ಹಿಂದೂ ದೇಗುಲ ಒಳಗೆ ಪ್ಯಾಂಟ್ ಬಿಚ್ಚಿ ಅಪವಿತ್ರ...!ಆರೋಪಿ & ತಂದೆ ಬಂಧನ: Video

ಪುಣೆ, ಮೇ 04: ಹಿಂದೂಗಳ ದೇವಾಲಯ ಮೇಲೆ ಕಲ್ಲು ತೂರಾಟ, ಮೆರವಣಿಗೆ ವೇಳೆ ಮಾಂಸ ಎಸೆತ, ದೇವಾಲಯ ಅಪವಿತ್ರಗೊಳಿಸುವ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲ ಮಾಡುತ್ತಲೇ ಬರಲಾಗುತ್ತಿದೆ. ಇದೀಗ ಪುಣೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ದೇವನಸ್ಥಾನದ ಒಳಗೆ ನುಗ್ಗಿ ಚಡ್ಡಿ ಬಿಚ್ಚಿ ಮಾಡಬಾರದ್ದು ಮಾಡಿ, ಅನ್ನಪೂರ್ಣ ದೇವಿಯ ವಿಗ್ರಹವನ್ನು ಅಪವಿತ್ರಗೊಳಿಸಿದ್ದಾನೆ. ಆರೋಪಿ ಹಾಗೂ ಆತನ ತಂದೆಯನ್ನು ಪೊಲೀಸರು ಶನಿವಾರ (ಮೇ 3) ಬಂಧಿಸಿದ್ದಾರೆ.

ಪುಣೆ ಜಿಲ್ಲೆಯ ಪೌಡ್ ಗ್ರಾಮದ ನಾಗೇಶ್ವರ ದೇವಸ್ಥಾನದಲ್ಲಿ ಅನ್ನಪೂರ್ಣ ದೇವಿಯ ವಿಗ್ರಹವನ್ನು ಅಪವಿತ್ರ ಮಾಡಲಾಗಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪದ ಮೇಲೆ ವ್ಯಕ್ತಿ ಮತ್ತು ಆತನ ಮಗನನ್ನು ಬಂಧಿಸಿರುವ ಬಗ್ಗೆ ಪೊಲೀಸರು ಖಚಿತಪಡಿಸಿದ್ದಾರೆ. ಈ ಸಂಬಂಧ ಪುಣೆಯ ಪೌಡ್ ಗ್ರಾಮದಲ್ಲಿ ಹಿಂದುಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ಆಗ್ರಹಿಸಿದ್ದಾರೆ.

Father and Son Arrested for Vandalising Idol at Faud Pune Nageshwar Temple Video Goes Viral

ಆರೋಪಿ ಯುವನ ಹೆಸರು, ವಯಸ್ಸಿನ ಮಾಹಿತಿ ಲಭ್ಯವಾಗಿಲ್ಲ. ಆತನ ತಂದೆ ನೌಶಾದ್ ಶೇಖ್ ಸೇರಿ (44) ಇಬ್ಬರನ್ನು ಬಂಧಿಸಿದ್ದನ್ನೂ ಪುಣೆ ಗ್ರಾಮೀಣ ಪೊಲೀಸರ ಹವೇಲಿ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಸುನಿಲ್ ಪೂಜಾರಿ ದೃಢಪಡಿಸಿದ್ದಾರೆ. ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Take a Poll

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ವಿಭಾಗಗಳ ಅಡಿಯಲ್ಲಿ ಸೆಕ್ಷನ್ 196, 298, 299, 302, 351(2), ಮತ್ತು 3(5) ಅಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಅಗತ್ಯ ಎಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಆರೋಪಿ ಯುವಕ ನಂದಿ, ಶಿವನ ಇರುವ ನಾಗೇಶ್ವರ ದೇವ್ಥಾನದ ಒಳಕ್ಕೆ ಹೋಗುತ್ತಾರೆ. ಗರ್ಭಗುಡಿಯಲ್ಲಿ ಪ್ಯಾಂಟ್, ಚಡ್ಡಿ ಬಿಚ್ಚಿ ಮೂತ್ರ ವಿಸರ್ಜನೆ ರೀತಿಯಲ್ಲಿ ಕೂರುತ್ತಾನೆ. ನಂತರ ಉದ್ದ ಮಲಗಿದ್ದಾನೆ ದೇವಸ್ಥಾನದಲ್ಲಿ ಅಸಹ್ಯಕರವಾಗಿ ವರ್ತಿಸಿದ್ದಾರೆ. ಈ ಮೂಲಕ ದೇವಾಲದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+