ಹಿಂದುತ್ವ ಪ್ರತಿಪಾದಕರಿಗೆ ಕೈತಪ್ಪಿದ ಬಿಜೆಪಿ ಟಿಕೆಟ್: ಕಾರಣ ಏನು?

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹ್ಯಾಟ್ರಿಕ್ ಗೆಲುವಿಗೆ ರಣತಂತ್ರ ರೂಪಿಸಿ, ಬಿಜೆಪಿ ನಾಯಕರು ಸರ್ವ ಸಿದ್ಧತೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಅಭ್ಯರ್ಥಿ ಆಯ್ಕೆಯಲ್ಲೂ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದ್ದಾರೆ ಬಿಜೆಪಿ ವರಿಷ್ಠರು. ಹೀಗಿದ್ದಾಗ 2024ರ ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವದ ಪ್ರತಿಪಾದಕರಿಗೆ ಟಿಕೆಟ್ ಮಿಸ್ ಆಗಿದೆ! ಹಾಗಾದರೆ ಇದೀಗ ಟಿಕೆಟ್ ಕಳೆದುಕೊಂಡ ಬಿಜೆಪಿಯ ಹಿಂದುತ್ವ ಪ್ರತಿಪಾದಕರು ಯಾರೆಲ್ಲಾ? ಬನ್ನಿ ತಿಳಿಯೋಣ.

ಬಿಜೆಪಿ ನಿನ್ನೆ ತನ್ನ ಮತ್ತೊಂದು ಪಟ್ಟಿಯನ್ನು ಪ್ರಕಟಿಸಿದೆ, ಈ ಪಟ್ಟಿಯಲ್ಲಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಹೀಗಿದ್ದಾಗ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಲು ಅನುಕೂಲವಾಗುತ್ತೆ ಎಂಬ ಹೇಳಿಕೆಯನ್ನ ನೀಡಿ ಬಿಜೆಪಿ ಹೈಕಮಾಂಡ್ ರೊಚ್ಚಿಗೇಳುವಂತೆ ಮಾಡಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ್‌ ಹೆಗಡೆ ಅವರಿಗೂ ಕೈಕೊಡಲಾಗಿದೆ. ಅನಂತ ಕುಮಾರ್‌ ಹೆಗಡೆ ಮಾತ್ರವಲ್ಲ, ಇದೇ ರೀತಿಯೆ ಹಿಂದುತ್ವ ಪ್ರತಿಪಾದನೆ ಮಾಡಿದ್ದ ಇನ್ನೂ ಹಲವರಿಗೆ ಟಿಕೆಟ್ ಈ ಬಾರಿ ಮಿಸ್ ಆಗಿದೆ. ಈ ಮೂಲಕ ಬಿಜೆಪಿ ಹೂಡಿರುವ ರಣತಂತ್ರ ಏನು? ಮುಂದೆ ಓದಿ.

Explore Why These BJP MPs Not Get Ticket To Contest For Lok Sabha Election 2024

ಪ್ರತಾಪ್ ಸಿಂಹ, ನಳಿನ್ ಕಟೀಲ್...

ಈಗ ಟಿಕೆಟ್ ಮಿಸ್ ಆಗಿರುವ ಹಾಲಿ ಸಂಸದರ ಪೈಕಿ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದ ಹಲವು ಸಂಸದರು ಮನೆಗೆ ಹೋಗಿದ್ದಾರೆ. ಅನಂತ ಕುಮಾರ್‌ ಹೆಗಡೆ ಅವರ ರೀತಿ ಪ್ರತಾಪ್ ಸಿಂಹ, ನಳಿನ್ ಕಟೀಲ್ ಕೂಡ ಟಿಕೆಟ್ ಪಡೆಯಲು ಆಗಲೇ ಇಲ್ಲ. ಇನ್ನುಳಿದಂತೆ ಹೊರಗೆ ಅಂದ್ರೆ ದೇಶದ ಲೆಕ್ಕದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೂ ಟಿಕೆಟ್ ಮಿಸ್ ಆಗಿದೆ.

ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಬಿಜೆಪಿ ಹೈಕಮಾಂಡ್ ಇವರಿಗೆಲ್ಲಾ ಟಿಕೆಟ್‌ನ ಮಿಸ್ ಮಾಡಿದ್ದು ಏಕೆ? ಹಾಗಾದರೆ ಹಿಂದುತ್ವದ ಹೊರತಾಗಿ ಈಗ ಬೇರೆಯದ್ದೇ ರಣತಂತ್ರ ಹೂಡಿದೆಯಾ ಬಿಜೆಪಿ? ಈ ಮೂಲಕ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳ ವಿರುದ್ಧ ಬಿಜೆಪಿ ಹೈಕಮಾಂಡ್ ಹೂಡಿರುವ ರಣತಂತ್ರ ಏನು? ಬನ್ನಿ ತಿಳಿಯೋಣ.

Explore Why These BJP MPs Not Get Ticket To Contest For Lok Sabha Election 2024

ಕರ್ನಾಟಕದಲ್ಲಿ ತೀವ್ರ ಸಂಚಲನ

ಬಿಜೆಪಿ ಈಗ ಟಿಕೆಟ್ ನೀಡಿರುವ ಸಂಸದರನ್ನು ಅಭಿವೃದ್ಧಿ ಆಧಾರದಲ್ಲಿ ಆಯ್ಕೆ ಮಾಡಿದೆ. ಆದರೆ ಅಭಿವೃದ್ಧಿ ಮಾಡದೆ, ಕೇವಲ ಉಗ್ರವಾಗಿ ಭಾಷಣ ಮಾಡಿದ್ದ ಹಾಲಿ ಸಂಸದರಿಗೆಲ್ಲಾ ಟಿಕೆಟ್ ಮಿಸ್ ಆಗಿದೆ. ಈ ಮೂಲಕ ವಿರೋಧ ಪಕ್ಷಗಳ ತಂತ್ರವನ್ನು ಬುಡಮೇಲು ಮಾಡಿ ಹೊಸ ರಣತಂತ್ರ ರೂಪಿಸಿದ್ದಾರೆ ಬಿಜೆಪಿ ನಾಯಕರು. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಈಗ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಅದ್ರಲ್ಲೂ ಅನಂತ ಕುಮಾರ್ ಹೆಗಡೆ & ಪ್ರತಾಪ್ ಸಿಂಹ, ನಳಿನ್ ಕಟೀಲ್ ಅವರಿಗೆ ಟಿಕೆಟ್ ಮಿಸ್ ಆಗಿದ್ದು ಕರ್ನಾಟಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಬಿಜೆಪಿ ಈವರೆಗೆ ಕರ್ನಾಟಕದಲ್ಲಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಆದರೆ ಈ 24 ಕ್ಷೇತ್ರಗಳಲ್ಲಿ ಬರೋಬ್ಬರಿ ಶೇಕಡಾ 50ರಷ್ಟು, ಅಂದ್ರೆ 12 ಹಾಲಿ ಸಂಸದರಿಗು ಟಿಕೆಟ್ ಮಿಸ್ ಆಗಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆ ಅಖಾಡ ಮತ್ತಷ್ಟು, ಮೊಗದಷ್ಟು ರಂಗೇರುತ್ತಿದೆ. ಸೋಲುವುದು ಯಾರು? ಗೆಲ್ಲುವುದು ಯಾರು? ಅನ್ನೋದನ್ನ ಮತದಾರ ಪ್ರಭು ನಿರ್ಧಾರ ಮಾಡಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+