Nobel Prize: ಮೋದಿಗೆ ನೊಬೆಲ್- ವಂದತಿಗಳಿಗೆ ತೆರೆ ಎಳಿದ ನೊಬೆಲ್ ಸಮಿತಿಯ ಸದಸ್ಯ
ನೊಬೆಲ್ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಗಣಿಸಲ್ಪಟ್ಟಿದ್ದಾರೆ ಎನ್ನುವ ಊಹಾಪೋಹಗಳಿಗೆ ಸದ್ಯ ತೆರೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ತೋಜೆ ಅವರು ಇದೊಂದು ತಪ್ಪು ಸಂದೇಶ ಎಂದು ಹೇಳಿದ್ದಾರೆ.
ಇದೊಂದು ನಕಲಿ ಟ್ವೀಟ್ ಎಂದ ತೋಜೆ, 'ನಾವು ಅದನ್ನು ಚರ್ಚಿಸಬಾರದು ಅಥವಾ ಇಂತಹ ಸುರ್ಳಲು ಸುದ್ದಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬಾರದು. ಆದರೆ ಈ ಮಾದ್ಯಮಗಳ ಸಂದೇಶವನ್ನು ಮಾತ್ರ ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ' ಎಂದು ಹೇಳಿದ್ದಾರೆ.

ತಮ್ಮ ಭೇಟಿಯ ಉದ್ದೇಶದ ಕುರಿತು ಮಾತನಾಡಿದ ಅವರು, "ನಾನು ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕನಾಗಿ ಭಾರತದಲ್ಲಿ ಇಲ್ಲ, ನಾನು ಅಂತರರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆಯ ನಿರ್ದೇಶಕನಾಗಿ ಮತ್ತು ಭಾರತದ ಸ್ನೇಹಿತನಾಗಿ ಇಲ್ಲಿದ್ದೇನೆ" ಎಂದು ಹೇಳಿದರು.
ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ "ಇದು ಯುದ್ಧದ ಯುಗವಲ್ಲ" ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೆನಪಿಸಿದ್ದಕ್ಕಾಗಿ ತೋಜೆ ಅವರು ಭಾರತೀಯ ಪ್ರಧಾನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
Why has @ANI not tweeted this statement by Asle Toje? 🤔 pic.twitter.com/C3c6pUBdeI
— Mohammed Zubair (@zoo_bear) March 16, 2023
ಎಎನ್‌ಐ ಜೊತೆ ಮಾತನಾಡಿದ ತೋಜೆ, 'ಇದು ಯುದ್ಧದ ಯುಗವಲ್ಲ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಭರವಸೆಯ ಅಭಿವ್ಯಕ್ತಿಯಾಗಿದೆ. ಇಂದು ನಾವು ವಿಶ್ವ ವಿವಾದಗಳನ್ನು ಹೀಗೆ ಪರಿಹರಿಸಬಾರದು ಎಂಬ ಸಂಕೇತವನ್ನು ಭಾರತ ನೀಡಿದೆ. ಪ್ರಧಾನಿ ಮೋದಿಗೆ ಯೋಗ್ಯತೆ ಇದೆ. ಪ್ರಪಂಚದ ಬಹುಪಾಲು ಜನಸಂಖ್ಯೆಯು ಅವರ ಹಿಂದೆ ಇದೆ ಎಂದರು.

ರಷ್ಯಾ-ಉಕ್ರೇನ್ ಯುದ್ಧದ ಕುರಿತು ತೋಜೆ ಅವರು, "ಉಕ್ರೇನ್‌ನಲ್ಲಿನ ಯುದ್ಧಒಂದು ದುರಂತವಾಗಿದೆ. ಇದು ಅಂತ್ಯಕ್ಕೆ ತರಬೇಕಾದ ಯುದ್ಧ. ಎಲ್ಲಾ ರಾಷ್ಟ್ರಗಳು ಮತ್ತು ಸದ್ಭಾವನಾ ದೇಶಗಳು ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಮತ್ತು ಆ ನಿಟ್ಟಿನಲ್ಲಿ ಭಾರತದ ಮಧ್ಯಸ್ಥಿಕೆಯನ್ನು ನೆನಪಿಸಲು ಪ್ರಯತ್ನಿಸಬೇಕು. ಪರಮಾಣು ಶಸ್ತ್ರಾಸ್ತ್ರಗಳ ನಿಜವಾದ ಬಳಕೆಯ ಪ್ರಜ್ಞೆ ರಷ್ಯಾಕ್ಕೆ ತುಂಬಾ ಸಹಾಯಕವಾಗಿದೆ" ಎಂದು ಅವರು ಹೇಳಿದರು.
ವಿಶ್ವ ವಿವಾದಗಳನ್ನು ಯುದ್ಧದ ಮೂಲಕ ಪರಿಹರಿಸಬಾರದು ಎಂಬ ಸಂಕೇತವನ್ನು ಭಾರತ ನೀಡಿದೆ ಮತ್ತು ಪ್ರಧಾನಿ ಮೋದಿ ಅವರಿಗೆ ವಿಶ್ವದ ಬಹುಪಾಲು ಜನಸಂಖ್ಯೆಯ ಬೆಂಬಲವಿದೆ ಎಂದು ತೋಜೆ ಹೇಳಿದ್ದಾರೆ. ಸಂಘರ್ಷಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಎಲ್ಲಾ ರಾಷ್ಟ್ರಗಳು ಮತ್ತು ಸದ್ಭಾವನಾ ದೇಶಗಳಿಗೆ ಕರೆ ನೀಡಿದ ಅವರು, ಭಾರತವು ಯಾರಿಗೂ ಬೆದರಿಕೆ ಹಾಕದೆ ಸೌಹಾರ್ದಯುತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಶ್ಲಾಘಿಸಿದರು.

"ಭಾರತ ತುಂಬಾ ದೊಡ್ಡ ಧ್ವನಿಯಲ್ಲಿ ಮಾತನಾಡಲಿಲ್ಲ ಮತ್ತು ಯಾರಿಗೂ ಬೆದರಿಕೆ ಹಾಕಲಿಲ್ಲ, ಅದು ತನ್ನ ವಿಷಯವನ್ನು ಸ್ನೇಹಪರ ರೀತಿಯಲ್ಲಿ ತಿಳಿಸಿತು. ಭಾರತ ವಿಶ್ವದ ಪ್ರಾಥಮಿಕ ಶಕ್ತಿಗಳಲ್ಲಿ ಒಂದಾಗಿದೆ" ಅಂತರರಾಷ್ಟ್ರೀಯ ರಾಜಕೀಯದಲ್ಲಿ ನಮಗೆ ಇದು ಹೆಚ್ಚು ಅಗತ್ಯವಿದೆ" ಎಂದು ತೋಜೆ ಹೇಳಿದರು.












Click it and Unblock the Notifications