• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಕೊರೊನಾ ಚಿಕಿತ್ಸೆಗೆ ನಿಂಬೆಹಣ್ಣು, ಅರಿಶಿನ ರಾಮಬಾಣವೇ?

|

ಬೆಂಗಳೂರು, ಮಾರ್ಚ್ 29: ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡಿವೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ವಿವಿಧ ಇಲಾಖೆಗಳು ಶ್ರಮಿಸುತ್ತಿದ್ದು, ಒನ್ಇಂಡಿಯಾ ಕೂಡಾ ನಿರಂತರವಾಗಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ನಡುವೆ ವಾಟ್ಸಾಪ್, ಫೇಸ್ಬುಕ್ ಇನ್ನಿತರ ಸಾಮಾಜಿಕ ಜಾಲ ತಾಣಗಳಲ್ಲಿ ಹರಡುತ್ತಿರುವ ಒಂದು ಸಂದೇಶವನ್ನು ಕೇಂದ್ರ ವಾರ್ತಾ ಇಲಾಖೆ ಅಲ್ಲಗೆಳೆದಿದೆ. ಕೊರೊನಾ ಚಿಕಿತ್ಸೆಗೆ ನಿಂಬೆಹಣ್ಣು ಹಾಗೂ ಅರಿಶಿನ ರಾಮಬಾಣವಾಗಬಲ್ಲುದು ಎಂಬ ಸುದ್ದಿ ಹರಡುತ್ತಿದೆ ಆದರೆ, ಇದರಿಂದ ಕೊರೊನಾವೈರಸ್ ಕೊಲ್ಲಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Fact Check: 'ಎ' ರಕ್ತದ ಗುಂಪಿನ ಮೇಲೆ ಕೊರೊನಾ ಹೆಚ್ಚು ಪರಿಣಾಮ ಬೀರಲಿದೆಯೇ?Fact Check: 'ಎ' ರಕ್ತದ ಗುಂಪಿನ ಮೇಲೆ ಕೊರೊನಾ ಹೆಚ್ಚು ಪರಿಣಾಮ ಬೀರಲಿದೆಯೇ?

ದಿನನಿತ್ಯ ಅಡುಗೆಯಲ್ಲಿ ನಿಂಬೆ ಹಣ್ಣು, ಅರಿಶಿನವನ್ನು ಯಥೇಚ್ಛವಾಗಿ ಬಳಸುವುದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಾಗಬಹುದು. ಆದರೆ, ಇದರಿಂದ ಕೊರೊನಾ ಪಿಡುಗು ನಿರ್ಮೂಲನೆ ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಲಾಗಿದೆ.

ಕೊರೊನಾ ಚಿಕಿತ್ಸೆಗೆ ಅಲ್ಲದಿದ್ದರೂ ನಿಂಬೆ ಹಣ್ಣು ಹಾಗೂ ಅರಿಶಿನ ಬಳಸುವುದರಿಂದ ಕೊರೊನಾ ಬಾರದಂತೆ ತಡೆಗಟ್ಟಬಹುದು ಎಂಬುದಕ್ಕೂ ಸ್ಪಷ್ಟವಾದ ಉತ್ತರ ವಿಜ್ಞಾನಿ, ವೈದ್ಯರಲ್ಲಿಲ್ಲ. ಪೌಷ್ಟಿಕ ಆಹಾರ, ಹಣ್ಣು ತಿನ್ನುವ ಮೂಲಕ ಸಮತೋಲಿತ ಆಹಾರ ಪದ್ಧತಿ ಹೊಂದಿ, ದಿನನಿತ್ಯ ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಯಾವುದೇ ಆಹಾರ ಸೇವನೆಯಿಂದ ಕೊರೊನಾ ವೈರಾಣು ತಡೆಗಟ್ಟಲು ಸಾಧ್ಯವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ರೋಗಿಯ ದೇಹ ಹೊಕ್ಕಿದ ಒಂದು ವಾರದಲ್ಲೇ ತಾನೆ ತಾನಾಗಿ ನಾಶವಾಗುತ್ತದೆ. ಅಥವಾ ತೆಗೆದುಕೊಳ್ಳುವ ಚಿಕಿತ್ಸೆ, ಆಹಾರ ಕ್ರಮದ ಮೇಲೆ ಶೀತ ಯಾವಾಗ ಕಡಿಮೆಯಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಸಾರ್ಸ್ ಮಾದರಿ ಕೊರೊನಾವೈರಸ್ ನಿಂದ ಹರಡುವ ಕೊವಿಡ್ 19 ರೋಗದ ವೈರಸ್ ತಾನಾಗೇ ಸಾಯುವುದಿಲ್ಲ.

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ.

English summary
Lemon and turmeric have good health properties. While you must consume them, please do not go by rumours that state it will cure you of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X