ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯಗೆ ಶುರುವಾಯ್ತು ನಡುಕ, ಗಡಿಪಾರು ಮನವಿಗೆ ಯುಕೆ ಅಂಕಿತ!

ಮದ್ಯದ ದೊರೆ ವಿಜಯ್ ಮಲ್ಯಗೆ ಇನ್ನು ಉಳಿಗಾಲವಿಲ್ಲ.ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಬ್ರಿಟಿಷ್ ಸರ್ಕಾರ ಪುರಷ್ಕರಿಸಿದ್ದು, ಈಗಾಗಲೇ ಗಡಿಪಾರು ಮಾಡಲು ಯುಕೆನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ.

|
Google Oneindia Kannada News

ನವದೆಹಲಿ, ಮಾರ್ಚ್. 24 : ಬ್ಯಾಂಕುಗಳಿಗೆ ಸಾವಿರಾರು ಕೋಟಿ ಸಾಲ ಮರು ಪಾವತಿಸದೇ ಲಂಡನ್ ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಭಾರತ ಮಾಡಿರುವ ಮನವಿಗೆ ಬ್ರಿಟನ್‌ ಸರ್ಕಾರ ಸ್ಪಂದಿಸಿದ್ದು ಇದೀಗ ಮದ್ಯದ ದೊರೆ ಮಲ್ಯಗೆ ನಡುಕ ಶುರುವಾಗಿದೆ.

ಕಳೆದ ಫೆಬ್ರವರಿಯಲ್ಲಿ ಮಲ್ಯ ಗಡಿಪಾರು ವಿಚಾರವಾಗಿ ಭಾರತ ಮಾಡಿರುವ ಮನವಿಯನ್ನು ವೆಸ್ಟ್ ಮಿನಿಸ್ಟರ್ ಜಿಲ್ಲಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಜಿಲ್ಲಾ ನ್ಯಾಯಾಧೀಶರು ಈ ಕುರಿತು ವಾರೆಂಟ್ ಹೊರಡಿಸುವ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಗ್ಲಾಯ್ ತಿಳಿಸಿದ್ದಾರೆ. ['ಒನ್ ಟೈಮ್ ಸೆಟ್ಲ್ ಮೆಂಟ್ ' ಗೆ ಸಿದ್ಧ : ಮಲ್ಯ ಘೋಷಣೆ]

Extradition Request For Vijay Mallya Certified By UK Secretary Of State

ವಿಜಯ್ ಮಲ್ಯ ಗಡಿಪಾರಿಗೆ ಸಂಬಂಧಿಸಿದ ಕೋರ್ಟ್ ಮನವಿಯನ್ನು ವಿದೇಶಾಂಗ ವ್ಯವಹಾರ ಇಲಾಖೆಯು ಇತ್ತೀಚೆಗೆ ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿತ್ತು.

ಭಾರತ- ಬ್ರಿಟನ್ ಪರಸ್ಪರ ಕಾನೂನು ನೆರವು ಒಪ್ಪಂದ (ಎಂಎಲ್ ಎಟಿ)ಯ ಆಧಾರದಲ್ಲಿ ಮಲ್ಯರನ್ನು ಭಾರತಕ್ಕೆ ವಾಪಾಸು ಕರೆ ತರಲು ಜಾರಿ ನಿರ್ದೇಶನಾಲಯವು (ಇ.ಡಿ) ಮಾಡಿರುವ ಮನವಿಗೆ ಮುಂಬೈ ವಿಶೇಷ ನ್ಯಾಯಾಲಯವು ಸಮ್ಮತಿಸಿದ್ದು, ಆ ವಿವರಗಳನ್ನು ಗೃಹ ಇಲಾಖೆಯು ವಿದೇಶಾಂಗ ಇಲಾಖೆಗೆ ಒದಗಿಸಿತ್ತು.

2016 ರ ಏಪ್ರಿಲ್‍ ನಿಂದ ಬ್ರಿಟನ್‍ ನಲ್ಲಿ ನೆಲೆಸಿರುವ ಮಲ್ಯ ಅವರಿಗೆ ಈಗ ಬಿಸಿ ತಟ್ಟಲಾರಂಭಿಸಿದ್ದು, ತಮ್ಮನ್ನು ದೇಶದಿಂದ ಬಲವಂತವಾಗಿ ಹೊರದಬ್ಬಲಾಗಿದೆ ಎಂದು ವಾದಿಸುತ್ತಿದ್ದಾರೆ.

English summary
The UK has conveyed to India that its request for extradition of industrialist Vijay Mallya, who has been declared a proclaimed offender, has been certified by the secretary of state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X