ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಟ್ವಿಟ್ಟರ್‌ ಖಾತೆಗಳ ಹೆಚ್ಚಳ: ಹೆಚ್ಚಾದ ಟ್ರೋಲ್‌ಗಳು

|
Google Oneindia Kannada News

ನವದೆಹಲಿ, ನವೆಂಬರ್ 11: ಟ್ವಿಟ್ಟರ್‌ನ ಹೊಸ ಮಾಲೀಕ ಎಲೋನ್ ಮಸ್ಕ್ ಟ್ವಿಟ್ಟರ್‌ ಬ್ಲೂ ಟಿಕ್ ಮಾರ್ಕ್‌ ಪಡೆಯಲು ಹಣ ಪಾವತಿ ಮಾಡುವ ಕ್ರಮವನ್ನು ರದ್ದುಗೊಳಿಸಿದ ನಂತರ ನಕಲಿ ಟ್ವಿಟ್ಟರ್‌ ಖಾತೆಗಳು ಹೆಚ್ಚಳಗೊಂಡಿವೆ. ಟೆಸ್ಲಾ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳು ಮತ್ತು ಕಂಪನಿಗಳ ಹೆಸರಿನಲ್ಲಿ ಟ್ರೋಲ್‌ಗಳು ಹೆಚ್ಚಾಗಿವೆ.

ಮಾಜಿ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಎನ್‌ಬಿಎ ಸ್ಟಾರ್ ಲೆಬ್ರಾನ್ ಜೇಮ್ಸ್ ಅವರ ನಕಲಿ ಖಾತೆಗಳು ಸೃಷ್ಟಿಯಾಗಿದೆ. ಬಳಕೆದಾರರು ಟ್ವಿಟ್ಟರ್‌ನ ನೀಲಿ ಚೆಕ್ ಮಾರ್ಕ್ ಅನ್ನು ನೀಡಲು 7.99 ಡಾಲರ್‌ ಮಾಸಿಕ ಚಂದಾದಾರಿಕೆಗೆ ಪಡೆಯುವ ಮಸ್ಕ್ ಅವರ ನಿರ್ಧಾರ ರದ್ದುಗೊಳಿಸಿದ ನಂತರ ಈ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದೆ.

ಟ್ವಿಟ್ಟರ್‌ನಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳ ಪರದಾಟಟ್ವಿಟ್ಟರ್‌ನಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳ ಪರದಾಟ

ಟ್ವಿಟ್ಟರ್‌ ಬುಧವಾರ ನೀಲಿ ಮಾರ್ಕ್‌ನ್ನು ಪಡೆಯಲು ಚಂದಾದಾರಿಕೆ ಸೇವೆಯನ್ನು ರದ್ದು ಮಾಡಿದ ಸ್ವಲ್ಪ ಸಮಯದ ನಂತರ ಜಾರ್ಜ್‌ ಬುಷ್‌ ನಕಲಿ ಖಾತೆಯಿಂದ ದುಃಖದ ಮುಖ ಹೊಂದಿರುವ ಎಮೋಜಿಯೊಂದಿಗೆ ಐ ಮಿಸ್ ಕಿಲ್ಲಿಂಗ್ ಇರಾಕಿಸ್ ಎಂದು ಟ್ವೀಟ್ ಮಾಡಲಾಗಿದೆ. ಅಲ್ಲದೆ ಬ್ರಿಟನ್‌ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಹೋಲುವ ಮತ್ತೊಂದು ನಕಲಿ ಖಾತೆಯು ಇದೇ ಟ್ವೀಟ್‌ ಅನ್ನು ಮರುಟ್ವೀಟ್ ಮಾಡಿ ಸೇಮ್‌ ಟಿಬಿಎಚ್‌ ಎಂದು ಬರೆದಿದೆ.

ಈ ನಕಲಿ ಖಾತೆಗಳು ಲಾಸ್ ಏಂಜಲೀಸ್ ಲೇಕರ್ಸ್ ಫಾರ್ವರ್ಡ್ ಜೇಮ್ಸ್ ಸೇರಿದಂತೆ ಪ್ರಮುಖ ಕ್ರೀಡಾ ವ್ಯಕ್ತಿಗಳ ಹೆಸರಿನಲ್ಲೂ ತೆರೆಯಲ್ಪಟ್ಟಿವೆ. ಅವರ ನಕಲಿ ಖಾತೆಯಿಂದ ಅವರು ಆಟವಾಡುವ ತಂಡದಿಂದ ಮತ್ತೊಂದು ತಂಡಕ್ಕೆ ವರ್ಗಾವಣೆಗೆ ವಿನಂತಿಸಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೆ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನೀಸ್ ಕಂಪ್ಯೂಟರ್ ಗೇಮ್ಸ್ ದೈತ್ಯ ನಿಂಟೆಂಡೊ ಅವರ ನಕಲಿ ಪ್ರೊಫೈಲ್‌ಗಳು ಸಹ ಸೃಷ್ಟಿಯಾಗಿದೆ. ಅಲ್ಲದೆ ಮಾರಿಯೋ ತನ್ನ ಮಧ್ಯದ ಬೆರಳನ್ನು ಕ್ಯಾಮೆರಾಕ್ಕೆ ಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.

ಟ್ವಿಟ್ಟರ್‌ನಿಂದ 180ಕ್ಕೂ ಹೆಚ್ಚು ಭಾರತದ ಉದ್ಯೋಗಿಗಳ ವಜಾ; ಕೇಂದ್ರ ಐಟಿ ಸಚಿವ ಹೇಳಿದ್ದೇನು?ಟ್ವಿಟ್ಟರ್‌ನಿಂದ 180ಕ್ಕೂ ಹೆಚ್ಚು ಭಾರತದ ಉದ್ಯೋಗಿಗಳ ವಜಾ; ಕೇಂದ್ರ ಐಟಿ ಸಚಿವ ಹೇಳಿದ್ದೇನು?

ಟೆಸ್ಲಾ ಕೇಂದ್ರಕ್ಕೆ ಹಾನಿ ಎಂಬ ಬ್ರೇಕಿಂಗ್‌

ಟೆಸ್ಲಾ ಕೇಂದ್ರಕ್ಕೆ ಹಾನಿ ಎಂಬ ಬ್ರೇಕಿಂಗ್‌

ಜಾರ್ಜ್‌ ಬುಷ್, ಬ್ಲೇರ್, ಟ್ರಂಪ್, ನಿಂಟೆಂಡೊ ಮತ್ತು ಜೇಮ್ಸ್ ಖಾತೆಗಳನ್ನು ಅಮಾನತುಗೊಳಿಸಿದ ಬಳಿಕ ಟೆಸ್ಲಾ ನಕಲಿ ಖಾತೆ ಸೇರಿದಂತೆ ಇತರ ನಕಲಿ ಖಾತೆಗಳು ಶುಕ್ರವಾರ ಸಕ್ರಿಯಗೊಂಡಿದ್ದವು. ಇದು ಎಲಾನ್‌ ಮಸ್ಕ್‌ನ ಎರಡನೇ ವ್ಯಾಪಾರ ಕೇಂದ್ರಕ್ಕೆ ಹಾನಿ ಮಾಡಿದೆ ಎಂಬ ಬ್ರೇಕಿಂಗ್‌ ಸುದ್ದಿಯನ್ನು ಟ್ವೀಟ್ ಮಾಡಿದೆ.

ಹೆಸರಿನಲ್ಲಿ ವಿಮರ್ಶೆಗಿಂತ ಬಯೋದಲ್ಲಿ ಉತ್ತಮ

ಹೆಸರಿನಲ್ಲಿ ವಿಮರ್ಶೆಗಿಂತ ಬಯೋದಲ್ಲಿ ಉತ್ತಮ

ಕಳೆದ ತಿಂಗಳು ಟ್ವಿಟ್ಟರ್ ಅನ್ನು 44 ಬಿಲಿಯನ್‌ ಡಾಲರ್‌ಗೆ ಖರೀದಿಸಿದ ಮಸ್ಕ್, ಟ್ವಿಟ್ಟರ್‌ನಲ್ಲಿ ಖಾತೆಗಳು ತಮ್ಮ ಹೆಸರಿನಲ್ಲಿ ವಿಮರ್ಶೆಯನ್ನು ಒಳಗೊಂಡಿರಬೇಕು, ಬಯೋದಲ್ಲಿ ಮಾತ್ರವಲ್ಲ ಎಂದು ಬರೆದಿದ್ದರು. ಮುಂದುವರೆದು ಹೆಚ್ಚು ನಿಖರವಾಗಿ ಹೇಳಬೇಕೆಂದರೆ ವಿಡಂಬನೆ ಸೋಗು ಹಾಕುವ ಖಾತೆಗಳು ಮೂಲಭೂತವಾಗಿ ಜನರನ್ನು ಮೋಸಗೊಳಿಸುವುದು ಸರಿಯಲ್ಲ ಎಂದು ಅವರು ಟ್ವೀಟ್ ಮಾಡಿದ್ದರು.

ಟ್ವಿಟ್ಟರ್‌ನಲ್ಲಿ ಜಾಹೀರಾತು ಸ್ಥಗಿತ

ಟ್ವಿಟ್ಟರ್‌ನಲ್ಲಿ ಜಾಹೀರಾತು ಸ್ಥಗಿತ

ಟ್ವಿಟರ್‌ನ ಈ ಸಂದಿಗ್ದ ಸಮಯವು ಮಸ್ಕ್ ನಾಯಕತ್ವದಲ್ಲಿ ಪ್ರಭಾವಿ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್‌ನ ಭವಿಷ್ಯದ ಬಗ್ಗೆ ಜಾಹೀರಾತುದಾರರಿಗೆ ಕಳವಳವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಜನರಲ್ ಮೋಟಾರ್ಸ್, ಆಡಿ ಮತ್ತು ಜನರಲ್ ಮಿಲ್ಸ್ ಸೇರಿದಂತೆ ದೊಡ್ಡ ಜಾಹೀರಾತುದಾರರು ತಮ್ಮ ಮಾಡರೇಶನ್ ನೀತಿಗಳಲ್ಲಿನ ಬದಲಾವಣೆಗಳ ಸ್ಪಷ್ಟತೆಗಾಗಿ ಕಾಯುತ್ತಿರುವ ಕಾರಣ ಟ್ವಿಟ್ಟರ್‌ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳನ್ನು ಸ್ಥಗಿತಗೊಳಿಸಿದ್ದಾರೆ.

ಯುಎಸ್, ಕೆನಡ, ಆಸ್ಟ್ರೇಲಿಯಾದಲ್ಲಿ ಜಾರಿ

ಯುಎಸ್, ಕೆನಡ, ಆಸ್ಟ್ರೇಲಿಯಾದಲ್ಲಿ ಜಾರಿ

ಟ್ವಿಟ್ಟರ್‌ನ ಬ್ಯೂ ಟಿಕ್‌ ಮಾರ್ಕ್‌ಗಾಗಿ ಭಾರತದ ಟ್ವಿಟ್ಟರ್ ಬಳಕೆದಾರರು ಕೂಡ ಪ್ರತಿ ತಿಂಗಳಿಗೆ 660 ರೂ. ಪಾವತಿಸುವುದು ಕಡ್ಡಾಯ ಎನ್ನಲಾಗಿದೆ. ಈ ಮಾಸಿಕ ಬ್ಲೂ ಟಿಕ್‌ ಚಂದಾದಾರಿಕೆ ಯೋಜನೆಯು ಈಗಾಗಲೇ ಯುಎಸ್, ಕೆನಡ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್‌ ಸೇರಿದಂತೆ ಇದೀಗ ಭಾರತದಲ್ಲೂ ಪ್ರಾರಂಭವಾಗಿದೆ ಎನ್ನಲಾಗಿದೆ.

English summary
Fake Twitter accounts have proliferated across the platform after Twitter's new owner Elon Musk scrapped the site's verification policies, with trolls targeting celebrities and companies including Tesla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X