ಮೋದಿ ಅಲೆಯಿಂದಾಗಿ ಬಿರುಕುಬಿಟ್ಟ ಕುಟುಂಬಗಳು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅದರಲ್ಲೂ ಪ್ರಮುಖವಾಗಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ಅಲೆಯಿಂದ ಕೆಲವೊಂದು ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿರುವುದಂತೂ ಸತ್ಯ.
ಇದಕ್ಕೆ ಕೊಡಬಹುದಾದ ಹಲವಾರು ಉದಾಹರಣೆಗಳಲ್ಲಿ ಒಂದು ಖುದ್ದು ಇಂದಿರಾ ಗಾಂಧಿ ಕುಟುಂಬದ್ದು. ಕಾಂಗ್ರೆಸ್ಸಿನಿಂದ ಹಲವು ವರ್ಷಗಳಿಂದ ಹಿಂದೆಯೇ ಮನೇಕಾ ಗಾಂಧಿ ಕುಟುಂಬ ದೂರಸರಿದಿದೆ. (ಜನ ಪ್ರವಾಹದ ನಡುವೆ ಮೋದಿ ನಾಮಪತ್ರ ಸಲ್ಲಿಕೆ)
ಇಷ್ಟು ದಿನ ಮನೇಕಾ ಗಾಂಧಿ ಅಥವಾ ವರುಣ್ ಗಾಂಧಿ ವಿರುದ್ದ ಅಷ್ಟೇನೂ ಟೀಕೆ ಮಾಡದ ಸೋನಿಯಾ ಪುತ್ರಿ ಪ್ರಿಯಾಂಕ ವಾಧ್ರಾ ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಸಹೋದರ ವರುಣ್ ವಿರುದ್ದ ಹರಿಹಾಯ್ದಿದ್ದರು.
ಇನ್ನು ಯಾವ ಕುಟುಂಬದಲ್ಲಿ ಬಿರುಕು? ಮುಂದೆ ಓದಿ..

ಪ್ರಿಯಾಂಕ - ವರುಣ್
ನನ್ನ ಸಹೋದರ ತಪ್ಪು ದಾರಿ ಹಿಡಿದಿದ್ದಾನೆ. ಅವನನ್ನು ಸರಿ ದಾರಿಗೆ ತರಬೇಕಾದರೆ ಈ ಬಾರಿ ಅವನನ್ನು ಸೋಲಿಸಬೇಕೆಂದು ಪ್ರಿಯಾಂಕ ಮತದಾರರಲ್ಲಿ ಮನವಿ ಮಾಡಿದ್ದರು. ಇದು ಮೋದಿಯ 'ಮೋಡಿಗೆ' ಕೊಡಬಹುದಾದ ಉದಾಹರಣೆ.

ಚಿರು-ಪವನ್
ಆಂಧ್ರದ ಗ್ಲಾಮರ್ ಕುಟುಂಬವೊಂದು ಒಡೆದು ಹೋಗಿದೆ. ಪ್ರಜಾರಾಜ್ಯಂ ಪಕ್ಷವನ್ನು ಚಿರಂಜೀವಿ ವಿಸರ್ಜಿಸಿದ ನಂತರ ಕಾಣಿಸಿಕೊಂಡಿದ್ದ ಬಿರುಕು ತೇಪೆ ಹಾಕಲು ಕಷ್ಟ ಎನಿಸುವ ಮಟ್ಟಿಗೆ ದೊಡ್ಡದಾಗಿದೆ. ಅದರಲ್ಲೂ ಪವನ್ ಕಲ್ಯಾಣ್ ಮೋದಿ ಪರವಾಗಿ ನಿಂತ ನಂತರ ಕುಟುಂಬದಲ್ಲಿನ ಬಿರುಕು ಬಿರುಗಾಳಿಯಾಗಿದೆ.

ಮನಮೋಹನ್ ಸಿಂಗ್
ಪ್ರಧಾನಿ ಮನಮೋಹನ್ ಸಿಂಗ್ ಸಹೋದರ ದಲ್ಜೀತ್ ಸಿಂಗ್ ಶುಕ್ರವಾರವಷ್ಟೇ ಬಿಜೆಪಿಗೆ ಸೇರಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿದೆ. ಮೋದಿ ಸಮ್ಮುಖದಲ್ಲಿ ಸಿಂಗ್ ಸಹೋದರ ಮೋದಿಯನ್ನು ಹೊಗಳಿ ಬಿಜೆಪಿಗೆ ಜೈ ಎಂದಿದ್ದಾರೆ.

ರಾಜ್ - ಉದ್ಭವ್
ಶಿವಸೇನೆ ಪ್ರಮುಖ ಬಾಳ್ ಠಾಕ್ರೆ ಜೀವಿತ ಅವಧಿಯಲ್ಲೇ ಬಿರುಕು ಕಾಣಿಸಿಕೊಂಡಿದ್ದ ರಾಜ್ ಮತ್ತು ಉದ್ಭವ್ ಠಾಕ್ರೆ ನಡುವಣ ಸಂಬಂಧ ಇತ್ತೀಚೆಗಂತೂ ತೀರಾ ಹಳಸಿದೆ. ಮೋದಿ ಪ್ರಧಾನಿಯಾಗ ಬೇಕೆಂದು ರಾಜ್ ಠಾಕ್ರೆ ಬಹಿರಂಗವಾಗಿ ಹೇಳಿದ ನಂತರ ಠಾಕ್ರೆ ಸಂಸಾರದಲ್ಲಿನ ಬಿರುಕು ಕಂದಕವಾಗಿ ಪರಿಣಮಿಸಿದೆ.

ಕರುಣಾನಿಧಿ ಕುಟುಂಬ
ಕರುಣಾ ಜ್ಯೇಷ್ಠ ಪುತ್ರ ಅಳಗಿರಿಯನ್ನು ಡಿಎಂಕೆಯಿಂದ ಉಚ್ಚಾಟಿಸಿದಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೋದಿ ಕಾರಣವಲ್ಲ. ಆದರೂ, ಮೋದಿ ಒಬ್ಬ ಸಮರ್ಥ ಆಡಳಿತಗಾರ, ತಮಿಳುನಾಡು ಸೇರಿ ದೇಶದಲ್ಲಿ ಮೋದಿ ಅಲೆ ಇದೆ ಎಂದು ಎಂ ಕೆ ಅಳಗಿರಿ ಹೇಳುವ ಮೂಲಕ ಕುಟುಂಬ ಬಿರುಕಿಗೆ ತುಪ್ಪ ಸುರಿದಿದ್ದಾರೆ.












Click it and Unblock the Notifications