ಜನವರಿ 9 ರಂದು ಪ್ರಿಯಾಂಕಾ ಅವರು ಗ್ರಾಹಕರ ಕರೆಯ ಮೇರೆಗೆ ISBT ಕಡೆಗೆ ಹೋಗುತ್ತಿದ್ದರು ಮತ್ತು ದಟ್ಟವಾದ ಮಂಜಿನಿಂದಾಗಿ ಕಾರನ್ನು ನಿಧಾನವಾಗಿ ಓಡಿಸುತ್ತಿದ್ದರು. ಆಕೆ ಗ್ರಾಹಕರಿಂದ 100 ಮೀಟರ್ ದೂರದಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ಕಾರಿನ ಮುಂದೆ ಬಂದು ವಾಹನದ ಕಿಟಕಿಯನ್ನು ಕಲ್ಲಿನಿಂದ ಒಡೆದರು. ಆ ಕಲ್ಲು ಆಕೆಯ ತಲೆಗೆ ತಗುಲಿ, ಒಡೆದ ಗಾಜಿನ ಚೂರುಗಳು ಮೈಮೇಲೆ ಬಿದ್ದಿವೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಮಹಿಳಾ ಉಬರ್ ಚಾಲಕಿ ಮೇಲೆ ಹಲ್ಲೆ

ಏನಾಯಿತು ಎಂದು ಪರಿಶೀಲಿಸಲು ಕಾರಿನಿಂದ ಇಳಿದಾಗ ಇಬ್ಬರು ವ್ಯಕ್ತಿಗಳು ಆಕೆಯನ್ನು ದೂಷಿಸಿ ಆಕೆಯ ಬಳಿ ಇದ್ದ ಹಣವನ್ನು ಕಸಿದುಕೊಂಡರು ಎಂದು ಪ್ರಿಯಾಂಕಾ ಹೇಳಿದ್ದಾರೆ. ಅವರಲ್ಲಿ ಒಬ್ಬರು ಆಕೆಯ ಕೈ ಹಿಡಿದರೆ, ಮತ್ತೊಬ್ಬರು ಆಕೆಯ ಮೊಬೈಲ್ ಕಸಿದುಕೊಂಡಿದ್ದಾರೆ. ಧೈರ್ಯ ಮಾಡಿ ಮೊಬೈಲ್ ಕಿತ್ತುಕೊಂಡೆ' ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.

 Female Uber driver assaulted with beer bottle: Attempted robbery

ಇಬ್ಬರು ವ್ಯಕ್ತಿಗಳು ತಮ್ಮ ಕಾರಿನ ಕೀಗಳನ್ನು ಕಸಿದುಕೊಂಡು ವಾಹನದಲ್ಲಿ ಪರಾರಿಯಾಗಲು ಪ್ರಯತ್ನಿಸಿದರು ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ. "ಕಾರು ನನ್ನದಲ್ಲ ಎಂದು ನಾನು ಅವರಿಗೆ ಹೇಳಿದೆ, ನಾನು ಜೋರಾಗಿ ಕೂಗಲು ಪ್ರಾರಂಭಿಸಿದಾಗ, ಅವರಲ್ಲಿ ಒಬ್ಬರು ನನ್ನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದರು, ನನ್ನ ಕುತ್ತಿಗೆ ಮತ್ತು ಎದೆಯ ಮೇಲೆ ಗಾಯಗಳಾಗಿವೆ" ಎಂದು ಉಬರ್ ಚಾಲಕಿ ಹೇಳಿಕೊಂಡಿದ್ದಾರೆ. ಆಕೆಯ ಕುತ್ತಿಗೆ ಮತ್ತು ದೇಹಕ್ಕೆ 10 ಹೊಲಿಗೆ ಹಾಕಲಾಗಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ದರೋಡೆಗೆ ಯತ್ನ

ತಾನು ಉಬರ್‌ನಲ್ಲಿ ತುರ್ತು ಸಂಖ್ಯೆಯನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಮತ್ತು ಉಬರ್‌ನಲ್ಲಿ ಲಭ್ಯವಿರುವ ಪ್ಯಾನಿಕ್ ಬಟನ್ ಅನ್ನು ದೀರ್ಘಕಾಲ ಒತ್ತಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ರಸ್ತೆಯಲ್ಲಿ ಹಲವು ವಾಹನಗಳನ್ನು ನಿಲ್ಲಿಸಿದರೂ ಯಾರೂ ರಕ್ಷಣೆಗೆ ಮುಂದಾಗಲಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ. ಘಟನೆ ನಡೆದ ಅರ್ಧ ಗಂಟೆ ನಂತರ ಪೊಲೀಸರು ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

 Female Uber driver assaulted with beer bottle: Attempted robbery

"ರಕ್ತಸ್ರಾವವನ್ನು ತಡೆಯಲು ನಾನು ನನ್ನ ಗಂಟಲನ್ನು ಬಟ್ಟೆಯಿಂದ ಒತ್ತಿಕೊಂಡೆ. ಪೊಲೀಸರು ನನ್ನ ಕರೆ ಸ್ವೀಕರಿಸಿದಾಗ ಮರುದಿನ ಬೆಳಿಗ್ಗೆ 6 ಗಂಟೆಯಾಗಿತ್ತು. ಬಂದ ನಂತರ ಅವರು ನನ್ನನ್ನು ಪಿಆರ್‌ಸಿ ವ್ಯಾನ್‌ನಲ್ಲಿ ಕೂರಿಸಿ ಆಸ್ಪತ್ರೆಗೆ ಸಾಗಿಸಿದರು" ಎಂದು ಪ್ರಿಯಾಂಕಾ ಹೇಳಿದರು.

ದೂರು ದಾಖಲು

"ಚಿಕಿತ್ಸೆ ಬಳಿಕ ನನ್ನ ಕುಟುಂಬ ಸದಸ್ಯರು ನನ್ನನ್ನು ಮನೆಗೆ ಕರೆತಂದರು, ಆ ಸಮಯದಲ್ಲಿ ನನಗೆ ಪ್ರಜ್ಞೆ ಇರಲಿಲ್ಲ, ಆದ್ದರಿಂದ ನಾನು ದೂರು ನೀಡಲಿಲ್ಲ" ಎಂದು ಅವರು ಹೇಳಿದ್ದಾರೆ. ಕಾಶ್ಮೀರ್ ಗೇಟ್ ಪೊಲೀಸರ ಪ್ರಕಾರ, ಜನವರಿ 10 ರಂದು ಮುಂಜಾನೆ 2 ಗಂಟೆಯ ಸುಮಾರಿಗೆ ಅವರಿಗೆ ಕರೆ ಬಂದಿತು ಮತ್ತು ದರೋಡೆ ಯತ್ನದ ಬಗ್ಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡಕ್ಕೆ ಪ್ರಿಯಾಂಕಾ ಅವರ ಕುತ್ತಿಗೆಯಿಂದ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಇಬ್ಬರು ವ್ಯಕ್ತಿಗಳು ತಮ್ಮ ಕ್ಯಾಬ್‌ನ ಕಿಟಕಿಯನ್ನು ಕಲ್ಲಿನಿಂದ ಒಡೆದು ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ ಎಂದು ಪ್ರಿಯಾಂಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಲು ಪ್ರಿಯಾಂಕಾ ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಕಾಶ್ಮೀರ ಗೇಟ್ ಪೊಲೀಸರು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದರು ಮತ್ತು ಐಪಿಸಿಯ ಸೆಕ್ಷನ್ 393 (ದರೋಡೆಗೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

English summary
A case has come to light in Delhi where two men assaulted a female Uber driver with a beer bottle and attempted to rob her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X