ಅಸಾರಾಮ್ ಜತೆ ಮೋದಿ ವಿಡಿಯೋ ಹಂಚಿದ ಕಾಂಗ್ರೆಸ್

ಬೆಂಗಳೂರು, ಏಪ್ರಿಲ್ 26: ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಟ್ವೀಟ್ ವಾರ್ ಮುಂದುವರೆದಿದೆ. ವೈಯಕ್ತಿಕ ನಿಂದನೆ, ದ್ವೇಷ, ಕುಹಕವೇ ಅಧಿಕವಾಗಿದ್ದು, ಸಾರ್ವಜನಿಕರಿಗೆ ಅಸಹ್ಯ ಹುಟ್ಟಿಸುತ್ತಿದೆ.

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯ ಘೋಷಿತ ದೇವಮಾನವ ಅಸಾರಾಮ್ ಬಾಪು ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.

ಜೋಧಪುರ್ ವಿಶೇಷ ನ್ಯಾಯಾಲಯದಲ್ಲಿ ಆದೇಶ ಹೊರ ಬಂದ ಬಳಿಕ, ಕಾಂಗ್ರೆಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಸಾರಾಮ್ ಬಾಪು ಇರುವ ಹಳೆ ವಿಡಿಯೋವೊಂದನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿದೆ.

ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಸಾರಾಮ್ ಬಾಪು ಅವರಿಂದ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. "A man is known by the company he keeps" - Aesop's fables, along with #AsaramVerdict. ಎಂಬ ವಾಕ್ಯದೊಂದಿಗೆ ಟ್ವೀಟ್ ಮಾಡಲಾಗಿದೆ. ಆದರೆ, ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿರುವ ಸೆಲೆಬ್ರಿಟಿಗಳು, ಸಾರ್ವಜನಿಕರು, ಕಾಂಗ್ರೆಸ್ಸಿಗರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಟ್ವೀಟ್ ವಾರ್

ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಟ್ವೀಟ್ ವಾರ್

ಸ್ವಯ ಘೋಷಿತ ದೇವಮಾನವ ಅಸಾರಾಮ್ ಬಾಪು ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಜೋಧಪುರ್ ವಿಶೇಷ ನ್ಯಾಯಾಲಯದಲ್ಲಿ ಆದೇಶ ಹೊರ ಬಂದ ಬಳಿಕ, ಕಾಂಗ್ರೆಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಸಾರಾಮ್ ಬಾಪು ಇರುವ ಹಳೆ ವಿಡಿಯೋವೊಂದನ್ನು ಹಂಚಿಕೊಂಡು ಗೇಲಿ ಮಾಡಲು ಆರಂಭಿಸುತ್ತಿದ್ದಂತೆ, ಮೋದಿ ಅಭಿಮಾನಿಗಳು, ಬಿಜೆಪಿಯವರು ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಅಸಾರಾಮ್ ಬಾಪು ಅವರಿಂದ ಆಶೀರ್ವಾದ

"A man is known by the company he keeps" - Aesop's fables, along with #AsaramVerdict. ಎಂಬ ವಾಕ್ಯದೊಂದಿಗೆ ಟ್ವೀಟ್ ಮಾಡಲಾಗಿದೆ.

ಯಾವ ಕಾಲದ ವಿಡಿಯೋ ಇದು

ಯಾವ ಕಾಲದ ವಿಡಿಯೋ ಇದು

ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಭಾಷಣ ಮಾಡುತ್ತಾ, ನಾನು ಬಾಪು ಅವರ ಆಶೀರ್ವಾದ ಪಡೆಯುತ್ತಿರುವುದು ನನ್ನ ಸುದೈವ, ಎಂದು ಹೇಳಿ ಅಸಾರಾಮ್ ಅವರನ್ನು ಅಪ್ಪಿಕೊಳ್ಳುವ ದೃಶ್ಯಗಳಿವೆ. ಆ ಕಾಲದಲ್ಲಿ ಅಸಾರಾಮ್ ಅವರು ಇನ್ನೂ ಹೆಚ್ಚು ಜನಪ್ರಿಯಗೊಂಡಿರಲಿಲ್ಲ ಹಾಗೂ ಯಾವುದೇ ಪ್ರಕರಣಗಳು ಅವರ ಮೇಲಿರಲಿಲ್ಲ.

ನಟ, ನಿರ್ದೇಶಕ ಫರ್ಹಾನ್ ಅಖ್ತರ್

ಹಿಂದಿ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಅವರು, ತಕ್ಷಣವೇ ಈ ವಿಡಿಯೋಗೆ ಪ್ರತಿಕ್ರಿಯಿಸಿ, ಅಸಾರಾಮ್ ಅವರ ಜತೆ ಎಲ್ಲಾ ರಾಜಕೀಯ ನಾಯಕರು ಕಾಣಿಸಿಕೊಂಡಿದ್ದಾರೆ. ಜತೆಗೆ ಕಾಣಿಸಿಕೊಂಡ ತಕ್ಷಣ, ವೇದಿಕೆ ಹಂಚಿಕೊಂಡ ತಕ್ಷಣ ಈ ರೀತಿ ಅಗೌರವವಾಗಿ ಟ್ವೀಟ್ ಮಾಡುವುದು ಸರಿಯಲ್ಲ. ಈ ವಿಡಿಯೋ ಕಾಲದಲ್ಲಿ ಅಸಾರಾಮ್ ಇನ್ನೂ ದೋಷಿಯಾಗಿರಲಿಲ್ಲ. ಕಾನೂನಿಗೆ ಬೆಲೆ ಕೊಡಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+