• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಟ್ಟ ಮೊದಲ ಬಾರಿ ಇಂಗ್ಲೆಂಡ್‌ ತಲುಪಿದ ಭಾರತದ ವಿಶೇಷ ಮಾವಿನ ತಳಿ

|
Google Oneindia Kannada News

ನವದೆಹಲಿ, ಜೂನ್ 15: ಭಾರತದ ಕೃಷಿ ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಹಲವು ಪ್ರಯತ್ನಗಳು ಈಚೆಗೆ ನಡೆಯುತ್ತಿದ್ದು, ಇದೀಗ ಮೊಟ್ಟ ಮೊದಲ ಬಾರಿಗೆ ಭಾರತದಿಂದ ಇಂಗ್ಲೆಂಡ್‌ಗೆ ಮಾವಿನ ಹಣ್ಣು ರಫ್ತಾಗುತ್ತಿದೆ. ಬಿಹಾರದ ಭಾಗಲ್ಪುರದ ಜರ್ದಾಲು ತಳಿಯ ಮಾವು ಮೊದಲ ಬಾರಿ ಇಂಗ್ಲೆಂಡ್‌ಗೆ ಮಂಗಳವಾರ ರಫ್ತಾಗುತ್ತಿದೆ.

APEDA ಬಿಹಾರ ಸರ್ಕಾರ ಹಾಗೂ ಇಂಡಿಯನ್ ಹೈ ಕಮಿಷನರ್ ಹಾಗೂ ಇನ್ವೆಸ್ಟ್ ಇಂಡಿಯಾ ಸಹಕಾರದೊಂದಿಗೆ ಈ ರಸಭರಿತ ಹಾಗೂ ಸುವಾಸಿತ ಮಾವನ್ನು ರಫ್ತು ಮಾಡಿದೆ. ಲಖ್ನೋನಲ್ಲಿ ಈ ಮಾವುಗಳನ್ನು ಪ್ಯಾಕ್ ಮಾಡಿ ಕಳುಹಿಸಲಾಗಿದೆ.

ಒಂದು ಹಣ್ಣಿಗೆ 1000 ರೂ; ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಈ ಮಾವಿನ ತಳಿ ಎಲ್ಲಿದೆ?ಒಂದು ಹಣ್ಣಿಗೆ 1000 ರೂ; ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ಈ ಮಾವಿನ ತಳಿ ಎಲ್ಲಿದೆ?

ಬಿಹಾರದ ಈ ಫೇಮಸ್ ಮಾವಿಗೆ ಭೌಗೋಳಿಕ ವಿಶೇಷತೆ ಮಾನ್ಯತೆ ನೀಡಲಾಗಿತ್ತು. ಈಚೆಗಷ್ಟೆ ಬೆಹ್ರೇನ್‌ನಲ್ಲಿ ಪಶ್ಚಿಮ ಬಂಗಾಳದ ಹಾಗೂ ಬಿಹಾರದ ಮಾವಿನ ವಿಶೇಷ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆದಿತ್ತು. ಅಲ್ಲಿ ಭಾರತದ ಹದಿನಾರು ಮಾವಿನ ತಳಿಗಳನ್ನು ಇಡಲಾಗಿತ್ತು.

ಮಾವಿನ ರಫ್ತನ್ನು ಹೆಚ್ಚಿಸಲು ಎಪಿಇಡಿಎ ಹಲವು ವರ್ಚುಯಲ್ ಸಭೆಗಳನ್ನು ನಡೆಸುತ್ತಿದೆ. ಬರ್ಲಿನ್‌ನಲ್ಲಿಯೂ ಈಚೆಗೆ ಮಾವಿನ ಉತ್ಸವ ಆಯೋಜಿಸಿತ್ತು. ಆಂಧ್ರ ಪ್ರದೇಶದ ಬಂಗಾನಪಲ್ಲಿ ಮಾವನ್ನೂ ದಕ್ಷಿಣ ಕೊರಿಯಾಗೆ ಕಳುಹಿಸಿಕೊಡಲಾಗಿತ್ತು.

ಭಾರತದಲ್ಲಿ ಮಾವನ್ನು "ಹಣ್ಣಿನ ರಾಜ" ಎಂದು ಕರೆಯಲಾಗುತ್ತದೆ. ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಹೆಚ್ಚಾಗಿ ಮಾವನ್ನು ಬೆಳೆಯುವ ರಾಜ್ಯಗಳಾಗಿವೆ. ಯುರೋಪಿಯನ್ ದೇಶಗಳಿಗೆ, ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ದೇಶಗಳಿಗೆ ಮಾವನ್ನು ರಫ್ತುಗೊಳಿಸಲಾಗುತ್ತದೆ.

English summary
For the first time, famous Jardalu mangoes from Bhagalpur reaches UK
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X