Tomato Price: ಟೊಮೆಟೋಗಳಿಗೂ ರಜೆ ಬೇಕು!: ದರ ಏರಿಕೆಯಿಂದ ಬರ್ಗರ್ ಕಿಂಗ್ ಮಾಡಿದ್ದೇನು?

ಸಾರ್ವಕಾಲಿಕವಾಗಿ ಗರಿಷ್ಠ ದರ ತಲುಪಿದ್ದ ಟೊಮೆಟೊ ದರ ಸದ್ಯ ಇಳಿಕೆಯಾಗುತ್ತಿದೆ. ಟೊಮೆಟೊ ದರ 250 ರೂಪಾಯಿ ಮುಟ್ಟಿದ್ದ ಕಾರಣ, ಹೋಟೆಲ್‌ಗಳಲ್ಲೂ ಕೂಡ ಟೊಮೆಟೊ ಬಳಕೆ ಕಡಿಮೆ ಮಾಡಲಾಗಿತ್ತು. ಪಿಜ್ಜಾ ಔಟ್‌ಲೆಟ್‌ಗಳು ಕೂಡ ಟೊಮೆಟೊ ಬಳಕೆ ಕೈಬಿಟ್ಟಿದ್ದವು. ಈಗ ಬರ್ಗರ್ ಕಿಂಗ್ ಕೂಡ ಟೊಮೆಟೊಗಳಿಗೆ ರಜೆ ನೀಡಿದೆ!

ಉದ್ಯೋಗಿಗಳಿಗೆ ರಜೆ ಕೊಡೋದು ಕಾಮನ್ ಇದ್ಯಾವುದಪ್ಪ ಟೊಮೆಟೊಗಳಿಗೆ ರಜೆ ಅಂದ್ಕೊಂಡ್ರಾ? ಇಲ್ಲಿದೆ ನೋಡಿ ಆಸಕ್ತಿಕರ ಮಾಹಿತಿ. ಟೊಮೆಟೊ ದರ ಹೆಚ್ಚಳದಿಂದ ಫಾಸ್ಟ್ ಫುಡ್ ದೈತ್ಯ ಬರ್ಗರ್ ಕಿಂಗ್ ಇಂಡಿಯಾ, ಭಾರತೀಯ ಔಟ್‌ಲೆಟ್‌ಗಳಲ್ಲಿ ತಮ್ಮ ಮೆನು ಐಟಂಗಳಿಂದ ಟೊಮೆಟೊಗಳನ್ನು ತೆಗೆದುಹಾಕಿದೆ.

 Even Tomatoes Need A Vacation! Burger King India Removes Tomatoes from Menu

ಗುರುವಾರ ರಾಜಧಾನಿ ನವದೆಹಲಿಯ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ "ಟೊಮ್ಯಾಟೊಗಳಿಗೆ ಸಹ ರಜೆ ಬೇಕು!" ಎಂದು ಸೂಚನೆಯಲ್ಲಿ ಹಾಕಲಾಗಿದ್ದು, ಮೆನುಗಳಲ್ಲಿ ಟೊಮೆಟೊ ಇರುವುದಿಲ್ಲ ಎನ್ನುವ ವಿಚಾರವನ್ನು ಹೀಗೆ ವಿಭಿನ್ನವಾಗಿ ಹೇಳಿದೆ.

ದರ ಕಡಿಮೆಯಾದ ನಂತರ ವಾಪಸ್!

"ಟೊಮೆಟೊದ ಗುಣಮಟ್ಟ ಮತ್ತು ಪೂರೈಕೆಯ ಮೇಲೆ ಊಹಿಸಲಾಗದ ಪರಿಸ್ಥಿತಿಗಳಿಂದಾಗಿ, ನಮ್ಮ ಆಹಾರದಲ್ಲಿ ಟೊಮೆಟೊಗಳನ್ನು ಸೇರಿಸಲು ನಮಗೆ ಸಾಧ್ಯವಾಗುತ್ತಿಲ್ಲ, ನಮ್ಮ ಬರ್ಗರ್‌ಗಳಲ್ಲಿ ಟೊಮೆಟೊಗಳನ್ನು ಆದಷ್ಟು ಶೀಘ್ರದಲ್ಲೇ ಬಳಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ." ಎಂದು ಹೇಳಿದೆ.

ಬರ್ಗರ್ ಕಿಂಗ್‌ ಫ್ರ್ಯಾಂಚೈಸ್ 2014 ರಿಂದ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿದೆ, ಗೋಹತ್ಯೆಗೆ ಭಾರತದಲ್ಲಿ ವಿರೋಧ ಇರುವ ಕಾರಣ, ಭಾರತದಲ್ಲಿ ಕೋಳಿ ಮಾಂಸ ಮತ್ತು ಸಸ್ಯಹಾರಗಳನ್ನು ಮೆನುನಲ್ಲಿ ಅಳವಡಿಸಿಕೊಂಡಿದೆ.

ಮೆಕ್‌ಡೊನಾಲ್ಡ್ ಕೂಡ ಟೊಮೆಟೊ ದರ ಏರಿಕೆಯ ಬಿಸಿ ಅನುಭವಿಸಿತ್ತು, ತನ್ನ ಮೆನುಗಳಲ್ಲಿ ಟೊಮೆಟೊ ಇರುವುದಲ್ಲ ಎಂದು ಜುಲೈನಲ್ಲಿ ಹೇಳಿತ್ತು. ಅಮೇರಿಕನ್ ಸ್ಯಾಂಡ್‌ವಿಚ್ ಚೈನ್ ಸಬ್‌ವೇ ಕೂಡ ಜುಲೈನಲ್ಲಿ ಟೊಮೆಟೊ ಬಳಕೆ ಕೈಬಿಟ್ಟಿತ್ತು. ಬೆಲೆ ಹೆಚ್ಚಳ ಮಾತ್ರವಲ್ಲ ಗುಣಮಟ್ಟದ ಟೊಮಟೊ ಪೂರೈಕೆ ಸಮಸ್ಯೆ ಕೂಡ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ನೇಪಾಳದಿಂದ ಆಮದು

ಕಳೆದ ವಾರ, ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಆಹಾರದ ಬೆಲೆಗಳು ಮನೆಯ ಬಜೆಟ್‌ಗಳ ಮೇಲೆ ಪರಿಣಾಮ ಬೀರಿದೆ ಮತ್ತು ಭವಿಷ್ಯ ದಿನಗಳು ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಪ್ರಮುಖ ಉತ್ಪಾದನಾ ವಲಯಗಳಲ್ಲಿ ಕೆಟ್ಟ ಹವಾಮಾನ ಮತ್ತು ಕೀಟಗಳ ದಾಳಿಯ ನಂತರ ಟೊಮೆಟೊ ಬೆಲೆಗಳು ಗಗನಕ್ಕೇರಿವೆ ಎಂದು ವರದಿಯಲ್ಲಿ ಹೇಳಿದೆ.

ಆಹಾರದ ಬೆಲೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲು ನೆರೆಯ ನೇಪಾಳದಿಂದ ಮೂಲ ಟೊಮೆಟೊಗಳ ಮೇಲಿನ ಆಮದು ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+