ತಿರುಮಲದಲ್ಲಿ ರೊಚ್ಚಿಗೆದ್ದ ಆನೆಯಿಂದ ಮಾವುತನ ಕಾಲು ಮುರಿತ

Posted By:
Subscribe to Oneindia Kannada

ತಿರುಪತಿ, ಡಿಸೆಂಬರ್ 19: ರೊಚ್ಚಿಗೆದ್ದ ಆನೆಯ ದಾಳಿಯಿಂದ ಗಾಯಗೊಂಡ ಮಾವುತರೊಬ್ಬರು, ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಸಂಜೆ ತಿರುಮಲದಲ್ಲಿ ನಡೆದಿದೆ. ಗಂಗಯ್ಯ (39) ಗಾಯಗೊಂಡ ಮಾವುತ. ಶ್ರೀ ಭೂವರಾಹ ಸ್ವಾಮಿ ದೇವಾಲಯದ ಬಳಿ ಮಾವುತ ಗಂಗಯ್ಯ ಅವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ಷ್ಮಿ, ಅವನಿಜಾ ಎಂಬೆರಡು ಆನೆಗಳನ್ನು ಸಹಸ್ರ ದೀಪಾಲಂಕಾರ ಸೇವೆಗಾಗಿ ಕರೆತರುವಾಗ ಭೂವರಾಹ ದೇಗುಲದ ಬಳಿ ಲಕ್ಷ್ಮಿ ಎಂಬ ಆನೆಯ ಮೇಲೆ ಕೂತಿದ್ದ ಗಂಗಯ್ಯ ಅವರನ್ನು ನೆಲಕ್ಕೆ ಕೆಡವಿ, ಆತನ ಕಾಲನ್ನು ತುಳಿದಿದೆ. ಆ ವೇಳೆ ಗಂಗಯ್ಯ ಪ್ರಜ್ಞೆ ತಪ್ಪಿದರು. ಮತ್ತೊಂದು ಆನೆ ಅವನಿಜಾಳನ್ನು ಕರೆತರುತ್ತಿದ್ದ ಮಾವುತ ಎರಡನ್ನೂ ನಿಯಂತ್ರಣಕ್ಕೆ ತಂದು, ವಾಪಸ್ ಶೆಡ್ ಗೆ ಕರೆದೊಯ್ದರು.[ಚಿತ್ರದುರ್ಗದಲ್ಲಿ ಆನೆ ದಾಳಿಗೆ ಗರ್ಭಿಣಿ ಬಲಿ]

Elephant

ಗಂಗಯ್ಯ ಅವರನ್ನು ಬಿಐಆರ್ ಆರ್ ಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತನ ಜೀವಕ್ಕೆ ಅಪಾಯವಿಲ್ಲ. ಆದರೆ ಮುರಿದ ಕಾಲಿಗೆ ಪ್ಲೇಟ್ ಅಳವಡಿಸಲಾಗಿದೆ. ಲಕ್ಷ್ಮಿ ಆನೆಯು ಸಹಜ ಸ್ಥಿತಿಗೆ ಮರಳುವವರೆಗೆ ತಜ್ಞರ ಪರಿಶೀಲನೆಯಲ್ಲಿ ಇರಿಸಲಾಗುವುದು. ನಿತ್ಯದ ಸೇವೆಗೆ ಅದನ್ನು ಬಳಸದಿರಲು ನಿರ್ಧರಿಸಿದ್ದೇವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 39-year-old mahout was severely injured when an elephant went berserk near Sri Bhuvaraha Swamy temple at Tirumala on Sunday evening.
Please Wait while comments are loading...