ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿ ವೈರಸ್‌ ಮುಕ್ತರಾಗಿದ್ದಾರೆ ಎಂದು ತಿಳಿಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಏಪ್ರಿಲ್14: ಕೊರೊನಾ ವೈರಸ್ ಇಡೀ ವಿಶ್ವವನ್ನು ಚಿಂತೆಗೆ ದೂಡಿದೆ. ಹಾಗಾದರೆ ಓರ್ವ ವ್ಯಕ್ತಿ ವೈರಸ್ ಮುಕ್ತರಾಗಿದ್ದಾರೆ ಎಂದು ನಾವು ತಿಳಿಯುವುದು ಹೇಗೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ.

Recommended Video

ಏರ್ ಸ್ಟ್ರೈಕ್ ಬಗ್ಗೆ ಸಂಶಯಿಸುವವರನ್ನು ನಂಬಲು ಸಾಧ್ಯವೆ? : ಮೋದಿ

ಆಸ್ಪತ್ರೆಯಲ್ಲಿ ವರದಿ ನೆಗೆಟೀವ್ ಬಂದಾಕ್ಷಣ ಕೊರೊನಾದಿಂದ ಮುಕ್ತವಾಗಿದ್ದಾರೆ ಎಂದು ಅರ್ಥವಲ್ಲ.

ಕೊರೊನಾ ಲಕ್ಷಣಗಳೆಲ್ಲವೂ ಹೋಗಿ ವ್ಯಕ್ತಿಗೆ ತಾನು ಆರಾಮವಾಗಿದ್ದೇನೆ ಎಂಬ ಭಾವನೆ ಮೂಡಬೇಕು. ಹಾಗೆಯೇ ಸಾಕಷ್ಟು ದಿನಗಳವರೆಗೆ ಆತನಲ್ಲಿ ಕೊರೊನಾದ ಯಾವುದೇ ಸಣ್ಣಪುಟ್ಟ ಲಕ್ಷಣಗಳು ಕೂಡ ಗೋಚರವಾಗಬಾರದು.

ಯಾವಾಗ ರೋಗದ ಯಾವುದೇ ಗುಣಲಕ್ಷಣವಿಲ್ಲದೆಯೇ ಮೊದಲಿನಂತೆ ಆದಂತೆ ನಿಮಗೆ ಅನಿಸುತ್ತದೆಯೋ ಆಗ ಮಾತ್ರ ಆ ವ್ಯಕ್ತಿ ವೈರಸ್ ಮುಕ್ತನಾಗುತ್ತಾನೆ.

Even If You Are Virus Free How Do You Know

ಸ್ವಾಬ್ ಪರೀಕ್ಷೆ ಮಾಡಿ ಒಂದು ವಾರದ ಬಳಿಕ ವೈರಸ್ ಪಾಸಿಟಿವ್ ಇದೆ ಎಂದು ವರದಿ ಬರುತ್ತದೆ. ಸಲಾಟಾ ಹೇಳುವ ಪ್ರಕಾರ, ಸಾಕಷ್ಟು ಪ್ರಕರಗಳಲ್ಲಿ ಸ್ವಾಬ್‌ಟೆಸ್ಟ್ ಮಾಡಿಸಿದಾಗ ಒಂದು ವಾರದಷ್ಟೊತ್ತಿಗೆ ವೈರಸ್ ಪಾಸಿಟಿವ್ ಎಂದು ಬರುತ್ತದೆ. ಹತ್ತು ದಿನದ ನಂತರ ನೆಗೆಟಿವ್ ಎಂದು ಬರುತ್ತದೆ. ವೈದ್ಯರು ನೀನು ವೈರಸ್ ಮುಕ್ತನಾಗಿದ್ದೀಯ, ನಿನಗೆ ಯಾವುದೇ ಕಾಯಿಲೆ ಇಲ್ಲ ಎಂದು ಮನೆಗೆ ಕಳುಹಿಸಿಬಿಡುತ್ತಾರೆ.

ಆದರೆ ಸಾಕಷ್ಟು ಗಂಭೀರ ಪ್ರಕರಣಗಳಲ್ಲಿ 37ದಿನಗಳ ಬಳಿಕ ವರದಿ ಪಾಸಿಟಿವ್ ಎಂದು ಬಂದಿರುವ ನಿದರ್ಶನಗಳಿವೆ.

ಅಮೆರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಆಂಡ್ ಕ್ರಿಟಿಕಲ್ ಮೆಡಿಸನ್ ಮಾರ್ಚ್ 27 ರಂದು ನೀಡಿದ ವರದಿ ಪ್ರಕಾರ , ಸಾಕಷ್ಟು ಪ್ರಕರಣಗಳಲ್ಲಿ ಸುಮಾರು ಎಂಟು ದಿನಗಳಷ್ಟೊತ್ತಿಗೆ ಕೊರೊನಾ ಲಕ್ಷಣಗಳು ಮಾಯವಾಗುತ್ತವೆ.

ನೆಗೆಟಿವ್ ವರದಿ ಬಂದಾಕ್ಷಣ ರೋಗ ಕಡಿಮೆಯಾಗಿದೆ ಎಂದು ಭಾವಿಸಬಾರದು ಅದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಸಾಕಷ್ಟು ಪ್ರಕಣಗಳಲ್ಲಿ ಶ್ವಾಸನಾಳವನ್ನು ಪರೀಕ್ಷಿಸಿದ್ದೇವೆ, ಕೆಲವರು ಕಫ, ಉಸಿರಾಟದ ತೊಂದರೆ ಇದ್ದವರ ವರದಿ ಕೂಡ ನೆಗೆಟಿವ್ ಬಂದಿದೆ. ಆದರೆ ಈ ಲಕ್ಷಣಗಳು ಹೆಚ್ಚು ದಿನಗಳ ಕಾಲ ಇರಲಿಲ್ಲ ಎಂದು ಸಲಾಟ ಹೇಳುತ್ತಾರೆ.

English summary
Cearly affecting those who have tested positive For Coronavirus. But its reach is much more widespread. Much remains to be studied about when symptoms are gone and a person “feels better” versus when they are no longer infectious, especially among people who have mild or no symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X