Breaking:ಛತ್ತೀಸ್‌ಗಢ ದೇವಸ್ಥಾನದಲ್ಲಿ 'ಫ್ಯಾಶನ್ ಶೋ': ಭಜರಂಗದಳದಿಂದ ದೂರು ದಾಖಲು
ಛತ್ತೀಸ್‌ಗಢ, ಸೆಪ್ಟಂಬರ್ 18: ಛತ್ತೀಸ್‌ಗಢ ರಾಜ್ಯದ ರಾಯ್‌ಪುರದಲ್ಲಿನ ಸಲಾಸರ್ ಬಾಲಾಜಿ ದೇವಸ್ಥಾನದಲ್ಲಿ 'ಫ್ಯಾಷನ್ ಶೋ' ಆಯೋಜಿಸಿದ್ದನ್ನು ಭಜರಂಗ ದಳದ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಭಜರಂಗ ದಳ ಹೇಳಿದೆ.
ಟೆಲಿಬಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲಸರ್ ದೇವಸ್ಥಾನದಲ್ಲಿ ಭಾನುವಾರ ಎಫ್‌ಡಿಸಿಎ ಹೆಸರಿನ ಕಂಪನಿಯು 'ಫ್ಯಾಷನ್ ಶೋ' ಆಯೋಜಿಸಿದೆ. ಆರಿಫ್ ಮತ್ತು ಮನೀಶ್ ಸೋನಿ ಎಂಬುವವರೇ ಈ 'ಫ್ಯಾಶನ್ ಶೋ'ದ ಆಯೋಜಕರು ಎಂದು ವರದಿಯಾಗಿದೆ.

ಧಾರ್ಮಿಕ ತಾಣವಾದ ಸಾಲಸರ್ ದೇವಸ್ಥಾನದಲ್ಲಿ 'ಫ್ಯಾಷನ್ ಶೋ' ನಡೆಯುವ ವೇಳೆ ಸ್ಥಳಕ್ಕೆ ಭಜರಂಗ ದಳದ ಮುಖಂಡರು ಆಗಮಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆ ಆಕ್ಷೇಪಿಸಿದ್ದಾರೆ. ನಂತರ ಹಿಂದುಪರ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಿಜಾಬ್ ಧರಿಸಿದ ಮಹಿಳೆ ಸಹ ಇದ್ದು, ಕಾರ್ಯಕರ್ತರು ಕಾರ್ಯಕ್ರಮ ಸಂಘಟಕರ ಜತೆಗಿನ ವಾಗ್ದಾದ ನಡೆಸಿರುವುದನ್ನು ಕಾಣಬಹುದಾಗಿದೆ.
#Chattisgarh : Bajrang Dal protests after a "fashion show" was organised inside the Salasar Dham Temple Complex, in #Raipur. How can someone wearing Hijab can be part of Fashion show, that too inside Temple Complex ? @Bajrangdal_Org @VHPDigital #India
— Oxomiya Jiyori 🇮🇳 (@SouleFacts) September 18, 2022
pic.twitter.com/uF7vW8qhyw
ದೇವಾಲಯದಲ್ಲಿನ ಸಭಾಂಗಣವನ್ನು 'ಫ್ಯಾಶನ್ ಶೋ' ಸಮಾರಂಭದ ವೇದಿಕೆಯಾಗಿ ಪರಿವರ್ತಿಸಲಾಗಿದೆ. ಶೋ ದಲ್ಲಿ ಪಾಲ್ಗೊಳ್ಳಲು ಸಂದರ್ಶಕರನ್ನು ಸಂಘಟಕರು ಆಹ್ವಾನಿಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಭಜರಂಗದಳದ ಜಿಲ್ಲಾ ಸಂಚಾಲಕ ರವಿ ವಾಧ್ವಾನಿ ಅವರು ಆಯೋಜಕರ ಜತೆ ವಾಗ್ದಾದಕ್ಕಿಳಿದರು.
ನಂತರ ಈ ಕುರಿತು ಪ್ರತಿಕ್ರಿಯಸಿರುವ ಜಿಲ್ಲಾ ಸಂಚಾಲಕರು, ದೇವಸ್ಥಾನದಲ್ಲಿ ಫ್ಯಾಶನ್ ಶೋ ನಡೆಸುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ. ಈ ಘಟನೆ ಸಂಬಂಧ ಸ್ಥಳೀಯ ತೆಲಿಬಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೇವಾಲಯಗಳಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಅನುಚಿತ ಮತ್ತು ಖಂಡನಾರ್ಹವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.












Click it and Unblock the Notifications