ರೇಪ್ ಮಾಡಿ, ಬಾಲಕಿಯನ್ನು ಹೂತಿಟ್ಟಿದ್ದ ಅಪ್ಪ, ಅಜ್ಜಿ ಬಂಧನ!

ಮನೆಯಲ್ಲಿ ತಾಯಿ ಇಲ್ಲದಿದ್ದಾಗ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಘಟನೆ ನೋಡಿದ ನಂತರ ಬಾಲಕಿಯನ್ನು ಕೊಂದ ಅಜ್ಜಿ, ಇಬ್ಬರಿಂದ ಬಾಲಕಿಯ ಶವ ಮನೆಯ ಹಿತ್ತಲಲ್ಲಿ ಗುಟ್ಟಾಗಿ ದಫನ್.

ನಾಸಿಕ್, ಮೇ 22: ತಂದೆಯ ಪ್ರೀತಿ ಹಾಗೂ ಮೊಮ್ಮಕ್ಕಳ ಮೇಲೆ ಅಜ್ಜ- ಅಜ್ಜಿಯ ವಾತ್ಸಲ್ಯಕ್ಕೇ ಕಳಂಕ ಹಚ್ಚುವ ಪ್ರಕರಣವಿದು. ತಂದೆಯೊಬ್ಬ ತನ್ನ ಐದು ವರ್ಷದ ಪುತ್ರಿಯ ಮೇಲೆ ಮನೆಯಲ್ಲೇ ಅತ್ಯಾಚಾರವೆಸಗಿದ್ದಾನೆ.

ಇದನ್ನು ನೋಡಿದ ಆತನ ತಾಯಿ (ಬಾಲಕಿಯ ಅಜ್ಜಿ) ಆ ಮಗು ತನ್ನ ತಾಯಿಯ ಬಳಿ ಈ ವಿಷಯ ತಿಳಿಸೀತೆಂಬ ಹೆದರಿಕೆಯಿಂದ ಆ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ! ಇಂಥದ್ದೊಂದು ಅಮಾನವೀಯ, ಅಸಹ್ಯಕರ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಾನಿ ಎಂಬ ತಾಲೂಕಿನ ಜವುಲೇಕ್ ಗ್ರಾಮದಲ್ಲಿ.[ದೆಹಲಿಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ!]

Father rapes his daughter, her granny kills her in Maharashtra

ಕಾರಣಾಂತರದಿಂದ ಬಾಲಕಿಯ ತಾಯಿ ಮನೆಯಿಂದ ಹೊರಗೆ ತೆರಳಿದ್ದಾಗ, ಈ ಘಟನೆ ನಡೆದಿದೆ. ಬಾಲಕಿಯನ್ನು ಕೊಂದ ನಂತರ, ತಂದೆ ಸಚಿನ್ ಶಿಂಧೆ ಹಾಗೂ ಆತನ ತಾಯಿ (ಬಾಲಕಿಯ ಅಜ್ಜಿ) ಅನಸೂಯ ಸೇರಿಕೊಂಡು ಮನೆಯ ಹಿತ್ತಲಲ್ಲಿ ಆ ಮಗುವನ್ನು ಹೂತು ಹಾಕಿದ್ದಾರೆ. ಕೆಲ ಹೊತ್ತಿನ ನಂತರ, ತಾಯಿ ಬಂದಾಗ ಮಗು ಎಲ್ಲೋ ತಪ್ಪಿಸಿಕೊಂಡು ಹೋಗಿದೆ ಎಂದು ಗಾಬರಿಯಿಂದ ಹುಡುಕಾಡಿದಂತೆ ನಾಟಕವಾಡಿದ್ದಾರೆ.[ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆ]

ಪ್ರಕರಣ ಪೊಲೀಸ್ ಠಾಣೆ ಮೆಟ್ಟೇಲಿರಿದೆ. ಆಗ, ಘಟನೆಯ ತನಿಖೆ ಆರಂಭಿಸಿದ ಪೊಲೀಸರಿಗೆ ಬಾಲಕಿಯ ತಂದೆ, ಅಜ್ಜಿಯ ಮೇಲೆ ಅನುಮಾನ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗಿ, ಪೊಲೀಸರ ಮುಂದೆ ಅಜ್ಜಿ ಆ ಹತ್ಯೆಯ ವಿಚಾರ ಬಾಯಿಬಿಟ್ಟಿದ್ದಾರೆಂದು ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವದಾಸ್ ಪಾಟೀಲ್ ಹೇಳಿದ್ದಾರೆ.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+