ಅಂತರಾಷ್ಟ್ರೀಯ ಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿದ ಟ್ವಿಟರ್‌ ಮಾಜಿ ಸಿಇಒ ಹೇಳಿಕೆ: ಮೋದಿ ಮೇಲೆ ಮುಗಿಬಿದ್ದ ವಿಪಕ್ಷ, ರೈತ ನಾಯಕರು

ನವದೆಹಲಿ, ಜೂನ್‌ 13: ರೈತರ ಪ್ರತಿಭಟನೆಯ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಮಾಜಿಕ ಮಾಧ್ಯಮ 'ಟ್ವಿಟರ್‌' ಗೆ ಬೆದರಿಕೆ ಹಾಕಿತ್ತು ಎಂದು ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಆರೋಪಿಸಿದ್ದಾರೆ. ಇದು ಭಾರತದಲ್ಲಿ ಭಾರೀ ತಲ್ಲಣವನ್ನೇ ಸೃಷ್ಟಿಸಿದೆ. ವಿಪಕ್ಷಗಳು ಸೇರಿದಂತೆ ರೈತ ನಾಯಕರು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

'ಭಾರತದಲ್ಲಿ ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಇದು ತೋರಿಸಿಕೊಡುತ್ತಿದೆ' ಎಂದು ಕಾಂಗ್ರೆಸ್‌ ಹೇಳಿದೆ. ಈ ಹೇಳಿಕೆಯು ಗಂಭೀರವಾಗಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಉತ್ತರ ನೀಡಲೇಬೇಕು ಎಂದು ಒತ್ತಾಯಿಸಿದೆ.

Ex Twitter CEO: Opposition Slams PM Modi Over Threatening Twitter Ban in India During Farmer Protest

'ದೇಶದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಹೇಗೆ ಅಪಾಯದಲ್ಲಿದೆ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಪರದೆಯ ಹಿಂದೆ ನಿಂತು ಪ್ರಜಾಪ್ರಭುತ್ವವನ್ನು ಹೇಗೆ ಕತ್ತು ಹಿಸುಕಲಾಗುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಇದು ಸ್ಪಷ್ಟವಾಗುತ್ತದೆ' ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, 'ಯುಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಡೋರ್ಸೆ ಅವರು ರೈತರ ಪ್ರತಿಭಟನೆಗಳು ಮತ್ತು ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿರ್ಬಂಧಿಸಲು ಮೋದಿ ಆಡಳಿತ ಒತ್ತಡ ಹೇರಿತ್ತು ಎಂಬುದಾಗಿ ಹೇಳಿದ್ದಾರೆ' ಎಂದು ಟ್ವೀಟ್‌ ಮಾಡಿದ್ದಾರೆ.

ಒಂದು ವೇಳೆ ತಾವು ಹೇಳಿದ ಹಾಗೆ ಮಾಡದಿದ್ದಲ್ಲಿ ಭಾರತದಲ್ಲಿ ಟ್ವಿಟರ್‌ ಅನ್ನು ಮುಚ್ಚುವುದಾಗಿಯೂ, ಟ್ವಿಟರ್‌ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸುವುದಾಗಿ ಮೋದಿ ಸರ್ಕಾರ ಬೆದರಿಕೆ ಹಾಕಿತ್ತು ಎಂಬುದಾಗಿ ಅವರು ಹೇಳಿದ್ದಾರೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ.

Ex Twitter CEO: Opposition Slams PM Modi Over Threatening Twitter Ban in India During Farmer Protest

ಈ ವಿಚಾರವಾಗಿ ಟ್ವಿಟ್‌ ಮಾಡಿರುವ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, 'ಹೌದು, ದ್ವೇಷ ಭಾಷಣ ಮತ್ತು ಉಗ್ರ ಬಿಜೆಪಿ ಅಜೆಂಡಾಕ್ಕೆ ಟ್ವಿಟರ್‌ನಲ್ಲಿ ಅವಕಾಶ ನೀಡಬೇಕಿತ್ತು. ಮೋದಿ ಸರ್ಕಾರದ ಕಾರ್ಯಸೂಚಿಯನ್ನು ಟ್ವಿಟರ್‌ ಬೆಂಬಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ದಮನಕಾರಿ ನೀತಿಯನ್ನು ಅನುಸರಿಸಿತು. ಜನರು ಮತ್ತು ಪ್ರತಿಪಕ್ಷಗಳು ವೇದಿಕೆಯನ್ನು ಬಳಸಿಕೊಂಡು ಹೋರಾಡಲು ಪ್ರಾರಂಭಿಸಿದ ಕ್ಷಣದಲ್ಲಿ ಸರ್ಕಾರವು ದಮನ ಮಾಡಲು ಪ್ರಾರಂಭಿಸಿತು' ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರು ರೈತ ಮುಖಂಡ ರಾಕೇಶ್ ಟಿಕಾಯತ್, 'ರೈತರ ಪ್ರತಿಭಟನೆಯ ಬಗ್ಗೆ ನಿರೀಕ್ಷಿಸಿದ ರೀತಿಯ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್‌ಗಳು ಬರುತ್ತಿಲ್ಲ ಎಂಬ ಮಾಹಿತಿ ನಮಗೆ ಇತ್ತು. ಅದನ್ನು ಅವರು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಇದನ್ನು ಟ್ವಿಟರ್‌ನ ಸಹ ಸಂಸ್ಥಾಪಕರು ಈಗ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅಂತಹ ಕಂಪನಿಗಳು ಯಾರ ಒತ್ತಡಕ್ಕೂ ಮಣಿಯಬಾರದು. ಭಾರತ ಸರ್ಕಾರವು ಅಂತಹ ಪ್ರಯತ್ನಗಳನ್ನು ಮಾಡಿರಬಹುದು. ಅವರು ಹೇಳಿದ್ದು ಸತ್ಯವೂ ಆಗಿರಬಹುದು' ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಡೋರ್ಸೆ ಅವರ ಹೇಳಿಕೆಯು ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆತಂಕಕಾರಿ ಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+