ರಾಹುಲ್ ಪಿಎಂ ಆಗೋದು ಯಾವಾಗ ಈ ಯುವಕ ಮದ್ವೆಯಾಗೋದು ಯಾವಾಗ!

Posted By:
Subscribe to Oneindia Kannada
   ರಾಹುಲ್ ಗಾಂಧಿ ಪಿ ಎಂ ಆಗೋ ತನಕ ಮದುವೆಯಾಗೋಲ್ಲ ಎಂದ ಅಭಿಮಾನಿ | Oneindia Kannada

   ಚಂಡೀಗಢ, ನ 3: ಪ್ರಧಾನಿ ಮೋದಿಯನ್ನೇ ಮದುವೆಯಾಗಬೇಕೆಂದು ಜೈಪುರದ ಮಹಿಳೆಯೊಬ್ಬರು ದೆಹಲಿಯಲ್ಲಿ ಧರಣಿ ಕೂತಿದ್ದ ಸುದ್ದಿಯನ್ನು ಕೆಲವು ದಿನಗಳ ಹಿಂದೆ ಬರೆದಿದ್ದೆವು, ಈಗ ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಕಾಂಗ್ರೆಸ್ ವಲಯದಲ್ಲಿ ಯುವರಾಜ ಎಂದೇ ಕರೆಯಲ್ಪಡುವ ರಾಹುಲ್ ಗಾಂಧಿ ಸರದಿ!

   ಅಭಿಮಾನಿಗಳು ತಮ್ಮ ನೆಚ್ಚಿನ ರಾಜಕೀಯ ನಾಯಕನಿಗಾಗಿ ಎಂತೆಂಥಾ ಅಭಿಮಾನ ತೋರಿಸುತ್ತಾರೆ ಎನ್ನುವುದನ್ನು ಕೇಳಿದ್ದೇವೆ.. ನೋಡಿದ್ದೇವೆ.. ಅದರೆ, ಇಲ್ಲೊಬ್ಬ ಯುವಕ ತಾನು ಮದುವೆಯಾಗಬೇಕಾದರೆ, ಅದೂ ಹೋಗ್ಲಿ ಕಾಲಿಗೆ ಚಪ್ಪಲಿ ಹಾಕೋಬೇಕಾದರೆ ಒಂದು ಷರತ್ತನ್ನು ತನಗೆ ತಾನೇ ವಿಧಿಸಿಕೊಂಡಿದ್ದಾನೆ.

   A fan of Rahul Gandhi decided not to marry until Rahul Gandhi becoes PM

   ನಿರ್ಭಯಾಳ ಸಹೋದರ ಪೈಲಟ್ ಆಗಲು ರಾಹುಲ್ ಕಾರಣ

   ರಾಹುಲ್ ಗಾಂಧಿ ಪ್ರಧಾನಿಯಾಗುವ ತನಕ ತಾನು ಮದುವೆಯಾಗುವುದಿಲ್ಲ, ಜೊತೆಗೆ ಪಾದರಕ್ಷೆಯನ್ನೂ ಧರಿಸುವುದಿಲ್ಲ ಎಂದು ಹರ್ಯಾಣ ಮೂಲದ ಪಂಡಿತ್ ದಿನೇಶ್ ಶರ್ಮಾ ಎನ್ನುವ 23ವರ್ಷದ ಯುವಕ ಶಪಥ ಮಾಡಿದ್ದಾನೆಂದು ನವಭಾರತ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

   ರಾಹುಲ್ ಗಾಂಧಿಯವರ ಅಪ್ಪಟ ಅಭಿಮಾನಿಯಾಗಿರುವ ಈ ಯುವಕ, ಕಳೆದ ಏಳು ವರ್ಷಗಳಿಂದ ರಾಹುಲ್ ಗಾಂಧಿ ಭಾಗವಹಿಸುವ ಎಲ್ಲಾ ಸಾರ್ವಜನಿಕ ಸಭೆಯಲ್ಲಿ ಹೆಚ್ಚುಕಮ್ಮಿ ತಪ್ಪದೇ ಭಾಗವಹಿಸುತ್ತಿದ್ದಾನಂತೆ.

   ಮಳೆಯಿರಲಿ, ಬಿಸಿಲಿರಲಿ ಅಥವಾ ರಾಹುಲ್ ಗಾಂಧಿಯವರ ರೋಡ್ ಶೋ ಇದ್ದರೂ, ಅದರಲ್ಲಿ ಪಾದಯಾತ್ರೆಯಲ್ಲೇ ಭಾಗವಹಿಸುವ ಈ ಯುವಕ, ತನ್ನ ಹೆಸರಿನ ಮುಂದೆ ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಂದ ಪ್ರೇರಣೆಗೊಂಡಿರುವ 'ಪಂಡಿತ್ ದಿನೇಶ್ ಶರ್ಮಾ' ಎಂದು ಬರೆದುಕೊಂಡಿದ್ದಾನೆ.

   ರಾಹುಲ್ ಗಾಂಧಿ ಪ್ರಧಾನಿಯಾಗುವುದಕ್ಕೂ, ನೀನು ಮದುವೆಯಾಗುವುದಕ್ಕೂ ಏನಪ್ಪಾ ಸಂಬಂಧ ಎಂದರೆ, ಅದನೆಲ್ಲಾ ಕೇಳಬೇಡಿ.. ನನ್ನ ತಾತ ಪಂಡಿತ್ ನೆಹರೂ ಅವರ ಅಭಿಮಾನಿಯಾಗಿದ್ದರು. ಈಗ ನನ್ನ ಸರದಿ.. ಇದು ರಾಹುಲ್ ಗಾಂಧಿಯವರ ಮೇಲಿನ ನನ್ನ ಅಭಿಮಾನ..ಅಷ್ಟೇ... ಎಂದು ಉತ್ತರಿಸುತ್ತಾನೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Dinesh Sharma, a crazy fan AICC Vice President Rahul Gandhi, decided not to marry and not wear sandal until Rahul becomes Prime Minister of India.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ