ಉಪ್ಪಿನ ಬೆಲೆ ಕೆಜಿಗೆ 150 ರೂ ಆಯ್ತಪ್ಪಾ!

ನಿಜಕ್ಕೂ Essential Commodity: ಇತ್ತೀಚೆಗೆ ಒಡಿಶಾದಲ್ಲಿ ಕೆಜಿ ಉಪ್ಪು 60 ರೂ. ಗೆ ತಲುಪಿತ್ತು. ಅದರ ಬೆನ್ನಿಗೇ ಈಗ ಬಿಹಾರದಲ್ಲಿ ಒಂದು ಕೆಜಿ ಉಪ್ಪು 150 ರೂ.ಗೆ ಮಾರಾಟವಾಗತೊಡಗಿದೆ. ಒಡಿಶಾದಲ್ಲಿ ಕಾಣಿಸಿಕೊಂಡ ಉಪ್ಪಿನ ಕೊರತೆದ ವದಂತಿ ಪಕ್ಕದ ಬಿಹಾರದಲ್ಲು ಕೇಳಿಬಂದಿದೆ. ಅಂದಹಾಗೆ, ಭಾರತದ ಉಪ್ಪಿನ ರಾಜಧಾನಿ ಗುಜರಾತ್. ಇಲ್ಲಿ ಉಪ್ಪು ಉತ್ಪಾದನೆ ಹೇರಳವಾಗಿದೆ.
ಉಪ್ಪಿಗೆ ತತ್ವಾರ: ಉಪ್ಪಿನ ಬೆಲೆ 150 ರೂ ಆಗಿದೆಯಂತೆ ಎಂಬ ಆತಂಕಕಾರಿ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಉಪ್ಪಿನ ಬೆಲೆ ತೀವ್ರ ಬೆಲೆ ಏರಿಕೆ ಕಂಡಿದೆ. ಆದರೆ, ರಾಜ್ಯದಲ್ಲಿ ಉಪ್ಪಿಗೆ ಕೊರತೆ ಇಲ್ಲ. ಇದೊಂದು ಸುಳ್ಳು ಪ್ರಚಾರ. ಅಷ್ಟೊಂದು ಬೆಲೆ ಕೊಟ್ಟು ಉಪ್ಪು ಖರೀದಿಸಬೇಡಿ ಎಂದು ಬಿಹಾರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಶ್ಯಾಮ್ ರಝಾಕ್ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಬಿಹಾರದ ಗ್ರಾಮಾಂತರ ಪ್ರದೇಶಗಳಲ್ಲಿ ಉಪ್ಪಿನ ಬೆಲೆ ಗಗನದೆತ್ತರಕ್ಕೇರಿದ ಎಂದು ಹೇಳಲಾಗಿದೆ. ಸಿತಾಮರಿ, ಸಮಷ್ಟಿಪುರ, ಮಧುಬನಿ, ಶೋಹರ್ ಜಿಲ್ಲೆಗಳಲ್ಲಿ 50ರಿಂದ 150 ರೂ.ವರೆಗೆ ಉಪ್ಪು ದರ ಏರಿದೆ. ಉಪ್ಪು ಅಲಭ್ಯತೆ ಸುಳ್ಳು ವದಂತಿಯಿಂದ ವ್ಯಾಪಾರಿಗಳ ಕಿಸೆ ತುಂಬಿದೆ.
ಗಾಯದ ಮೇಲೆ ಉಪ್ಪು ಸುರಿದಂತೆ:
ಇದೇ ವೇಳೆ ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಗುರುವಾರ ಟ್ವೀಟ್ ಮಾಡಿ ರಾಜ್ಯದ ಹಲವು ಭಾಗಗಳಲ್ಲಿ ಒಂದು ಕೆಜಿ ಉಪ್ಪು 100 ರೂ.ಗೆ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಈ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಆಡಳಿತಾರೂಢ ಜೆಡಿಯು ಆರೋಪಿಸಿದೆ. ಬುಧವಾರವಷ್ಟೇ ಹೆಚ್ಚಿನ ದರಕ್ಕೆ ಉಪ್ಪು ಮಾರಾಟ ಮಾಡಿದ್ದಕ್ಕಾಗಿ ಬಿಹಾರದಲ್ಲಿ Essential Commodities Act ಕಾಯಿದೆಯಡಿ ನಾಲ್ವರನ್ನು ಬಂಧಿಸಲಾಗಿತ್ತು. (ಚಿತ್ರ)












Click it and Unblock the Notifications