ಚುಟುಕು: ವೈಎಸ್ಸಾರ್ ಶಾಸಕಿ ಅಪಘಾತದಲ್ಲಿ ದುರ್ಮರಣ
ಬೆಂಗಳೂರು, ಏ.24: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
2.40: ವೈಎಸ್ಸಾರ್ ಕಾಂಗ್ರೆಸ್ ಶಾಸಕಿ, ಪಕ್ಷದ ವಕ್ತಾರೆ ಶೋಭಾ ನಾಗಿರೆಡ್ಡಿ ಅವರು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಗುರುವಾರ ಬೆಳಗ್ಗೆ ಚುನಾವಣಾ ಪ್ರಚಾರ ಮುಗಿಸಿ ಹಿಂತಿರುಗುತ್ತಿದ್ದರು.
2.15: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಮೂರು ಚುನಾವಣಾ ಪ್ರಚಾರ ನಿರತರಾಗಿದ್ದಾರೆ.

11.45: ನಾಮಪತ್ರ ಸಲ್ಲಿಸಿದ ನಂತರ ಮೋದಿ ಅವರು ಸಹರ್ಷಾ, ಮಧುಬಾನಿ ಹಾಗೂ ದಭಾಂಗ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
11.30: ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಹಾಗೂ ಸೋಮನಾಥ್ ಭಾರ್ತಿ ಅವರು ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
11.25: ಚೆನ್ನೈನಲ್ಲಿ ಮೂರು ಐಟಿ ಕಂಪನಿಗಳ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ. ಮತದಾನದ ದಿನ(ಏ.24) ಮೂರು ಕಂಪನಿಗಳು ರಜೆ ಘೋಷಿಸಿರಲಿಲ್ಲ ಎಂಬ ಆರೋಪ. ಸುಮಾರು 3,500 ಉದ್ಯೋಗಿಗಳನ್ನು ಬಲವಂತವಾಗಿ ರಜೆಯ ಮೇಲೆ ಹೊರಕ್ಕೆ ಕಳಿಸಲಾಗಿದೆ.
11.00: 11 ರಾಜ್ಯಗಳ 117 ಕ್ಷೇತ್ರ ಹಾಗೂ 1 ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಗುರುವಾರ ಜಾರಿಯಲ್ಲಿದೆ.

10.45: ದೆಹಲಿ ಮಾಜಿ ಕಾನೂನು ಸಚಿವ ಆಮ್ ಆದ್ಮಿ ಪಕ್ಷದ ಮುಖಂಡ ಸೋಮನಾಥ್ ಭಾರ್ತಿ ಮೇಲಿನ ಹಲ್ಲೆಯನ್ನು ರವಿಶಂಕರ್ ಗುರೂಜಿ ಖಂಡಿಸಿದ್ದಾರೆ.
10.30: ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಮೋದಿ ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇದರ ಜತೆಗೆ 6ನೇ ಹಂತದ ಮತದಾನ ಕ್ಷೇತ್ರದ ಜನತೆಗೆ ಸಂದೇಶ ನೀಡಿದ್ದು ತಪ್ಪದೇ ವೋಟ್ ಮಾಡಿ ಎಂದಿದ್ದಾರೆ.
Urging all those voting across 117 Lok Sabha seats & Assembly by-elections in Bihar, MP & TN to vote in record numbers.
— Narendra Modi (@narendramodi) April 24, 2014 10.20: ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಸಿಜೆಎಂ ಕೋರ್ಟಿಗೆ ಶರಣಾಗತರಾಗಿದ್ದಾರೆ.

10.15: ಮುಂಬೈನಲ್ಲಿ ನಟಿ ವಿದ್ಯಾಬಾಲನ್, ಅಮೀರ್ ಖಾನ್, ರಿಲಯನ್ಸ್ ಸಂಸ್ಥೆ ಅನಿಲ್ ಅಂಬಾನಿ ವೋಟ್ ಮಾಡಿದ ಮೊದಲಿಗರು.
9.45: ಚೆನ್ನೈನಲ್ಲಿ ರಜನಿಕಾಂತ್, ಕಮಲ್ ಹಾಸನ್, ಅಜಿತ್, ವೋಟ್ ಮಾಡಿದ್ದಾರೆ.
* ಸೇಲಂಪೇಟ್ ನಲ್ಲಿ ಕಮಲ್ ಹಾಸನ್ ಅವರು ಗೌತಮಿ ಅವರ ಜತೆಗೆ ಬಂದು ಮತದಾನ ಮಾಡಿದ್ದರೆ, ರಜನಿ ಕಾಂತ್ ಹಾಗೂ ಅವರ ಕುಟುಂಬ ಸ್ಟೆಲ್ಲಾ ಮೇರಿ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. [ಚಿತ್ರಗಳನ್ನು ಇಲ್ಲಿ ನೋಡಿ]












Click it and Unblock the Notifications