ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ನಿಜವೇ?

|
Google Oneindia Kannada News

Recommended Video

ಅಹಮದಾಬಾದ್ ನಲ್ಲಿ ಸ್ಲಂ ಗಳನ್ನೂ ಅಡಗಿಸಿದ ಮೋದಿ | Ahmedabad | Modi | Trump | Oneindia Kannada

ನವದೆಹಲಿ, ಫೆಬ್ರವರಿ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಸಂದರ್ಭದಲ್ಲಿ ಸ್ಲಂಗಳು ಕಾಣದಂತೆ ಸುತ್ತಲೂ ಗೋಡೆಗಳನ್ನು ನಿರ್ಮಿಸಲಾಗುತ್ತಿರುವುದು, ಯಮುನಾ ನದಿಗೆ ನೀರು ಹರಿಸಿ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛಗೊಳಿಸುವುದು ಮುಂತಾದ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಇದಲ್ಲದೆ, ಬೀದಿ ನಾಯಿಗಳನ್ನು ಕೊಲ್ಲುವ ಕಾರ್ಯ ಸಹ ಮಾಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ.

ಟ್ರಂಪ್ ಭೇಟಿಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಹೆಚ್ಚಿರುವ ಬೀದಿ ನಾಯಿಗಳನ್ನು ಕೊಂದು ಹಾಕಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು ವೈರಲ್ ಆಗಿವೆ. ನಾಯಿಗಳನ್ನು ಕೊಂದು ರಾಶಿ ಹಾಕಲಾಗಿರುವ ಮನಕಲಕುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್! ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್ ಜತೆ ಮತ್ತು ನಿಯೋಗದೊಂದಿಗೆ ಫೆ/ 24 ಹಾಗೂ 25ರಂದು ಎರಡು ದಿನಗಳ ಭಾರತ ಭೇಟಿಗೆ ಆಗಮಿಸುತ್ತಿದ್ದಾರೆ. ಗುಜರಾತ್‌ನ ಅಹಮದಾಬಾದ್, ಉತ್ತರ ಪ್ರದೇಶದ ಆಗ್ರಾ ಮತ್ತು ದೆಹಲಿಗೆ ಅವರು ಭೇಟಿ ನೀಡುತ್ತಿದ್ದಾರೆ.

ಬೀದಿ ನಾಯಿಗಳ ಸಾಮೂಹಿಕ ಹತ್ಯೆ ವದಂತಿ

ಬೀದಿ ನಾಯಿಗಳ ಸಾಮೂಹಿಕ ಹತ್ಯೆ ವದಂತಿ

ಈ ವೇಳೆ ಗುಜರಾತ್‌ನಲ್ಲಿ ಬೀದಿ ನಾಯಿಗಳು ಕಾಣಿಸದಂತೆ ಮಾಡಲು ಸಾಮೂಹಿಕವಾಗಿ ಅವುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ವದಂತಿ ಹಬ್ಬಿದೆ. ಟ್ರಂಪ್ ಭೇಟಿಯ ಕಾರಣದಿಂದ ಗುಜರಾತ್‌ನಲ್ಲಿ ಬೀದಿ ನಾಯಿಗಳನ್ನು ಕೊಲ್ಲಲಾಗುತ್ತಿದೆ. ಅವುಗಳಿಗೂ ಬದುಕುವ ಹಕ್ಕು ಇದೆ ಎಂಬ ವಾಟ್ಸಾಪ್ ಸಂದೇಶಗಳು ಸಹ ಹರಿದಾಡುತ್ತಿವೆ.

ತೆಲಂಗಾಣದ ಚಿತ್ರಗಳು

ತೆಲಂಗಾಣದ ಚಿತ್ರಗಳು

ಆದರೆ ಈ ಚಿತ್ರವನ್ನು ಪರಿಶೀಲಿಸಿದಾಗ ಅದು ಗುಜರಾತ್‌ನದ್ದಲ್ಲ ಎನ್ನುವುದು ಖಚಿತವಾಗಿದೆ. ವೈರಲ್ ಆಗಿರುವ ಈ ಚಿತ್ರ ಸುಮಾರು ಒಂದು ವರ್ಷ ಹಳೆಯದು. ಇದು ತೆಲಂಗಾಣದ ಸಿದ್ದಿಪೇಟೆಯಲ್ಲಿ ತೆಗೆದ ಚಿತ್ರ. ಮಿತಿಮೀರಿದ್ದ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಸಲುವಾಗಿ ಅಲ್ಲಿನ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ಹತ್ಯೆಗೆ ಆದೇಶ ನೀಡಿದ್ದರು. ಆ ಚಿತ್ರವೇ ಈಗ ವೈರಲ್ ಆಗಿದೆ ಎಂದು 'ಇಂಡಿಯಾ ಟುಡೆ'ಯ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ತಿಳಿಸಿದೆ.

ಟ್ರಂಪ್ ಭೇಟಿ: ಯಮುನೆಗೆ ನೀರು, ಸುತ್ತಮುತ್ತಲ ಪ್ರದೇಶ ಸ್ವಚ್ಛಟ್ರಂಪ್ ಭೇಟಿ: ಯಮುನೆಗೆ ನೀರು, ಸುತ್ತಮುತ್ತಲ ಪ್ರದೇಶ ಸ್ವಚ್ಛ

ಸ್ಲಂ ಆಗಿ ಬದಲಾದ ಗುಜರಾತ್

ಸ್ಲಂ ಆಗಿ ಬದಲಾದ ಗುಜರಾತ್

ಇದೇ ರೀತಿ ಗುಜರಾತ್‌ನಲ್ಲಿ ಸ್ಲಂಗಳು ಹೆಚ್ಚಾಗಿದ್ದು, ಅವುಗಳನ್ನು ತೆರವುಗೊಳಿಸಲು ಅಹಮದಾಬಾದ್ ಪಾಲಿಕೆ ನೋಟಿಸ್ ಹೊರಡಿಸಿದೆ ಎಂಬ ವದಂತಿಯೂ ಹರಡಿದೆ. ಟ್ರಂಪ್ ಸಾಗುವ ಹಾದಿಯಲ್ಲಿನ ಸ್ಲಂಗಳು ಕಾಣಿಸದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ.

ಗುಜರಾತ್‌ನದ್ದು ಎನ್ನಲಾದ ಎರಡು ಫೋಟೊಗಳನ್ನು ಜೋಡಿಸಿ ಫೇಸ್‌ಬುಕ್‌ನಲ್ಲಿ ಹರಿಬಿಡಲಾಗಿದೆ. ಒಂದು ಡಿಜಿಟಲ್ ಗ್ರಾಫಿಕ್‌ನಿಂದ ಮಾಡಿದ 'ಗುಜರಾತ್ 2014' ಎಂಬ ಚಿತ್ರ, ಅದರೊಂದಿಗೆ 'ಗುಜರಾತ್ ನೌ' ಎಂಬ ಶೀರ್ಷಿಕೆಯೊಂದಿಗೆ ಸ್ಲಂನಂತಹ ರಚನೆಯುಳ್ಳ ಚಿತ್ರವನ್ನು ಜೋಡಿಸಲಾಗಿದೆ.

ಮುಂಬೈ ಸ್ಲಂ ಚಿತ್ರ

ಮುಂಬೈ ಸ್ಲಂ ಚಿತ್ರ

ಆದರೆ ಗುಜರಾತ್ 2014 ಚಿತ್ರವು ಸತ್ಯವಲ್ಲ. ಅದು ವಾಲ್‌ಪೇಪರ್‌ನ ವೆಬ್‌ಸೈಟ್‌ ಒಂದರಿಂದ ಪಡೆದ ಗ್ರಾಫಿಕ್ಸ್ ಚಿತ್ರವಾಗಿದೆ. ಭವಿಷ್ಯದ ನಗರ, ಹಸಿರು ಹುಲ್ಲು ಮತ್ತು ಪರಿಕಲ್ಪನೆ ಎಂಬುದನ್ನು ಬಿಂಬಿಸುವ ಚಿತ್ರವನ್ನು 2014ರಲ್ಲಿ ಗುಜರಾತ್ ಹೀಗಿತ್ತು ಎಂದು ಚಿತ್ರಿಸಲಾಗಿದೆ. ಎರಡನೆಯ ಚಿತ್ರದಲ್ಲಿನ ಸ್ಲಂ ಮಾದರಿಯ ಕಟ್ಟಡಗಳು ಗುಜರಾತ್‌ನದ್ದಲ್ಲ. ಅದು ಮುಂಬೈನ ಕೊಳೆಗೇರಿಗಳ ಹಳೆಯ ಚಿತ್ರವಾಗಿದೆ. ಆ ಚಿತ್ರವನ್ನು 'ಡಿಎನ್‌ಎ' ಪತ್ರಿಕೆ 2016ರ ಜೂನ್ 12ರಂದು ಬಳಸಿತ್ತು.

ಟ್ರಂಪ್ ಭೇಟಿ: ವಿಮಾನ ನಿಲ್ದಾಣ ಮಾರ್ಗದ ಪಾನ್ ಶಾಪ್ ಬಂದ್ಟ್ರಂಪ್ ಭೇಟಿ: ವಿಮಾನ ನಿಲ್ದಾಣ ಮಾರ್ಗದ ಪಾನ್ ಶಾಪ್ ಬಂದ್

English summary
Image of stray dogs which were killed in Telangana went viral in social media as claiming dogs are being killed in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X