ಚುಟುಕು: ಮೋದಿ ಬೆಂಬಲಿಸಿದ ಸಾಹಿತಿಗೆ ಬೆದರಿಕೆ ಕರೆ
ಬೆಂಗಳೂರು, ಏ.13: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.50: ಚೆನ್ನೈನಲ್ಲಿ ಮೋದಿ ಹವಾ ಸಕತ್ ಆಗಿದೆ ಎಂದು ಕನ್ನಡ ಚಿತ್ರನಟ ಜಗ್ಗೇಶ್ ಹೇಳಿಕೊಂಡಿದ್ದಾರೆ. ಅವರಿಗೆ ತಮಿಳು ನಟರೊಬ್ಬರು ಈ ಬಗ್ಗೆ ಹೇಳಿದರು ಎಂದು ಟ್ವೀಟ್ ಮಾಡಿದ್ದಾರೆ.
Mrng I clld Tamil actor frnds an asked about namo trend they say he is Dool Macha among youngster:)) I was trilled hats of modi uumma
— jaggesh (@jaggesh2) April 13, 2014 11.45: ಈ ನಡುವೆ ಚೆನ್ನೈಗೆ ಮೋದಿ ಆಗಮನಕ್ಕೂ ಮುನ್ನ ಮೋದಿ ಬೆಂಬಲಿಸಿರುವ ತಮಿಳಿನ ಜನಪ್ರಿಯ ಸಾಹಿತಿ ಆರ್ ಎನ್ ಜೋ ಡಿಕ್ರೂಜ್ ಅವರಿಗೆ ಬೆದರಿಕೆ ಕರೆಗಳು, ದ್ವೇಷ ಪೂರಿತ ಇಮೇಲ್ ಗಳು ಬರುತ್ತಿವೆಯಂತೆ. ಗುಜರಾತ್ ಸರ್ಕಾರದ ಅಭಿವೃದ್ಧಿಯನ್ನು ಡಿಕ್ರೂಜ್ ಹೊಗಳಿ, ಮೋದಿಗೆ ಬೆಂಬಲ ಸೂಚಿಸಿದ್ದರು.
10.15: ತಮಿಳುನಾಡಿನಲ್ಲಿ ಭಾರತ್ ವಿಜಯ್ ಸಮಾವೇಶ ನಡೆಸಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಜತೆಗೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಪಾಲ್ಗೊಳ್ಳುತ್ತಿದ್ದಾರೆ. ತಮಿಳುನಾಡಿನ ಎಲ್ಲಾ ಸಮಾವೇಶದ ಸಂದರ್ಭದಲ್ಲಿ ಅಡ್ವಾಣಿ ಜತೆಗಿರುವ ಸಾಧ್ಯತೆಯಿದೆ.

10.00: ಮೋದಿ ಅವರು ಭಾನುವಾರ ರಾತ್ರಿ ವೇಳೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಲಿದ್ದಾರೆ.
9.45: ಮುಜಾಫರ್ ನಗರದಲ್ಲಿ ಮೋದಿ ಆಪ್ತ ಅಮಿತ್ ಶಾ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
9.30: ಮೋದಿ ಅವರು ಭಾನುವಾರ ಕರ್ನಾಟಕ ಪ್ರವಾಸ ಮಾಡಲಿದ್ದು, ಚಿಕ್ಕಬಳ್ಳಾಪುರ, ಹಾವೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮತಯಾಚಿಸಲಿದ್ದಾರೆ.
9.00: ಶನಿವಾರ ಲಾಲೂ ಪ್ರಸಾದ್ ಅವರ ಪತ್ನಿ ರಾಬ್ರಿ ದೇವಿ ಅವರು ನಾಮಪತ್ರ ಸಲ್ಲಿಸಿದ್ದಾರೆ.


Click it and Unblock the Notifications
