Expressway Toll Fee: ಇಂತಹ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿ
Expressway Toll Fee: ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇ ರಸ್ತೆಗಳು ಹಾಳಾಗಿದ್ದರೂ ಸಹ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಇದೀಗ ಇದಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುವ ಮೂಲಕ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಕಾಮಗಾರಿ ಪೂರ್ಣಗೊಳ್ಳದ ಎಕ್ಸ್‌ಪ್ರೆಸ್ ವೇಗಳಲ್ಲಿ ಸಂಚರಿಸುವಾಗ ಹೆಚ್ಚಿನ ಟೋಲ್ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ದೇಶದಲ್ಲಿ ಎಕ್ಸ್‌ಪ್ರೆಸ್ ನಿರ್ಮಾಣ ಹಾಗೂ ಅಭಿವೃದ್ಧಿಯಲ್ಲಿ ದೊಟ್ಟ ಮಟ್ಟದಲ್ಲಿ ಕ್ರಾಂತಿಯೇ ಆಗುತ್ತಿದೆ. ಆದರೆ, ಹಲವು ಭಾಗಗಳಲ್ಲಿ ಎಕ್ಸ್‌ಪ್ರೆಸ್ ವೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸಹ ಟೋಲ್ ಸಂಗ್ರಹ ಮಾಡಿ ವಾಹನ ಸವಾರರ ಜೀಬಿಗೆ ಕತ್ತರಿ ಹಾಕುವ ಕೆಲಸಗಳು ನಡೆಯುತ್ತಿವೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಇದೀಗ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಕಡಿವಾಣ ಹಾಕುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಟೋಲ್ ಶುಲ್ಕ ಪಾವತಿ ಕುರಿತು ಮಾಹಿತಿ
ಭಾರತದ ರಸ್ತೆ ಮೂಲಸೌಕರ್ಯದಲ್ಲಿ ಕ್ರಾಂತಿ ಉಂಟುಮಾಡುತ್ತಿರುವ ಎಕ್ಸ್‌ಪ್ರೆಸ್‌ವೇಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಸಮಾಧಾನಕರ ಸುದ್ದಿ ನೀಡಿದೆ. ಇನ್ನುಂದೆ ಅಪೂರ್ಣಗೊಂಡಿರುವ ಎಕ್ಸ್‌ಪ್ರಸ್‌ವೇ ವೇಗಳಲ್ಲಿ ಸಂಚಾರ ಮಾಡುವಾಗ ನೀವು ಹೆಚ್ಚಿನ ದರದ ಟೋಲ್ ಪಾವತಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಹೊಸ ನಿಯಮ ಜಾರಿ: ಎಕ್ಸ್‌ಪ್ರೆಸ್‌ವೇಗಳು ಸಂಪೂರ್ಣವಾಗಿ ಸಿದ್ಧವಾಗುವವರೆಗೆ ಅವುಗಳ ತೆರೆದ ಭಾಗದಲ್ಲಿ ಹೆಚ್ಚುವರಿ ಪ್ರೀಮಿಯಂ ಟೋಲ್ ವಸೂಲಿ ಮಾಡಬಾರದು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಇನ್ನುಂದೆ, ಸ್ವಲ್ಪ ಮಟ್ಟಿಗೆ ನಿರ್ಮಾಣಗೊಂಡಿರುವ ಎಕ್ಸ್‌ಪ್ರೆಸ್ ವೇಗಳ ಮೇಲೆ ಸಾಮಾನ್ಯ ರಾಷ್ಟ್ರೀಯ ಹೆದ್ದಾರಿಗಳಂತೆ ಟೋಲ್ ದರ ವಿಧಿಸಲಾಗುತ್ತದೆ.
ವಾಹನ ಸವಾರರ ಜೇಬಿಗೆ ಕತ್ತರಿ
ಈ ಹಿಂದೆ ಎಕ್ಸ್‌ಪ್ರೆಸ್‌ವೇಗಳ ಕೆಲವು ಭಾಗಗಳು ಮಾತ್ರ ಸಂಚಾರಕ್ಕೆ ತೆರೆದಿದ್ದರೂ ಸಹ, ಸಾಮಾನ್ಯ ಹೆದ್ದಾರಿಗಳಿಗಿಂತ ಶೇಕಡ 25ರಷ್ಟು ಹೆಚ್ಚಿನ ಟೋಲ್ ವಸೂಲಿ ಮಾಡಲಾಗುತ್ತಿತ್ತು. ಇದರಿಂದ ವಾಹನ ಚಾಲಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿತ್ತು. ಇದಕ್ಕೆ ವ್ಯಾಪಕ ಆಕ್ರೋಶಗಳು ಕೂಡ ವ್ಯಕ್ತವಾಗುತ್ತಲಿದ್ದವು.
ಹೊಸ ನಿಯಮ ಹೇಳುವುದೇನು?
ಹೊಸ ನಿಯಮದಂತೆ, ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿಗದಿ ಮತ್ತು ವಸೂಲಿ) ನಿಯಮಗಳು, 2008ಕ್ಕೆ ತಿದ್ದುಪಡಿ ತರಲಾಗಿದ್ದು, ಫೆಬ್ರವರಿ 15, 2026ರಿಂದ ಜಾರಿಗೆ ಬರಲಿದೆ. ರಸ್ತೆ ಸಂಪೂರ್ಣವಾಗಿ ಸಿದ್ಧವಾಗುವವರೆಗೆ ಅಥವಾ ಗರಿಷ್ಠ ಒಂದು ವರ್ಷದವರೆಗೆ ಈ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ. ಸರ್ಕಾರದ ಈ ಕ್ರಮದಿಂದ ವಾಹನ ಚಾಲಕರಿಗೆ ಶೇಕಡ 25ರಷ್ಟು ಟೋಲ್ ಹಣ ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನಿರ್ಧಾರದ ಉದ್ದೇಶಗಳೇನು ತಿಳಿಯಿರಿ
* ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರ ಕಡಿಮೆ ಇರುವುದರಿಂದ ಜನರು ಅರ್ಧಂಬರ್ಧ ಸಿದ್ಧವಾಗಿರುವ ಎಕ್ಸ್‌ಪ್ರೆಸ್‌ವೇಗಳನ್ನು ಬಳಸಲು ಮುಂದಾಗುತ್ತಾರೆ. ಇದರಿಂದ ಹಳೆಯ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
* ಸಂಚಾರ ದಟ್ಟಣೆ ಕಡಿಮೆಯಾಗುವುದರಿಂದ ಪ್ರಯಾಣದ ಸಮಯ ಉಳಿತಾಯ ಆಗಲಿದೆ.
* ಸಂಚಾರ ದಟ್ಟಣೆ ಕಡಿಮೆ ಆಗುವುದರಿಂದ ವಾಹನಗಳಿಂದ ಹೊರಹೊಮ್ಮುವ ಮಾಲಿನ್ಯವೂ ನಿಯಂತ್ರಣಕ್ಕೆ ಬರಲಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಕೆಂದ್ರ ಸರ್ಕಾರದ ಈ ಉದ್ಧೇಶದಿಂದ ಪ್ರಯಾಣಿಕರ ಮೇಲೆ ಬೀಳುವ ಆರ್ಥಿಕ ಹೊರೆ ತಗ್ಗಲಿದ್ದು, ಎಕ್ಸ್‌ಪ್ರೆಸ್ ವೇ ಬಳಸುವವರ ಸಂಖ್ಯೆ ಹೆಚ್ಚಳ ಆಗಲಿದೆ. ಜೊತೆಗೆ ಸಂಚಾರ ದಟ್ಟಣೆ ಕಡಿಮೆ ಆಗುವುದಲ್ಲದೆ, ಸಮಯ ಉಳಿತಾಯ ಕೂಡ ಆಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications