ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ: ಓರ್ವ ಸಾವು
ನಿಜಾಮಾಬಾದ್, ಏಪ್ರಿಲ್ 22: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಮತ್ತೊಂದು ಎಲೆಕ್ಟ್ರಿಕಲ್ ವಾಹನ(ಇವಿ) ಬೆಂಕಿಗಾಹುತಿ ಘಟನೆ ನಡೆದಿದ್ದು, 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾನೆ. ಮಾತ್ರವಲ್ಲದೆ ಮನೆಯಲ್ಲಿ ಚಾರ್ಜಿಂಗ್‌ಗಾಗಿ ಪ್ಲಗ್ ಮಾಡಿದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು ಅವರ ಕುಟುಂಬದ ಮೂವರಿಗೆ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಇ-ಸ್ಕೂಟರ್ ಪ್ಯೂರ್ ಇವಿಗೆ ಸೇರಿದ್ದಾರೆ. ಇ-ಸ್ಕೂಟರ್ ಸ್ಪೋಟಗೊಂಡು ಬೆಂಕಿಗೆ ಜೀವ ಕಳೆದುಕೊಂಡ ಮೂರನೇ ಘಟನೆ ಇದಾಗಿದೆ. ಇಲ್ಲಿಯವರೆಗೆ ಒಂದು ಓಲಾ, ಎರಡು ಓಕಿನಾವಾ, ಮೂರು ಪ್ಯೂರ್ ಇವಿ ಮತ್ತು 20 ಜಿತೇಂದ್ರ ಇವಿ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ.

ಏಪ್ರಿಲ್ 20 ರಂದು ಈ ಘಟನೆ ನಡೆದಿದ್ದು, ಕೊಠಡಿಯೊಂದರಲ್ಲಿ ಚಾರ್ಜ್‌ನಲ್ಲಿ ಇರಿಸಲಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಡಿಟ್ಯಾಚೇಬಲ್ ಬ್ಯಾಟರಿಯು ಸ್ಪೋಟಗೊಂಡು ಒಡೆದಿದ್ದು, ಇದರ ಪರಿಣಾಮವಾಗಿ ಮಲಗಿದ್ದ ಮೂವರಿಗೆ ಸುಟ್ಟ ಗಾಯಗಳಾಗಿವೆ. ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಮತ್ತೊಬ್ಬ ಕುಟುಂಬದ ಸದಸ್ಯರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣ ಗಾಯಗೊಂಡವರನ್ನು ನಿಜಾಮಾಬಾದ್ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೃದ್ಧನ ಸ್ಥಿತಿ ಗಂಭೀರವಾದ ನಂತರ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ಉಲ್ಲೇಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಪುತ್ರನ ದೂರಿನ ಆಧಾರದ ಮೇಲೆ, ಎಲೆಕ್ಟ್ರಿಕ್ ವಾಹನ ಕಂಪನಿಯ ವಿರುದ್ಧ ಐಪಿಸಿಯ ಸೆಕ್ಷನ್ 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು 337 (ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications