Extreme Weather: 2025ರಲ್ಲಿ ಹವಾಮಾನ ವೈಪರೀತ್ಯಕ್ಕೆ ಸಾಕ್ಷಿಯಾದ ಪ್ರದೇಶಗಳು
Year Ender 2025: ಪ್ರಸಕ್ತ ವರ್ಷ 2025 ಅಂತ್ಯಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ಅನೇಕ ಸಂಗತಿಗಳು, ಸಿಹಿ ಕಹಿ ನೆನಪುಗಳು ಈ ವರ್ಷ ಘಟಿಸಿವೆ. ಇದೇ ವರ್ಷ ಭಾರತಾದ್ಯಂತ ಹವಾಮಾನ ವೈಪರೀತ್ಯಗಳು, ಅವಘಡಗಳು ಸಂಭವಿಸಿ ಅನೇಕ ಜನರ ಜೀವನ ಬೀದಿಗೆ ಬಿದ್ದಿದೆ. ಆಯಾ ಭಾಗದಲ್ಲಿ ವಿಪರೀತ್ಯ ಮಳೆ, ಚಂಡಮಾರುತ, ಪ್ರವಾಹನಗಳ, ಗುಡ್ಡ ಕುಸಿತಗಳು ಅಪಾರ ಹಾನಿ ಸಹ ಮಾಡಿವೆ. ಈ ಬಗ್ಗೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಮತ್ತು ಡೌನ್ ಟು ಅರ್ಥ್‌ನ ಕ್ಲೈಮೇಟ್ ಇಂಡಿಯಾ 2025 ವರದಿ ನೀಡಿದೆ.
2025ರ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಶೇಕಡ 99 ರಷ್ಟು ದಿನಗಳಲ್ಲಿ ಹವಾಮಾನ ವಿಕೋಪಗಳು ಘಟಿಸಿವೆ. ಹಾಗಾದರೆ ಈ ವರ್ಷ ಯಾವೆಲ್ಲ ಭಾಗಗಳಲ್ಲಿ ಪ್ರಮುಖ ಹವಾಮಾನ ವೈಪರೀತ್ಯಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಿವೆ ಎಂಬುದರ ಬಗ್ಗೆ 'ಡೌನ್ ಟು ಅರ್ಥ್' ವರದಿ ಮಾಡಿದೆ.

ಅಸ್ಸಾಂ, ಮಣಿಪುರದಲ್ಲಿ ಭಾರೀ ಪ್ರವಾಹ
2025ರಲ್ಲಿ ಕಳೆದ ಜೂನ್‌ನಲ್ಲಿ ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ರಾಜ್ಯಗಳ ಅನೇಕ ಪ್ರದೇಶಗಳು ಅಕ್ಷರಶಃ ಭಾರೀ ಪ್ರವಾಹಕ್ಕೆ ನಲುಗಿದವು. ಅಪಾರ ಹಾನಿಗೆ ಸಾಕ್ಷಿಯಾದವು. ಅಂದಾಜಿನ ಪ್ರಕಾರ, ಸುಮಾರು 08 ಲಕ್ಷ ಜನರ ಜೀವನ ಅಸ್ತವ್ಯಸ್ತವಾಯಿತು. ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ ಕನಿಷ್ಠ ಎಂಟು ನದಿಗಳು ಅಪಾಯ ಮಟ್ಟ ಮೀರಿ ಹರಿದವು. ಇದರಿಂದ ನದಿ ಪಾತ್ರದ ಜನರು ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಅನುಭವಿಸುವಂತಾಯಿತು.
ಉತ್ತರಾಖಂಡನಲ್ಲಿ ಭೂಕುಸಿತ, ಪ್ರವಾಹ
ಉತ್ತರಾಖಂಡ ರಾಜ್ಯ ವ್ಯಾಪ್ತಿಯಲ್ಲಿ ಸುರಿದ ನಿರಂತರ ಮಳೆ ಸುರಿಯಿತು. ನೋಡ ನೋಡುತ್ತಿದ್ದಂತೆ ರಾಜ್ಯವು ಮೇಘಸ್ಫೋಟಕ್ಕೆ ಸಾಕ್ಷಿ ಆಯಿತು. ಅನೇಕ ಜೀವಗಳು ಇಲ್ಲಿನ ಮಳೆ, ಮಳೆಯಿಂದ ಉಂಟಾದ ಭೂಕುಸಿತಗಳಿಗೆ ಸಾವು ನೋವುಗಳು ಸಂಭವಿಸಿದವು. ಡೆಹರಾಡೋನ್ ಮತ್ತು ಉತ್ತರಾಖಂಡದ ಹತ್ತಿರದ ಸ್ಥಳಗಳಲ್ಲಿ ಭಾರೀ ಮಳೆ ಮತ್ತು ಮೇಘಸ್ಫೋಟವು ತೀವ್ರ ಹಾನಿ ಉಂಟು ಮಾಡಿದ್ದರ ಬಗ್ಗೆ ವರದಿ ಆಯಿತು. ಈ ಭಾಗದ ರಸ್ತೆಗಳು, ಸೇತುವೆಗಳು ನಾಶವಾದವು. ಹೋಟೆಲ್, ಅಂಗಡಿ ಮುಂಗಟ್ಟು, ಮನೆಗಳಲ್ಲಿ ನೀರು ನುಗ್ಗಿ ಬಂತು. ಜನರ ಜೀವನ ಮತ್ತೆ ಹಳಿಗೆ ಬರಲು ವಾರಗಳ ಕಾಲ ಬೇಕಾಯಿತು. ಈ ಘಟನೆ ವರ್ಷಗಳ ಕಳೆದರೂ ಮರೆಯುವಂತಿಲ್ಲ.
ಜಮ್ಮುವಿನಲ್ಲಿ ಭೂಕುಸಿತ: ಯಾತ್ರಿಕರ ಜೀವ ಹಾನಿ
ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಕಣಿವೆ ರಾಜ್ಯ ಜಮ್ಮುವಿನಲ್ಲಿ ಭೂಕುಸಿತ ಸಂಭವಿಸಿತು. ಇಲ್ಲಿನ ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತದಲ್ಲಿ ಅನೇಕ ಯಾತ್ರಿಕರು ಜೀವ ಬಿಟ್ಟರು. ಈ ಘಟನೆ ಬಳಿಕ ಚಿಸೋಟಿಯಲ್ಲಿ ಮೇಘಸ್ಫೋಟ ಸಂಭವಿಸಿತು. ಇದರಿಂದ ದಿಢೀರ್ ಪ್ರವಾಹ ಉಂಟಾಯಿತು. ಅನೇಕ ಮಂದಿ ಯಾತ್ರಿಕರು ಗಾಯಗೊಂಡರು. ಆಗಸ್ಟ್ ಮೂರನೇ ವಾರ ಕಥುವಾ ಜಿಲ್ಲೆಯ ವ್ಯಾಪ್ತಿಯ ಜೋಡ್ ಘಾಟಿ ಗ್ರಾಮದಲ್ಲಿ ವಿಪರೀತ ಮಳೆಗೆ ನಾಲ್ಕು ಮಕ್ಕಳು ಸೇರಿ 07 ಮಂದಿ ಪ್ರಾಣಬಿಟ್ಟರು. ಕೆಲವು ದಿನ ಜನರು ಆತಂಕದಲ್ಲಿ ಬುದುಕಬೇಕಾಯಿತು.
ವರ್ಷಾಂತ್ಯಕ್ಕೆ ದಿತ್ವಾ ಚಂಡಮಾರುತದ ಅಬ್ಬರ
ಬಂಗಾಳಕೊಲ್ಲಿ ಭಾಗದಲ್ಲಿ ನವೆಂಬರ್ ಅಂತ್ಯ, ಡಿಸೆಂಬರ್ ಆರಂಭದಲ್ಲಿ ದಿತ್ವಾ ಚಂಡಮಾರುತ ಸೃಷ್ಟಿಯಿಂದ ಶ್ರೀಲಂಕಾ ಹಾಗೂ ಕರಾವಳಿ ರಾಜ್ಯಗಳಲ್ಲಿ ತನ್ನ ಪ್ರಭಾವ ಬೀರಿತು. ಇಲ್ಲಿ ಸಾವಿನ ಸಂಖ್ಯೆ 465 ಕ್ಕೇರಿತು. ಚಂಡಮಾರುತ ಬಿರುಗಾಳಿ, ಮಳೆ, ಪ್ರವಾಹಕ್ಕೆ ಸುಮಾರು 366 ಜನರು ಕಾಣೆಯಾದರು ಎಂದು ವರದಿ ಆಗಿದೆ. ಅಷ್ಟು ಮಾತ್ರವಲ್ಲದೇ ಹಲವೆಡೆ ಪ್ರವಾಹ, ಭೂಕುಸಿತ ಉಂಟಾಯಿತು. ಕುಡಿಯಲು ನೀರಿನ ಸಮಸ್ಯೆ ಉಂಟಾಯಿತು. ಇದರಿಂದ ಹೊರ ಬಂದು ಮೊದಲಿನಂತ ಜೀವನ ನಡೆಯಲು ಶ್ರೀಲಂಕಾ ಇಂದಿಗೂ ಹೆಣಗಾಡುತ್ತಿದೆ.
ವೈಪರೀತ್ಯ: ಸಾವು ನೋವಿನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ಶ್ರೀಲಂಕಾ ದೇಶದಲ್ಲಿ ಸೈಕ್ಲೋನ್‌ನಿಂದ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಭಾರತ ನವೆಂಬರ್ 28 ರಂದು ಆಪರೇಷನ್ ಸಾಗರ್ ಬಂಧು ಆರಂಭಿಸಿತು. ಇನ್ನೂ ಹವಾಮಾನ ಅಪಾಯ ಸೂಚ್ಯಂಕ ಪ್ರಕಾರ, 1995 ಮತ್ತು 2024 ರವರೆಗೆ ಪ್ರಪಂಚದಾದ್ಯಂತ 8.32 ಲಕ್ಷಕ್ಕೂ ಅಧಿಕ ಮಂದಿ ಹವಾಮಾನ ವೈಪರೀತ್ಯದಿಂದ ಮೃತಪಟ್ಟಿದ್ದಾರೆ. ಇಂತಹ ವೈಪರೀತ್ಯಗಳ ಪ್ರಭಾವ, ಹಾನಿ ಎದುರಿಸಿದ ದೇಶಗಳ ಸಾಲಿನಲ್ಲಿ ಭಾರತ 9ನೇ ಸ್ಥಾನದಲ್ಲಿದೆ.
ಭಾರತದಲ್ಲಿ ಸಾವು ನೋವು ಪ್ರತ್ಯೇಕವಾಗಿ ನೋಡುವುದಾದರೆ 2025ರಲ್ಲಿ ಜೂನ್-ಸೆಪ್ಟೆಂಬರ್ ವರೆಗಿನ ಮುಂಗಾರು ಋತುವಿನಲ್ಲಿ ದೇಶಾದ್ಯಂತ ಕನಿಷ್ಠ 1,528 ಸಾವುಗಳು ಸಂಭವಿಸಿವೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications