ಭಾರತಕ್ಕೆ ಖೋಟಾ ನೋಟು ಬರುವುದು ಎಲ್ಲಿಂದ?

ಕೋಲ್ಕತ್ತಾ, ಮೇ 26: ಒಂದು ವರ್ಷದ ಅವಧಿಯಲ್ಲಿ ಭಾರತದ ಒಳಕ್ಕೆ ಹರಿದುಬಂದ ಖೋಟಾ ನೋಟುಗಳ ಮೌಲ್ಯ ಲೆಕ್ಕ ಹಾಕಿದರೆ ನಿಜಕ್ಕೂ ದಿಗಿಲಾಗುತ್ತದೆ. 2013-2014 ರ ಅವಧಿಯಲ್ಲಿ ಭಾರತದ ಒಳ ಪ್ರವೇಶಿಸಿದ ಖೋಟಾ ನೋಟುಗಳ ಮೌಲ್ಯ ಬರೋಬ್ಬರಿ 1500 ಕೋಟಿ ರೂ.!

ಕೇಂದ್ರ ಗುಪ್ತಚರ ದಳದ ವರದಿ ಹೇಳುವಂತೆ ಪಶ್ಚಿಮ ಬಂಗಾಳದ ಮಾರ್ಗವಾಗಿಯೇ ಇಷ್ಟೊಂದು ಪ್ರಮಾಣದ ನಕಲಿ ಹಣ ಹರಿದು ಬಂದಿದ್ದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.[ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!]

money

ನಕಲಿ ಹಣದ ಜಾಲಕ್ಕೆ ಸಂಬಂಧಿಸಿ ಬಂಧಿತನಾಗಿರುವ ಷಹಜಾನ್ ನೀಡಿರುವ ಮಾಹಿತಿಗಳು ದಂಗು ಬಡಿಸುತ್ತದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮಾರ್ಗವಾಗಿ ದೇಶದೊಳಕ್ಕೆ ನಕಲಿ ಹಣ ಹರಿದು ಬಂದಿದೆ. ಪಾಕಿಸ್ತಾನದ ರುಪಾಯಿ ಮುದ್ರಿಸುವ ಕಾಗದದಲ್ಲಿತಯೇ ಈ ನಕಲಿ ಹಣ ಮುದ್ರಣ ಮಾಡಲಾಗಿರುವುದು ಕಂಡುಬಂದಿದೆ.

ಬಂಧಿತ ಬಾಯಿ ಬಿಟ್ಟ ಕರಾಳ ಸತ್ಯ
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಖೋಟಾ ನೋಟು ಜಾಲದ ಕಿಂಗ್ ಪಿನ್ ಷಹಜಾನ್ ನನ್ನು ಬಂಧನ ಮಾಡಿದಾಗ ಆತನ ಬಳಿ 20 ಲಕ್ಷ ರು ಗೂ ಅಧಿಕ ನಕಲಿ ಹಣ ಪತ್ತೆಯಾಗಿತ್ತು. ಮೂರು ದೇಶಗಳ ನಡುವಿನ ನಕಲಿ ಹಣ ರವಾನೆಯ ಕೊಂಡಿಯಾಗಿ ಆತ ಕೆಲಸ ಮಾಡುತ್ತಿದ್ದ ಎಂಬ ಸಂಗತಿ ನಂತರ ಬಹಿರಂಗವಾಗಿತ್ತು.

ತನ್ನದೇ ಒಂದು ತಂಡ ಕಟ್ಟಿಕೊಂಡಿದ್ದ ಷಹಜಾನ್ ಪಾಕಿಸ್ತಾನದಿಂದ ಬಾಂಗ್ಲಾದೇಶದ ಮುಖಾಂತರ ನಕಲಿ ಹಣವನ್ನು ಭಾರತದ ಒಳಕ್ಕೆ ತರುತ್ತಿದ್ದ. ನಂತರ ಇಲ್ಲಿಂದ ಬೇರೆ ನಗರಗಳಿಗೆ ರವಾನೆ ಮಾಡುತ್ತಿದ್ದ.[ಗೋಲ್ ಮಾಲ್ ಮೆಸೇಜ್ ನಂಬಿ ಉತ್ರ ಕೊಟ್ರೇ...!]

ಪಾಕಿಸ್ತಾನದ ಕಾಗದದಲ್ಲಿ ಭಾರತದ ಕರೆನ್ಸಿ
ಪಾಕಿಸ್ತಾನದ ರುಪಾಯಿ ತಯಾರು ಮಾಡುವ ಕಾಗದದಲ್ಲಿಯೇ ಭಾರತದ ಹಣ ತಯಾರಾಗಿದ್ದು ಖೋಟಾ ನೋಟು ಧಂದೆಯ ಕರಾಳ ಮುಖವನ್ನು ಸಾರುತ್ತದೆ. ವಾಟರ್ ಮಾರ್ಕ್ ನ್ನು ಸಹ ಈ ಆರ್ಥಿಕ ಉಗ್ರವಾದಿಗಳು ಬಳಸಿಕೊಂಡಿದ್ದಾರೆ. ನಮ್ಮ ದೇಶದ ಅಸಲಿ ಮತ್ತು ಒಳಕ್ಕೆ ಬಂದ ನಕಲಿ ಹಣದ ನಡುವಿನ ವ್ಯತ್ಯಾಸ ಕಣ್ಣಿಂದ ಗುರುತಿಸಲಾಗದಂತೆ ಜಾಣ್ಮೆ ಮೆರೆದಿದ್ದಾರೆ!

ಕೇಂದ್ರ ಗುಪ್ತಚರದಳ ತಿಳಿಸಿರುವಂತೆ ಬಾಂಗ್ಲಾದೇಶ-ಪಶ್ಚಿಮ ಬಂಗಾಳ ಮಾರ್ಗವಾಗಿಯೇ ಖೋಟಾ ನೋಟುಗಳು ಹರಿದು ಬರುತ್ತಿವೆ. ಪೊಲೀಸ್ ಮತ್ತು ಗೃಹ ಇಲಾಖೆಯ ಕಣ್ಣು ತಪ್ಪಿಸುವುದನ್ನು ಆರ್ಥಿಕ ಉಗ್ರರು ಕರಗತ ಮಾಡಿಕೊಂಡಿದ್ದಾರೆ. ಪಾಕಿಸ್ತಾನ ಯಾವ ಬಗೆಯಲ್ಲಿ ಭಾರತದ ಆರ್ಥಿಕತೆಯನ್ನು ಹಾಳು ಮಾಡಲು ಮುಂದಾಗುತ್ತಿದೆ ಎಂಬುದಕ್ಕೆ ಈ ಖೋಟಾ ನೋಟಿನ ಹಾವಳಿಯೇ ಸಾಕ್ಷಿ.

ಮಹಾನಗರಗಳಿಗೆ ಬಂದ ಖೋಟಾ ನೋಟುಗಳು ಅಲ್ಲಿಂದ ಚಿಕ್ಕ ಚಿಕ್ಕ ಪಟ್ಟಣಕ್ಕೆ ರವಾನೆಯಾಗುತ್ತವೆ. ಈ ಜಾಲವನ್ನು ಬೇಧಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದ್ದರೂ ಪರಿಣಾಮ ಸಾಧ್ಯವಾಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+