ವಾಟ್ಸಪ್, ಫೇಸ್ಬುಕ್ ಮೇಲೆ ನಿಯಂತ್ರಣಕ್ಕೆ ಮುಂದಾದ ಸರ್ಕಾರ
ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್, ಸ್ಕೈಪ್, ವೀಚಾಟ್ ಮತ್ತು ಗೂಗಲ್ ಟಾಕ್ ಇವುಗಳ ಮೇಲೆ ಕಾನೂನುಬದ್ಧ ನಿಯಂತ್ರಣ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನವದೆಹಲಿ, ಏಪ್ರಿಲ್ 06: ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್, ಸ್ಕೈಪ್ , ವೀಚಾಟ್ ಮತ್ತು ಗೂಗಲ್ ಟಾಕ್ ಇವುಗಳ ಮೇಲೆ ಕಾನೂನುಬದ್ಧ ನಿಯಂತ್ರಣ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಎಲ್ಲ ಟೆಲಿಕಾಂ ಆಪರೇಟರ್ ಗಳಿಗೆ ಈಗಿರುವ ನಿಬಂಧನೆ ವ್ಯವಸ್ಥೆಯನ್ನು ಫೇಸ್‍ಬುಕ್, ವಾಟ್ಸಪ್, ಸ್ಕೈಪ್, ವೀಚಾಟ್ ಮತ್ತು ಗೂಗಲ್ ಟಾಕ್ ನಂಥ ಒವರ್-ದಿ-ಟಾಪ್ (ಒಟಿಟಿ) ಸೇವೆಗಳಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ದೂರಸಂಪರ್ಕ ಇಲಾಖೆ (ಡಿಒಟಿ) ಯು ಸುಪ್ರೀಂಕೋರ್ಟಿಗೆ ತಿಳಿಸಿದೆ.

ಆಪ್ ಆಧಾರಿತ ಉತ್ಪನ್ನಗಳು ಹಾಗೂ ಮೆಸೇಜ್ ಮತ್ತು ಟೆಲಿಫೋನ್ ಸೌಲಭ್ಯಗಳನ್ನು ನೀಡಿ ತೀವ್ರ ಸ್ಪರ್ಧೆ ಒಡ್ಡುತ್ತಿವೆ. ಯಾವುದೇ ನಿಯಂತ್ರಣ-ನಿಬಂಧನೆಗೆ ಒಳಪಟ್ಟಿಲ್ಲ. ಹೀಗಾಗಿ, ಇಂಥ ಸೋಷಿಯಲ್ ನೆಟ್ ವರ್ಕ್ ಮೇಲೆ ನಿಬಂಧನೆ ವಿಧಿಸುವುದು ಅಗತ್ಯ ಎಂದು ಟೆಲಿಕಾಂ ಇಲಾಖೆ ವಾದ ಮಂಡಿಸಿದೆ.












Click it and Unblock the Notifications