ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಕಲಿ CIA ವರದಿ'ಯಲ್ಲಿ ಮಾಜಿ ಸಿಎಂ ಬಿಪ್ಲಬ್ ದೇಬ್ ಹೆಸರು, ಪತ್ನಿ ದೂರು

|
Google Oneindia Kannada News

ತ್ರಿಪುರ ಮೇ 18: ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಪತ್ನಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ಹೆಸರಿನ ನಕಲಿ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಪತಿಯ ಹೆಸರನ್ನು ಒಳಗೊಂಡಂತೆ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆಗೂ ಮುನ್ನ ದೇಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮೂರು ದಿನಗಳ ನಂತರ ಈ ದೂರು ದಾಖಲಿಸಲಾಗಿದೆ. ಮಂಗಳವಾರ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬಿಪ್ಲಬ್ ಕುಮಾರ್ ದೇಬ್ ಪತ್ನಿ ನಿತಿ ದೇಬ್ ತಮ್ಮ ದೂರಿನಲ್ಲಿ ಸೋಮವಾರ ವಾಟ್ಸಾಪ್ ಸಂದೇಶದಲ್ಲಿ ತನ್ನ ಪತಿಯ ಹೆಸರನ್ನು ಒಳಗೊಂಡ ಪ್ರಸಾರವೊಂದನ್ನು ಗಮನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಅವರು ಪ್ರಸಾರ ಸಂಪೂರ್ಣ ಸುಳ್ಳು, ಮಾನಹಾನಿಕರವಾಗಿದ್ದು ಪ್ರಚೋದನೆಯಿಂದ ಕೂಡಿದೆ ಎಂದು ಹೇಳಿದ್ದಾರೆ.

Breaking: ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ: ಸಂಜೆ ವೇಳೆಗೆ ಹೊಸ ಸಿಎಂBreaking: ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ: ಸಂಜೆ ವೇಳೆಗೆ ಹೊಸ ಸಿಎಂ

"ಅಪರಿಚಿತ ವಾಟ್ಸಾಪ್‌ ಸಂಖ್ಯೆಯಿಂದ ಸಂದೇಶ ನನಗೆ ರವಾನಿಸಲಾಗಿದೆ. ವರದಿ ಎಂದು ಕರೆಯಲ್ಪಡುವ ವರದಿಯು ನಿಜವಾಗಿ ಅಸ್ತಿತ್ವದಲ್ಲಿಲ್ಲ. ಹೆದರಿಸಲು ಮಾಜಿ ಮುಖ್ಯಮಂತ್ರಿಯ ಹೆಸರಿನಲ್ಲಿ ಪ್ರಸಾರವಾಗುತ್ತಿದೆ ಎಂಬ ಗಂಭೀರ ಅನುಮಾನವಿದೆ' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ಸ್ವೀಕರಿಸಲಾಗಿದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದು ತನಿಖೆ ನಡೆಯುತ್ತಿದೆ.

Ex-Tripura CM Biplab Deb named in fake CIA report, wife files complaint

ಬಿಪ್ಲಬ್ ಕುಮಾರ್ ದೇಬ್ ಅವರು ಮೇ 14 ರಂದು ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2018 ರ ತ್ರಿಪುರಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ದೇಬ್ ರಾಜ್ಯದ ಮುಖ್ಯಮಂತ್ರಿಯಾದರು. ಆದರೀಗ ಎಡರಂಗ ಸರ್ಕಾರದ 25 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗೊಳಿಸಿದರು. ಇದರ ನಡುವೆ ಈಶಾನ್ಯ ರಾಜ್ಯದಲ್ಲಿ 2023 ರಲ್ಲಿ ಮತ ಚಲಾವಣೆ ನಡೆಯಲಿದ್ದು. ಆಡಳಿತಾರೂಢ ಬಿಜೆಪಿಯು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ನಿಂದ ಪ್ರಬಲ ಸವಾಲನ್ನು ಎದುರಿಸಲಿದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.

Ex-Tripura CM Biplab Deb named in fake CIA report, wife files complaint

ದೇಬ್ ಅವರು ಅಗರ್ತಲಾದ ರಾಜಭವನದಲ್ಲಿ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರಿಗೆ ರಾಜೀನಾಮೆ ಸಲ್ಲಿಸಿದರು. ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ರಾಜ್ಯದ ಜನತೆಗೆ ಹೃದಯಪೂರ್ವಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದರು. ಮಾಣಿಕ್ ಸಹಾ ಈಗ ತ್ರಿಪುರಾದ ಮುಖ್ಯಮಂತ್ರಿಯಾಗಿದ್ದು ಮತ್ತು ಅವರು 2023 ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸುವ ನಿರೀಕ್ಷೆಯಿದೆ.

(ಒನ್ಇಂಡಿಯಾ ಸುದ್ದಿ)

English summary
Former Tripura chief minister Biplab Kumar Deb's wife has filed a police complaint alleging that a fake report - attributed to the United States' Central Intelligence Agency (CIA) - is being circulated on social media with her husband's name included.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X