ಮೋದಿಗೆ ಮಾತ್ರ ಪ್ರಧಾನಿ ಪಟ್ಟ: ರಾಜನಾಥ್ ಸಿಂಗ್
ಬೆಂಗಳೂರು, ಏ.20: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.45: ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುತ್ತಾರೆ. ಇದರಲ್ಲಿ ಯಾವ ಸಂಶಯವೂ ಬೇಡ: ರಾಜನಾಥ್ ಸಿಂಗ್ ಘೋಷಣೆ
12.30: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಸುಪ್ರಿಯಾ ಸುಳೆ ಅವರಿಗೆ ಮತ ಹಾಕದಿದ್ದರೆ ರೈತರಿಗೆ ವಿದ್ಯುತ್ ಹಾಗೂ ನೀರು ನೀಡುವುದಿಲ್ಲ ಎಂದು ಅಜಿತ್ ಬೆದರಿಕೆ ಹಾಕಿರುವ ಆರೋಪ ಹೊತ್ತಿದ್ದಾರೆ.

10.35: ಜೆಎಂಎಂ ಸೇರಿದಂತೆ 10 ಪಕ್ಷಗಳಿಗೆ ನೀಡಿದ್ದ ತೆರಿಗೆ ವಿನಾಯತಿಯನ್ನು ರದ್ದುಗೊಳಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.
10.30: ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ಖಂಡನೆ ವ್ಯಕ್ತಪಡಿಸಿದೆ. ದೇಶ ದುರಂತದ ಸ್ಥಿತಿ ತಲುಪಲಿದೆ ಎಂದು ಕಾಂಗ್ರೆಸ್ ಹೇಳಿದೆ.
10.15: ಮೋದಿ ಸಮರ್ಥನೆ ಮಾಡುವ ಭರದಲ್ಲಿ ಗಿರಿರಾಜ್ ಸಿಂಗ್ ಅವರು ಚುನಾವಣಾ ಪ್ರಚಾರ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಕೆ ನೀಡಿದ್ದರು.













Click it and Unblock the Notifications