ವಿದ್ಯುತ್ ನಿಂದ ಬೆಳಗುತ್ತಿದೆಯೇ ಗ್ರಾಮೀಣ ಭಾರತ?

By: ನಿತಿನ್ ಮೆಹ್ತಾ ಮತ್ತು ಪ್ರಣವ್ ಗುಪ್ತ
Subscribe to Oneindia Kannada

ಇನ್ನು 1000 ದಿನದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದ 18452 ಹಳ್ಳಿಗಳಿಗೆ ವಿದ್ಯುತ್ ಪೂರೈಸಲಾಗುವುದು ಎಂದು ತಾವು ಪ್ರಧಾನಿ ಆದ ನಂತರ ಮಾತನಾಡಿದ ಎರಡನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಂದರೆ 2015ರಲ್ಲಿ ನರೇಂದ್ರ ಮೋದಿ ಮಾತು ಕೊಟ್ಟಿದ್ದರು.

ಇನ್ನು ವಿದ್ಯುತ್ ಪೂರೈಕೆ ಜವಾಬ್ದಾರಿ ಹೊತ್ತಿರುವ ಸಚಿವಾಲಯವು 24x7 ದೇಶದಾದ್ಯಂತ ವಿದ್ಯುತ್ ಪೂರೈಕೆ ಮಾಡುವ ಮಾತು ಕೊಟ್ಟಿತು. ಈ ಭರವಸೆಯನ್ನು ಪೂರೈಸುವುದಕ್ಕೆ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸುವುದೊಂದೇ ಅಲ್ಲ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಗೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸುವುದು ಕೂಡ ಅಗತ್ಯ್.

Electrifying Rural India?

ತಳಮಟ್ಟದಿಂದ ಆರಭವಾಗಿತ್ತು ಕೆಲಸ
ಹೀಗೆ ಕೆಂಪು ಕೋಟೆಯ ಮೇಲೆ ನಿಂತು ಪ್ರಧಾನಿಗಳು ಇಂಥದ್ದೊಂದು ಭರವಸೆ ನೀಡುವ ಮುಂಚೆಯೇ ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ್ ಜ್ಯೋತಿ ಯೋಜನಾ (ಡಿಡಿಯುಜಿಜೆವೈ) ಅಧಿಕೃತವಾಗಿ ಜಾರಿಗೆ ಬಂದಾಗಿತ್ತು. ಗ್ರಾಮೀಣ ವಿದ್ಯುದ್ದೀಕರಣ ಅನ್ನೋದು ಸರಕಾರದ ಮಹತ್ವಾಕಾಂಕ್ಷಿ ಯೋಜನೆ.

ಗ್ರಾಮೀಣ ಭಾಗದಲ್ಲಿ ಸಾಮೂಹಿಕವಾಗಿ ವಿದ್ಯುತ್ ಸಂಪರ್ಕ ಒದಗಿಸುವ ಘನ ಉದ್ದೇಶದಿಂದ ಈ ಯೋಜನೆ ಜಾರಿಯಾಯಿತು. ಈ ಹಿಂದೆ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಇತ್ತು. ಅದಕ್ಕೆ ಪರ್ಯಾಯವಾಗಿ ಹೊಸ ಯೋಜನೆ ಜಾರಿಗೆ ತರಲಾಯಿತು.

ಡಿಡಿಯುಜಿಜೆವೈನ ಮುಖ್ಯ ಉದ್ದೇಶ ಏನೆಂದರೆ ದೇಶದಾದ್ಯಂತ ಪ್ರತ್ಯೇಕ ಫೀಡರ್ ಮಾರ್ಗ ವ್ಯವಸ್ಥೆ ಮಾಡುವುದಾಗಿತ್ತು. 2006ರಲ್ಲೇ ಜ್ಯೋತಿ ಗ್ರಾಮ ಯೋಜನೆಯಡಿ ಗುಜರಾತ್ ನಲ್ಲಿ ಜಾರಿಗೆ ತರಲಾಯಿತು. ಇದರಿಂದ ಗುಜರಾತ್ ನ ಗ್ರಾಮೀಣ ಬಾಗಕ್ಕೆ ಪ್ರತ್ಯೇಕ ಫೀಡರ್ ಮೂಲಕ ವಿದ್ಯುತ್ ಪೂರೈಸಲು ಸಾಧ್ಯವಾಯಿತು.

ಗರ್ವ್ (GARV) ಪೋರ್ಟಲ್
ಈ ಲೇಖನದ ಮೂಲಕ ಗರ್ವ್ (GARV) ಪೋರ್ಟಲ್ ನಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಮಾಹಿತಿ ವಿಶ್ಲೇಷಣೆ ಮಾಡಲಾಗುತ್ತಿದೆ. ನೀತಿ ನಿರೂಪಣೆಯ ಸಂಕೀರ್ಣ ಆಯಾಮಗಳನ್ನು ಈ ಪೋರ್ಟಲ್ ನಲ್ಲಿ ಗಮನಿಸಬಹುದು. ಈ ಯೋಜನೆಯ ಪ್ರಗತಿ ಬಗ್ಗೆ ಸಾರ್ವಜನಿಕ ಉತ್ತರದಾಯಿತ್ವ ಹಾಗೂ ಪಾರದರ್ಶಕತೆಯನ್ನು ಒದಗಿಸುವುದು ಉದ್ದೇಶ.

ಸ್ಮಾರ್ಟ್ ಮೊಬೈಲ್ ಫೋನ್ ಹಾಗೂ ಇಂಟರ್ ನೆಟ್ ಸಂಪರ್ಕ ಇರುವ ಯಾರೇ ವ್ಯಕ್ತಿ ಗ್ರಾಮೀಣ ವಿದ್ಯುದ್ದೀಕರಣದ ಪ್ರಗತಿ ಬಗ್ಗೆ ಮಾಹಿತಿ ತಿಳಿಯಬಹುದು. ವಿದ್ಯುದ್ದೀಕರಣವಾದ ಪ್ರತಿ ಗ್ರಾಮದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ವಿದ್ಯುತ್ ಸಂಪರ್ಕ ನೀಡಿದ ದಿನ, ಸ್ಥಳೀಯ ಲೈನ್ ಮೆನ್ ಮಾಹಿತಿ, ವಿದ್ಯುತ್ ಕಂಬ ನೆಟ್ಟ ಫೋಟೋ ಮುಂತಾದ ವಿವರಗಳು ದೊರೆಯುತ್ತವೆ.

ಇದರಿಂದ ಸರಾಸರಿ ಸಂಖ್ಯೆ ಹಾಗೂ ಒಟ್ಟಾರೆ ಆದ ಪ್ರಗತಿ ಬಗ್ಗೆ ಸರಕಾರ ಪರಿಶೀಲಿಸಲು ಅನುಕೂಲ ಆಗುತ್ತದೆ. ಹಲವು ಪತ್ರಕರ್ತರು ಹಾಗೂ ಸಂಶೋಧಕರು ಪೋರ್ಟಲ್ ನಲ್ಲಿ ಬಿಡುಗಡೆಯಾದ ಮಾಹಿತಿ ಜತೆಗೆ ವಾಸ್ತವದ ಲೆಕ್ಕಾಚಾರವನ್ನು ತಾಳೆ ಹಾಕಿ ನೋಡಲು ಪ್ರಯತ್ನ ಪಟ್ಟಿದ್ದಾರೆ.

ಅದೃಷ್ಟ ಏನೆಂದರೆ ಎಲ್ಲೆಲ್ಲಿ ವ್ಯತ್ಯಾಸ ಆಗಿದೆ ಅಂತಿತ್ತೋ ಅಲ್ಲೆ ಸರಕಾರವು ಅವುಗಳನ್ನು ಸರಿಪಡಿಸಿದೆ. ಇತ್ತೀಚೆಗೆ ಈ ಪೋರ್ಟಲ್ ನ ಮತ್ತಷ್ಟು ವಿಸ್ತರಿಸಲಾಯಿತು. ಆಗಿನಿಂದ ಗ್ರಾಮೀಣ ಭಾಗದ ಮನೆಮನೆಗಳಿಗೆ ನೀಡುವ ವಿದ್ಯುತ್ ಸಂಪರ್ಕದ ಮಾಹಿತಿಯನ್ನು ಕೂಡ ಒದಗಿಸಲಾಗುತ್ತಿದೆ.

ಸಾವಿರ ದಿನದ ಗುರಿಯ ಕಡೆಗೆ ಸ್ಥಿರವಾದ ಪ್ರಗತಿ
1000 ದಿನದಲ್ಲಿ 18452 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಗುರಿ ಮೇ 2018ಕ್ಕೆ ಪೂರ್ತಿಯಾಗುತ್ತದೆ. ಈ ವರೆಗೆ 13598 ಹಳ್ಳಿಗಳಿಗೆ (ಗುರಿಯ ಶೇ 74ರಷ್ಟು) ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಎನ್ ಡಿಎ ಸರಕಾರದ ವಿದ್ಯುದ್ದೀಕರಣ ಯೋಜನೆ ಅಡಿ ಆಗಿರುವ ಕೆಲಸ ಈ ಹಿಂದೆ ರಾಜೀವ್ ಗಾಂಧಿ ಹೆಸರಿನಲ್ಲಿ ಜಾರಿಗೆ ತಂದ ಯೋಜನೆಯಡಿ ಆಗಿರುವ ಸರಾಸರಿಗಿಂತ ತುಂಬ ಕಡಿಮೆ.

2005 ಹಾಗೂ 2012ರ ಮಧ್ಯೆ ದೇಶದಾದ್ಯಂತ 1 ಲಕ್ಷ ಹಳ್ಳಿಗಳ ವಿದ್ಯುದ್ದೀಕರಣ ಆಗಿತ್ತು. ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆ ಅಡಿ ಆದ ವಾರ್ಷಿಕ ಸರಾಸರಿ ಕೆಲಸ ಈ ಎರಡು ವರ್ಷದಲ್ಲಿ ಆಗಿರುವ ಕೆಲಸಕ್ಕಿಂತ ತುಂಬ ಹೆಚ್ಚು. ಈ ಎರಡೂ ಸಂಖ್ಯೆಗಳನ್ನು ಹೋಲಿಸುವುದಕ್ಕೆ ಸಾಧ್ಯವೇ ಇಲ್ಲ.

ಈ 18000 ಹಳ್ಳಿಗಳಿಗೆ ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯ ಆಗದಿರುವುದಕ್ಕೆ ಕೂಡ ಕಾರಣವಿದೆ. ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸವಾಲಿನ ಕೆಲಸವಾಗಿತ್ತು. ಉದಾಹರಣೆಗೆ, ವಿದ್ಯುತ್ ಸಂಪರ್ಕ ಇಲ್ಲದ 7200ಕ್ಕೂ ಹೆಚ್ಚು ಹಳ್ಳಿಗಳು ಎಡಪಕ್ಷಗಳ ಪ್ರಾಬಲ್ಯ ಇರುವ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ.

ಆ ಪೈಕಿ 5930 ಹಳ್ಳಿಗಳಿಗೆ ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ದೀನ್ ದಯಾಳ್ ವಿದ್ಯುದ್ದೀಕರಣ ಯೋಜನೆ ಅಡಿ ವಾರ್ಷಿಕ ಸರಾಸರಿ ಅನಿರೀಕ್ಷಿತವಲ್ಲ.

ವಿದ್ಯುತ್ ಪೂರೈಕೆಗೆ ಮೂಲಸೌಕರ್ಯ ಕಲ್ಪಿಸುವುದು ಮತ್ತು ಗ್ರಿಡ್ ಗೆ ಸಂಪರ್ಕ ಕಲ್ಪಿಸುವುದರ ಜತೆಗೆ ಸರಕಾರದ ಜವಾಬ್ದಾರಿ ಕೊನೆಯಾಗುವುದಿಲ್ಲ. ಗ್ರಾಮದ ವ್ಯಾಪ್ತಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಒಟ್ಟಾರೆ 17.9 ಕೋಟಿ ಮನೆಗಳ ಪೈಕಿ 13.4 ಕೋಟಿ ಮನೆಗಳಿಗೆ (ಶೇ 74) ಈ ವರೆಗೆ ಸಂಪರ್ಕ ಕಲ್ಪಿಸಲಾಗಿದೆ. ದೇಶದ 6.04 ಹಳ್ಳಿಗಳ ಪೈಕಿ 1.65 ಲಕ್ಷ ಹಳಿಗಳಲ್ಲಿ (ಶೇ 27) ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕಿಸಲಾಗಿದೆ.

ಪರಿಸಮಾಪ್ತಿ
ದಿನದ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಪೂರೈಸುವ ಕನಸು ಸಾಕಾರಗೊಳ್ಳುವುದಕ್ಕೆ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ನಿಧಾನವಾಗಿ ಹೆಚ್ಚಾಗಬೇಕು. ಪೂರೈಕೆ ಮೂಲಸೌಕರ್ಯ ಹೆಚ್ಚಿದಂತೆಯೇ ಬೇಡಿಕೆ ಸಹಜವಾಗಿ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಉತ್ಪಾದನೆಯೂ ಹೆಚ್ಚು ಮಾಡಬೇಕಾಗುತ್ತದೆ. ಒಂದು ಹಂತದ ನಂತರ ರಾಜ್ಯಗಳು ಜವಾಬ್ದಾರಿ ವಹಿಸಿಕೊಂಡ ಮೇ ಕೇಂದ್ರದ ಪಾತ್ರವು ಕಡಿಮೆ ಆಗುತ್ತದೆ.

ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರಮ ಹಾಕಬೇಕು. ಇತ್ತೀಚಿನ ಪ್ರಯತ್ನವಾಗಿ ಮೋದಿ ಸರಕಾರದ ಉದಯ್ (UDAY) ನಂಥ ಕಾರ್ಯಕ್ರಮಗಳು ಡಿಸ್ಕಾಂನ ಸಾಅಲ ಕಡಿಮೆ ಮಾಡುವ ಗುರಿ ಹೊಂದಿವೆ. ಈ ವಿಚಾರದಲ್ಲಿ ಅವು ತುಂಬ ಸಹಕಾರಿಯೂ ಹೌದು.

(ನಿತಿನ್ ಮೆಹ್ತಾ ರಣ್ ನೀತಿ ಕನ್ಸಲ್ಟಿಂಗ್ ಮತ್ತು ರೀಸರ್ಚ್ ನ ಕಾರ್ಯನಿರ್ವಹಣಾ ಪಾಲುದಾರ, ಪ್ರಣವ್ ಗುಪ್ತ ಸ್ವತಂತ್ರ ಸಂಶೋಧಕ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Electrifying Rural India?
English summary
In his second Independence Day address to the nation in 2015, Prime Minister Narendra Modi promised that the government would provide electricity to all 18,452 unelectrified villages in the country within 1000 days. What happened?
Please Wait while comments are loading...